ಶನಿವಾರ, ಸೆಪ್ಟೆಂಬರ್ 24, 2022
21 °C

ವಾಚಕರ ವಾಣಿ | ಸ್ಪೋಕನ್ ಇಂಗ್ಲಿಷ್‌ ತರಗತಿ: ಶೀಘ್ರ ಆರಂಭವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿ ಆರಂಭಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿರುವುದು ಉತ್ತಮ ಹಾಗೂ ಸ್ವಾಗತಾರ್ಹ ನಡೆ. ರಾಜ್ಯದ ಬಹುತೇಕ ಗ್ರಾಮೀಣ ಶಾಲೆಗಳ ಮಕ್ಕಳಿಗೆ ಇಂಗ್ಲಿಷ್ ಕಗ್ಗಂಟಿನ ವಿಷಯ. ಇದೀಗ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿ ಆರಂಭಿಸುವುದ ರಿಂದ ಇಂಗ್ಲಿಷ್ ಭಾಷೆ ಬಗೆಗಿನ ದಿಗಿಲು ನಿವಾರಣೆಯಾಗಲಿದೆ.

ಶಿಕ್ಷಣ ಸಚಿವರ ಹೇಳಿಕೆಯು ಬಾಯಿಮಾತಿಗೆ ಸೀಮಿತವಾಗದೆ, ಆದಷ್ಟು ಶೀಘ್ರ ಜಾರಿಗೊಳ್ಳಲಿ. ಈ ಮೂಲಕ ಸರ್ಕಾರಿ ಶಾಲೆಗಳತ್ತ ಹೆಚ್ಚು ಹೆಚ್ಚು ಮಕ್ಕಳು ಆಕರ್ಷಿತರಾಗುವಂತೆ ಆಗಲಿ.

-ಜಿ.ಎಸ್.ಬಸವರಾಜಪ್ಪ, ಸಾಸಿವೆಹಳ್ಳಿ, ಹೊನ್ನಾಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು