ಬುಧವಾರ, ಜನವರಿ 19, 2022
27 °C

50 ವರ್ಷಗಳ ಹಿಂದೆ: ಸೋಮವಾರ 01.11.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಕೂಡಲೆ ರಾಜ್ಯಮಟ್ಟದಲ್ಲೂ ಕನ್ನಡ

ಬೆಂಗಳೂರು, ಅ. 31– ಆಡಳಿತಾನುಕೂಲ ದೃಷ್ಟಿಯಿಂದ ಕನ್ನಡವನ್ನು ಉಪವಿಭಾಗ ಮಟ್ಟದಲ್ಲಿ ಜಾರಿಗೆ ತರುವುದರ ಜೊತೆಗೆ ಕೂಡಲೆ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲೂ ಜಾರಿಗೆ ತರಬೇಕೆಂದು ರಾಜ್ಯದ ಕನ್ನಡ ಭಾಷಾ ಸಮಿತಿ ಶಿಫಾರಸು ಮಾಡಿದೆ.

ಕನ್ನಡವನ್ನು ಉಪ ವಿಭಾಗ ಹಾಗೂ ಕ್ರಮೇಣ ಎಲ್ಲ ಹಂತಗಳಲ್ಲಿ ಜಾರಿಗೆ ತರಲು ಅಗತ್ಯವಾದ ಕ್ರಮಗಳನ್ನು ಸೂಚಿಸಲು ಸರ್ಕಾರ ನೇಮಿಸಿದ್ದ ಭಾಷಾ ಸಮಿತಿಯ ಅಂತಿಮ ವರದಿಯನ್ನು ಸರ್ಕಾರ ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆ ಮಾಡಿದೆ.

ತಾತ್ಸಾರ ತೋರುವ ಅಧಿಕಾರಿಗಳ ದಂಡನೆಗೆ ಸಲಹೆ

ಬೆಂಗಳೂರು, ಅ. 31– ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತರುವುದರಲ್ಲಿ ತಾತ್ಸಾರ ತೋರಿಸುವ ಅಧಿಕಾರಿಗಳ
ವಿರುದ್ಧ ಕ್ರಮ ಜರುಗಿಸಬೇಕೆಂದು ಕನ್ನಡ ಭಾಷಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು