ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸರ್ಕಾರಿ ನೌಕರಿ: ಮನೋಭಾವ ಬದಲಾಗಲಿ

Last Updated 16 ಮೇ 2022, 19:45 IST
ಅಕ್ಷರ ಗಾತ್ರ

ಸರ್ಕಾರಿ ಇಲಾಖೆಗಳು ಇರುವುದು ಜನರಿಗೆ ಸೇವೆ ಒದಗಿಸಲು ಮತ್ತು ಅವರ ಅಗತ್ಯಗಳನ್ನು ಪೂರೈಸಲು. ಆದರೆ ಕಾಲಕ್ರಮೇಣ ಆ ಸೇವಾ ಮನೋಭಾವ ಕರಗಿಹೋಗಿ, ನೌಕರರ ಹಣ ಗಳಿಕೆಯು ಪ್ರಧಾನ ಆಗತೊಡಗಿದೆ. ಸೇವಾ ಭದ್ರತೆಗಾಗಿ, ಆರ್ಥಿಕವಾಗಿ ಸುಸ್ಥಿತಿಗೆ ಬರಲು ಸರ್ಕಾರಿ ನೌಕರಿ ಬೇಕು ಎಂಬ ಸ್ಥಿತಿ ಈಗ ಇದೆ. ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳೆಲ್ಲರೂ ಹೀಗೇ ಆಲೋಚಿಸಿದರೆ ಸರ್ಕಾರಿ ಸೇವೆ ಎಂಬುದು ಸಮಾಜದ ಪಾಲಿಗೆ ನಿಷ್ಪ್ರಯೋಜಕವಾಗುತ್ತದೆ. ಆದ್ದರಿಂದ ಈಗಿನ ಯುವಕ, ಯುವತಿಯರಲ್ಲಿ ನಾವು ಬೇರೂರಿಸಬೇಕಾಗಿರುವುದು ಸರ್ಕಾರಿ ಸೇವೆಯ ಪರಿಕಲ್ಪನೆಯನ್ನೇ ವಿನಾ ಸರ್ಕಾರಿ ಕೆಲಸದ ಬಗೆಗಿನ ವ್ಯಾಮೋಹವನ್ನಲ್ಲ.

-ರಾಕೇಶ್ ಎನ್.ಎಸ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT