ಶಿಕ್ಷಣದ ತುರ್ತು ಮಕ್ಕಳಿಗಲ್ಲ, ವಯಸ್ಕರಿಗೆ!

ಏಳರಿಂದ ಹದಿನಾಲ್ಕು ವರ್ಷದ ಮಕ್ಕಳಲ್ಲಿನ ಅತಿ ಭಾವುಕ ಚಟುವಟಿಕೆ (ಹೈಪರ್ ಆ್ಯಕ್ಟಿವಿಟಿ) ಬಗ್ಗೆ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ಗಮನ ಹರಿಸಿರುವುದು ಸ್ವಾಗತಾರ್ಹ (ಪ್ರ.ವಾ., ಅ. 8). ಯಾವುದನ್ನು ಹೈಪರ್ ಆ್ಯಕ್ಟಿವಿಟಿ ಎಂದು ಕರೆಯಲಾಗಿರುವುದೋ ಅದನ್ನು ಆಕ್ರಮಣಕಾರಕ (ನೆಗೆಟಿವಿಟಿ) ಎಂಬರ್ಥದಲ್ಲಿ ಬಳಸಲಾಗಿದೆ ಎಂದು ಗ್ರಹಿಸುತ್ತೇನೆ. ಮಕ್ಕಳಲ್ಲಿ ಜಂಕ್ ಫುಡ್ ಅಭ್ಯಾಸ ಮತ್ತು ಮೊಬೈಲ್ ಚಟ, ಈ ನಿಷೇಧಾತ್ಮಕ ವರ್ತನೆಗೆ ಕಾರಣ ಆಗಿರುವಂತಿದೆ.

ಅತಿ ಚಿಕ್ಕ ಸಾಮಾಜಿಕ ಘಟಕ ಎಂದು ಪರಿಗಣಿಸಲಾಗುವ ಕುಟುಂಬ ಅಥವಾ ‘ಮನೆ’ಯಲ್ಲಿ ಮನುಷ್ಯಸಹಜ ಬಾಂಧವ್ಯದ ವಾತಾವರಣ ಇಲ್ಲದಿರುವುದೇ ಸಮಸ್ಯೆಗೆ ಕಾರಣ. ಮನುಷ್ಯ ಮನುಷ್ಯನನ್ನು ನಂಬದಿರುವುದರಿಂದಲೇ ಸಮಾಜದಲ್ಲಿ ಅನಾರೋಗ್ಯಕರ ಸ್ಪರ್ಧೆ, ದ್ವೇಷ, ಹಾನಿ ಮಾಡುವ ಹುನ್ನಾರ, ಸಾವನ್ನು ಸಂಭ್ರಮಿಸುವ ವಾತಾವರಣ ವ್ಯಾಪಕವಾಗಿರುವುದು. ನಮ್ಮಲ್ಲಿ ಬಾಲ ಶಿಕ್ಷಣಕ್ಕಿಂತಲೂ ವಯಸ್ಕ ಶಿಕ್ಷಣಕ್ಕೆ ಹೆಚ್ಚು ಗಮನ ಕೊಡಬೇಕಾದ ಸನ್ನಿವೇಶ ಉಂಟಾಗಿದೆ!

-ಆರ್. ಕೆ ದಿವಾಕರ, ಎಳೇನಹಳ್ಳಿ

ರಕ್ಷಕರ ಮೌನ: ಧರ್ಮ ಉಳಿಯುವುದೆ?

ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳ ರೈತರು ಗಣಿ ಲಾರಿಗಳಿಂದ ತಮ್ಮ ಆರೋಗ್ಯ ಮತ್ತು ಕೃಷಿಭೂಮಿಯನ್ನು (ಪ್ರ.ವಾ., ಅ. 8) ರಕ್ಷಿಸುವಂತೆ ಸ್ವಾಮೀಜಿಗಳನ್ನು ಗೋಗರೆದಿದ್ದಾರೆ. ಅದರಿಂದ ಮಠಗಳಿಗೆ ಕಪ್ಪಕಾಣಿಕೆ ಸಂದಾಯವಾಗಿದೆಯೇ ಹೊರತು ಜನಸಾಮಾನ್ಯರಿಗೆ ಉಪಯೋಗವಾಗಿಲ್ಲ. ಧರ್ಮರಕ್ಷಕರೇ ಕಣ್ಣು ಮುಚ್ಚಿಕೊಂಡರೆ ‘ಧರ್ಮೋ ರಕ್ಷತಿ ರಕ್ಷಿತಃ!’ ಉಕ್ತಿಗೆ ಅರ್ಥವೆಲ್ಲಿದೆ?

- ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು

ಶೂ ಎಸೆತ ಒಂದು ಎಚ್ಚರಿಕೆಯ ಸಂಕೇತ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ಘಟನೆ, ನಮ್ಮ ಸಮಾಜದಲ್ಲಿ ಇನ್ನೂ ಆಳವಾಗಿ ಬೇರುಬಿಟ್ಟಿರುವ ಜಾತೀಯ ಅಸಹನೆಯನ್ನು ಬಯಲಿಗೆಳೆದಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಂತಹ ಪ್ರಭಾವಿ ವ್ಯಕ್ತಿಯ ಮೇಲೆಯೇ ಧರ್ಮದ ಹೆಸರಿನಲ್ಲಿ ಶೂ ಎಸೆದಿರುವುದು ಒಂದು ಸ್ಪಷ್ಟವಾದ ಎಚ್ಚರಿಕೆಯ ಗಂಟೆ. ಸಾರ್ವಜನಿಕ ವೇದಿಕೆಯಲ್ಲೇ ಅಸಹನೆಯು ಇಷ್ಟು ತೀವ್ರವಾಗಿದ್ದರೆ, ಗ್ರಾಮೀಣ ಭಾಗಗಳಲ್ಲಿ ಅದೆಷ್ಟು ಭೀಕರ ಘಟನೆಗಳು ಮೌನವಾಗಿ ನಡೆಯುತ್ತಿರ ಬಹುದು!

