ಮಂಗಳವಾರ, ಆಗಸ್ಟ್ 16, 2022
21 °C

ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಿರಿಯರ ಮನೆ’ ಎಂದೇ ಕರೆಯಲಾಗುವ ರಾಜ್ಯ ವಿಧಾನ ಪರಿಷತ್ತಿನಲ್ಲಿ ಮಂಗಳವಾರ ನಡೆದ ಘಟನೆ ತೀರಾ ದುರದೃಷ್ಟಕರ. ಪರಿಷತ್ ಸಭಾಪತಿ ಕಾಂಗ್ರೆಸ್‌ನ ಕೆ.ಪ್ರತಾಪಚಂದ್ರ ಶೆಟ್ಟಿ ಅವರ ವಿರುದ್ಧ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವು ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಪಟ್ಟಂತೆ ಸದನದಲ್ಲಿ ನಡೆದ ಮಾರಾಮಾರಿ, ನೂರು ವರ್ಷಕ್ಕೂ ಅಧಿಕ ಇತಿಹಾಸ ಹೊಂದಿರುವ ರಾಜ್ಯ ವಿಧಾನ ಪರಿಷತ್ತಿನ ಗೌರವ, ಘನತೆಯನ್ನು ಮಣ್ಣುಪಾಲು ಮಾಡಿದೆ.

ಕೆಲವು ಸದಸ್ಯರು ಸಭಾಪತಿಯವರ ಪ್ರವೇಶದ ಬಾಗಿಲನ್ನು ಒದ್ದ ಘಟನೆ, ಅವರು ಪರಿಷತ್ತನ್ನು ಪ್ರವೇಶಿಸದಂತೆ ತಡೆದದ್ದು, ಉಪಸಭಾಪತಿ ಧರ್ಮೇಗೌಡರನ್ನು ಸಭಾಧ್ಯಕ್ಷ ಪೀಠದಿಂದ ದೈಹಿಕವಾಗಿ ಎತ್ತಿ ಹೊರಗೆ ತೆಗೆದುಕೊಂಡು ಹೋದದ್ದು ತೀವ್ರ ಖಂಡನೀಯ. ಇಷ್ಟೆಲ್ಲ ಅವಾಂತರಗಳಿಗೂಅಲ್ಲೋಲಕಲ್ಲೋಲಕ್ಕೂ ರಾಜ್ಯದ ಮೂರೂ ಪ್ರಧಾನ ಪಕ್ಷಗಳಿಗೆ ಸೇರಿದ ಕೆಲವು ಸದಸ್ಯರೇ ಕಾರಣರಾಗಿದ್ದಾರೆ.

ಈ ಘಟನೆ ಪ್ರಜಾಪ್ರಭುತ್ವಕ್ಕೆ ಬಗೆದ ದ್ರೋಹವಾಗಿದೆ. ಈ ಸದಸ್ಯರು ತಮ್ಮ ನಡವಳಿಕೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

-ಕೆ.ವಿ.ವಾಸು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು