ಗುರುವಾರ , ಅಕ್ಟೋಬರ್ 1, 2020
28 °C

ವಾಚಕರ ವಾಣಿ | ಹಿರಿಯ ನಾಗರಿಕರಿಗೆ ಸಂತಸ ತಂದ ಅಜ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 110 ವರ್ಷದ ಅಜ್ಜಿ ಸಿದ್ಧಮ್ಮ

ಕೊರೊನಾ ಸೋಂಕಿಗೊಳಗಾಗಿ ಚಿತ್ರದುರ್ಗದ ಕೋವಿಡ್–19 ಆಸ್ಪತ್ರೆಗೆ ದಾಖಲಾಗಿದ್ದ 110 ವರ್ಷದ ಅಜ್ಜಿ ಸಿದ್ಧಮ್ಮ ಗುಣಮುಖರಾಗಿ ಮನೆಗೆ ಮರಳಿದ್ದಾರೆ (ಪ್ರ.ವಾ., ಆ. 2). ಈ ಸುದ್ದಿಯು ಹಿರಿಯ ನಾಗರಿಕರಿಗೆ ಅತ್ಯಂತ ಸಂತಸವನ್ನು ಉಂಟುಮಾಡಿದೆ. ಹಿರಿಯ ನಾಗರಿಕರು ಮನೆಯ ಒಳಗೇ ಇರಬೇಕು ಎಂಬ ಎಚ್ಚರಿಕೆಯನ್ನು ಕೇಳಿಕೇಳಿ ಸಾಕಾಗಿದ್ದವರಿಗೆ ದೂರದಲ್ಲೊಂದು ಮರೀಚಿಕೆ ಕಂಡಂತೆ ಈ ಸುದ್ದಿ ಭಾಸವಾಗುತ್ತದೆ.

ಕೊರೊನಾ ಕುರಿತು ಮಾಧ್ಯಮಗಳಲ್ಲಿ ಆತಂಕಕಾರಿ ಸುದ್ದಿಗಳು ಪ್ರಕಟವಾಗುತ್ತಿರುವುದರ ನಡುವೆ ಇಂತಹ ಸುದ್ದಿಗಳು ಮನಸ್ಸಿಗೆ ಶಾಂತಿಯನ್ನು ನೀಡುತ್ತವೆ. ಜೊತೆಗೆ ಬದುಕು ಇನ್ನೂ ಇದೆ ಎಂಬ ಭಾವವನ್ನು ಮೂಡಿಸುತ್ತವೆ. ಇಂತಹ ಸುದ್ದಿಗಳು ಹೆಚ್ಚುಹೆಚ್ಚು ಪ್ರಕಟವಾಗಲಿ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು