ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಹಣದ ಥೈಲಿ ಹೊಟ್ಟೆ ತುಂಬಿಸದು

Last Updated 9 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಗಾಗಿ ರಾಜ್ಯದ 20 ಸಾವಿರ ಮರಗಳಿಗೆ ಆಪತ್ತು ಎಂಬ ಸುದ್ದಿ ಓದಿ (ಪ್ರ.ವಾ., ನ. 11) ದಿಗ್ಭ್ರಮೆ ಆಯಿತು. ಇನ್ನು ನೆರೆ ರಾಜ್ಯಗಳಲ್ಲಿ ಎಷ್ಟು ಮರಗಳು ಬಲಿಯಾಗಬೇಕೋ ಏನೋ.

ವಾಹನ ಸಂಚಾರಕ್ಕೆ, ಕೈಗಾರಿಕೆಗಳಿಗೆ, ಗೋದಾಮುಗಳಿಗೆ, ಕಟ್ಟಡಗಳಿಗೆ ಎಂದು ವಿವಿಧೋದ್ದೇಶಗಳಿಗೆ ಕೃಷಿಭೂಮಿ ಅಥವಾ ಅರಣ್ಯದ ಹಸಿರನ್ನು ಹಾಳುಗೆಡವುತ್ತಾ ಸಾಗಿದರೆ ಮುಂದೆ ಭೂಮಿಯ ಗತಿ ಏನು? ಈಗಾಗಲೇ ಕೃಷಿಯಿಂದ ವಿಮುಖರಾಗಿ ನಗರಕ್ಕೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅಂತಹವರನ್ನು ಗುರುತಿಸಿ ಹೆಚ್ಚಿನ ಅನುಕೂಲ ಮಾಡಿಕೊಟ್ಟು ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಬೇಕಾದ ಸರ್ಕಾರವೇ ಕೃಷಿ ಜಮೀನನ್ನು ವಶಪಡಿಸಿಕೊಳ್ಳುತ್ತಾ ಸಾಗಿದರೆ, ಮುಂದೊಂದು ದಿನ ತುತ್ತು ಅನ್ನಕ್ಕಾಗಿ ಪರದಾಡಬೇಕಾದ ಸ್ಥಿತಿ ಎದುರಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ಮತ್ತು ಸಮಾಜ ಎಚ್ಚೆತ್ತುಕೊಳ್ಳಲಿ. ಕೇವಲ ಹಣದ ಥೈಲಿ ಹೊಟ್ಟೆ ತುಂಬಿಸದು.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT