ಬಾಲಗಂಗಾಧರ ತಿಲಕರು ಪ್ರಾರಂಭಿಸಿದ ಸಾರ್ವಜನಿಕ ಗಣೇಶೋತ್ಸವವನ್ನು 128 ವರ್ಷಗಳಿಂದ ಗಣೇಶ ಮಂಡಳಿಗಳು ಒಂದು ಸಾಂಸ್ಕೃತಿಕ ಪರಂಪರೆಯಾಗಿ ಉಳಿಸಿಕೊಂಡು ಬಂದಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಅದ್ಧೂರಿ ಉತ್ಸವವಾಗಿ ಮಾತ್ರ ಉಳಿದಿದೆ. ಕೆಲವು ಗಣೇಶ ಮಂಡಳಿಗಳಷ್ಟೇ ರಾಷ್ಟ್ರಪ್ರೇಮ, ಧರ್ಮ ಜಾಗೃತಿ, ಪರಂಪರೆ, ಸಂಸ್ಕೃತಿ, ಕಲೆ, ಸಮಾಜ ಸೇವೆಯಲ್ಲಿ ತೊಡಗಿವೆ. ಹಾಗಾಗಿ ಗಣೇಶ ಮಂಡಳಿಗಳು ಉತ್ಸವಕ್ಕೆ ಮಾತ್ರ ಸೀಮಿತವೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.

ರಾಜ್ಯದಲ್ಲಿ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಒಂದು ಲಕ್ಷಕ್ಕೂ ಅಧಿಕ ಗಣೇಶ ಮಂಡಳಿಗಳಿವೆ. ಇವು ಮನಸ್ಸು ಮಾಡಿದರೆ ಅದ್ವಿತೀಯವಾದುದನ್ನು ಸಾಧಿಸಿ ಸಮಾಜ ಮತ್ತು ರಾಷ್ಟ್ರಕ್ಕೆ ಕೊಡುಗೆ ನೀಡಬಹುದು. ಉತ್ಸವದ ಸಮಯ ಮಾತ್ರವಲ್ಲದೆ ಉಳಿದ ಸಮಯದಲ್ಲೂ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು. ದೇವಸ್ಥಾನಗಳ ಶುಚಿತ್ವ, ಧರ್ಮಶಿಕ್ಷಣ, ಮರಗಿಡಗಳನ್ನು ನೆಟ್ಟು ಪೋಷಿಸುವುದು, ಬಡ ವಿದ್ಯಾರ್ಥಿಗಳಿಗೆ ನೆರವು, ರಕ್ತದಾನ ಶಿಬಿರ, ಶಾಸ್ತ್ರೀಯ ಕಲೆಗಳನ್ನು ಕಲಿಸಲು ಪ್ರೋತ್ಸಾಹ, ಕ್ರಾಂತಿಕಾರಿಗಳ ಹುತಾತ್ಮ ದಿನ ಆಚರಣೆ, ಗೋಸೇವೆ, ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗದಂತಹ ಸಮಯದಲ್ಲಿ ಸಮಾಜದ ನೆರವಿಗೆ ನಿಂತು ಮಾದರಿಯಾಗಬೇಕು. ಈ ಬಾರಿ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸುವುದರೊಂದಿಗೆ, ಲಸಿಕೆ ಅಭಿಯಾನ ಆಯೋಜಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ತಾವು ಸದಾಸಿದ್ಧ ಎಂಬ ಸಂದೇಶ ನೀಡಬೇಕು.

-ನಾ.ರ.ಜಯಂತ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.