ನಾವು ಕಾನೂನುಬದ್ಧ, ಸಂವಿಧಾನಬದ್ಧ ರಾಷ್ಟ್ರದಲ್ಲಿ ಬದುಕುತ್ತಿದ್ದೇವೆಂದು ಹೇಳಿಕೊಳ್ಳುತ್ತೇವೆ. ಆದರೆ ಅಸಮಾನತೆಯ ನೆಲೆಯು ಮನಸ್ಸಿನ ತಳಭಾಗದಲ್ಲೇ ಗಟ್ಟಿಯಾಗಿ ಉಳಿದಿರುವಾಗ, ಕಾನೂನಿನ ಶಕ್ತಿ ಎಷ್ಟು ಬಲಹೀನವಾಗಿ ಪರಿಣಮಿಸು ತ್ತದೆ ಎಂಬುದನ್ನು ಈ ಘಟನೆ ಕಣ್ಣು ತೆರೆಸುವಂತೆ ತೋರಿಸಿದೆ. ಈ ಪ್ರಕರಣದಲ್ಲಿ ಕಾನೂನು ಕ್ರಮ ಅಗತ್ಯ. ನ್ಯಾಯಮೂರ್ತಿಯ ಮೇಲಿನ ದಾಳಿಯ ಪ್ರಯತ್ನವನ್ನು ಸಂವಿಧಾನದ ಮೇಲಿನ ನೇರ ದಾಳಿ ಎಂದು ಪರಿಗಣಿಸಬೇಕು. ಅಸಹನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶ ಸಮಾಜಕ್ಕೆ ಮುಟ್ಟಬೇಕು.

-ಶಿವಯೋಗಿ ಎಂ.ವಿ., ರಾಂಪುರ

ಪುಸ್ತಕ ಖರೀದಿ: ಸರ್ಕಾರ ಕಣ್ಣು ತೆರೆಯಲಿ

ಚಲನಚಿತ್ರ ನಟ ಧ್ರುವ ಅವರ ಅಭಿಮಾನಿಗಳು ಹಾರ ತುರಾಯಿಯ ಬದಲಿಗೆ ಪುಸ್ತಕಗಳ ಕಾಣಿಕೆ ನೀಡಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಿರುವುದು ಸಂತಸದ ಸಂಗತಿ. ಈ ಮಾದರಿಯನ್ನು ಎಲ್ಲ ಕಲಾವಿದರು ಹಾಗೂ ಅವರ ಹಿಂಬಾಲಕರು, ವಿವಿಧ ಕ್ಷೇತ್ರಗಳ ಖ್ಯಾತನಾಮರು ಅನುಸರಿಸಿದರೆ ಕನ್ನಡ ಪುಸ್ತಕೋದ್ಯಮಕ್ಕೆ ಚೇತರಿಕೆ ದೊರೆಯಬಹುದು.

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಪ್ರಗತಿಪರ ಚಿಂತಕರ, ಸಾಹಿತಿಗಳ ಪಾತ್ರವೂ ಇದೆ. ಆದರೆ, ಲೇಖಕರು– ಪ್ರಕಾಶಕರ ಸಮಸ್ಯೆ ಬಗೆಹರಿಸಲು ಹಾಗೂ ಗ್ರಂಥಾಲಯಗಳ ಪುಸ್ತಕ ಖರೀದಿ ಪ್ರಕ್ರಿಯೆಗೆ ಜೀವತುಂಬಲು ಸರ್ಕಾರ ಮುಂದಾಗದಿರುವುದು ನೋವಿನ ಸಂಗತಿ.

-ಎ.ಎಸ್. ಮಕಾನದಾರ, ಗದಗ

ಕೈಗಾರಿಕೆಗಳ ಕೊರತೆ; ನಿರುದ್ಯೋಗ ಹೆಚ್ಚಳ

ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ರಾಷ್ಟ್ರೀಯ, ಅಂತರರಾಷ್ಟ್ರೀಯ ಕಂಪನಿಗಳನ್ನು ಕರೆತರುವ ಪ್ರಯತ್ನದಲ್ಲಿ ಸರ್ಕಾರಗಳು ವೈಫಲ್ಯ ಅನುಭವಿಸುತ್ತಿವೆ. ಯುವಜನರು, ತಂತಮ್ಮ ಜಿಲ್ಲೆಗಳಲ್ಲಿ ಕಾರ್ಖಾನೆಗಳೇ ಇಲ್ಲದಿರುವುದರಿಂದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ನಿರುದ್ಯೋಗದಿಂದ ಯುವಜನರ ವಲಸೆ ಹೆಚ್ಚುತ್ತಿದೆ. ಹೊಸ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಸರ್ಕಾರ ಉದ್ಯೋಗ ಸೃಷ್ಟಿಯ ಪ್ರಯತ್ನಗಳನ್ನು ನಡೆಸಬೇಕು.

-ಹರೀಶ್ ಅಮಲಗೊಂದಿ, ಸಿರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.