ಬಾಲ್ಯದಲ್ಲಿ ನಾವು ಬೇಸಿಗೆ ರಜೆ ಕಳೆಯಲು ಬೇರೆ ಊರುಗಳಿಗೆ ಹೋಗಿ ಸ್ವಗ್ರಾಮಕ್ಕೆ ಮರಳುವಾಗ, ನಮ್ಮ ಹಳ್ಳಿ ಹತ್ತಿರವಾಗಿದೆ ಎಂದು ಬಸ್ಸಿನ ಕಿಟಕಿ ನೋಡದೇ ತಿಳಿಯುತ್ತಿದ್ದೆವು. ಹೇಗೆಂದರೆ, ಬಸ್ಸಿನೊಳಗೆ ಕವಿಯುತ್ತಿದ್ದ ಕತ್ತಲಿನಿಂದ! ಬಸ್ಸಿನೊಳಗೆ ಇಂತಿಷ್ಟು ಅವಧಿಗೆ ಕತ್ತಲು ಕವಿಯಿತೆಂದರೆ ನಮ್ಮ ಮೈ ಮನಗಳಲ್ಲಿ ಬೆಳಕು ಮೂಡುತ್ತಿತ್ತು. ಅಷ್ಟಕ್ಕೂ ಈ ಕತ್ತಲೆಂದರೆ, ರಸ್ತೆಗಳ ಅಕ್ಕಪಕ್ಕದಲ್ಲಿದ್ದ ದೈತ್ಯ ಮರಗಳ ದಟ್ಟ ನೆರಳು. ‘ನಿಮ್ಮೂರು ಹತ್ತಿರವಾಗಿದೆ’ ಎಂದು ಅದು ಸಾರಿ ಹೇಳುತ್ತಿತ್ತು. ಆ ವಿಶಿಷ್ಟ ಅನುಭೂತಿಯನ್ನು ಮನಸಾರೆ ಅನುಭವಿಸಿ ಪುಳಕಗೊಳ್ಳುತ್ತಿದ್ದೆವು. ಏಕೆಂದರೆ ಆ ಮರಗಳು ನಮ್ಮೂರಿನ ಅಸ್ಮಿತೆಯನ್ನು ಹೊಂದಿದ್ದವು.

ಇದೇ ರೀತಿ ಬೇರೆ ಬೇರೆ ಊರುಗಳನ್ನೂ ಆಯಾ ರಸ್ತೆಗಳಲ್ಲಿ ಬೀಳುತ್ತಿದ್ದ ನೆರಳಿನ ಮೇಲೆ ಅಂದಾಜಿಸುತ್ತಿದ್ದೆವು. ಆದರೀಗ ಪರಿಸ್ಥಿತಿ ಬದಲಾಗಿದೆ. ರಸ್ತೆ ಪಕ್ಕದ ಮರಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಪರಿಸರದಿಂದ ದೂರ ಸರಿದು ಬದುಕುತ್ತಿರುವ ಇಂದಿನ ಮಕ್ಕಳನ್ನು ಮರಳಿ ಪ್ರಕೃತಿಯ ತೆಕ್ಕೆಗೆ ಕರೆತರಬೇಕಿದೆ. ಸಮುದಾಯ ಅರಣ್ಯ ಬೆಳೆಸುವ ದಿಸೆಯಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕಾಗಿದೆ. ಪೀಳಿಗೆಯಿಂದ ಪೀಳಿಗೆಗೆ ಪರಿಸರ ಪ್ರೀತಿಯನ್ನು ಸಾಗಿಸಲು, ವರ್ಧಿಸಲು ಇದೊಂದು ಉತ್ತಮ ಮಾರ್ಗ.

- ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.