ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋರಣೆ ಬದಲಾಗಲಿ

ಅಕ್ಷರ ಗಾತ್ರ

ಕೋವಿಡ್-19 ಸಂಕಷ್ಟದ ಕಾಲದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಚಾಲಕರು ಮತ್ತು ನಿರ್ವಾಹಕರು ಶ್ಲಾಘನೀಯ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲ ಚಾಲಕರು ಮತ್ತು ನಿರ್ವಾಹಕರ ನಿರ್ಲಕ್ಷ್ಯತನದಿಂದ ವೃದ್ಧ ಪ್ರಯಾಣಿಕರಿಗೆ, ಒಂಟಿಯಾಗಿ ಪ್ರಯಾಣಿಸುವ ಮಕ್ಕಳಿಗೆ ಅನನುಕೂಲವಾಗುತ್ತಿದೆ. ಕೆಲವು ಬಸ್‌ಗಳಲ್ಲಿ ಮುಂದಿನ ಫಲಕದಲ್ಲಿ ಒಂದು ಊರಿನ ಹೆಸರಿದ್ದರೆ ಹಿಂದಿನ ಫಲಕದಲ್ಲಿ ಮಗದೊಂದು ಊರಿನ ಹೆಸರು ಇರುತ್ತದೆ.

ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಲಬುರ್ಗಿಯಿಂದ ಯಾದಗಿರಿ ನಗರಕ್ಕೆ ತೆರಳುತ್ತಿದ್ದ ಬಸ್‌ನ ಮುಂದೆ ಕಲಬುರ್ಗಿ- ಯಾದಗಿರಿ ಎಂಬ ಫಲಕ ಸರಿಯಾಗಿತ್ತು. ಆದರೆ ಹಿಂದಿನ ಫಲಕದಲ್ಲಿ ಬೆಂಗಳೂರು- ಬಳ್ಳಾರಿ- ಶಹಾಪೂರ ಎಂದಿತ್ತು. ಸಾರಿಗೆ ನಿಗಮಗಳ ಬಸ್ ಚಾಲಕರು ಮತ್ತು ನಿರ್ವಾಹಕರ ‘ಹೇಗಿದ್ದರೂ ನಡೆಯುತ್ತದೆ’ ಎಂಬ ಇಂತಹ ಧೋರಣೆ ಬದಲಾಗಬೇಕು.

- ಸಿದ್ಧು ಟಿ.,ಯಡ್ರಾಮಿ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT