ಜಾತಿ ಜನಗಣತಿ: ಎಚ್ಚರಿಕೆ ಬೇಕು

ಜಾತಿ ಜನಗಣತಿ ವರದಿಯು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮಂಡನೆ ಆಗಲಿದೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಜಾತಿ ಜನಗಣತಿಯ ವಿಚಾರವು ಮತ್ತೆ ಮತ್ತೆ ಮುನ್ನೆಲೆಗೆ ಬಂದು ಹಿಂದೆ ಸರಿಯುತ್ತಿದ್ದದ್ದು ಈಗ ಒಂದು ನಿರ್ಣಾಯಕ ಹಂತಕ್ಕೆ ಬಂದಿದೆ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸಬೇಕು. ಎಲ್ಲರಿಗೂ ನ್ಯಾಯ ಸಿಗಬೇಕೆಂಬ ದೃಷ್ಟಿಯಿಂದ ಆದಷ್ಟು ಬೇಗ ಜಾರಿಯಾಗಬೇಕಾದುದು ಅತ್ಯಗತ್ಯ. ಇನ್ನೂ ವಿಳಂಬವಾಗಿದ್ದರೆ ಅನ್ಯಾಯವೇ ಆಗಿಬಿಡು ತ್ತಿತ್ತು. ಆದರೆ, ಇಂತಹ ಗಣತಿಯು ವಿಶ್ವಾಸವನ್ನೂ ಮೂಡಿಸಬೇಕು. ಕೆಲವು ಸಮುದಾಯಗಳಿಗೆ ತಮ್ಮ ಸಂಖ್ಯೆಯನ್ನು ಸರಿಯಾಗಿ ಎಣಿಸಿಲ್ಲ ಎನ್ನುವ ಅವಿಶ್ವಾಸ ಇರಬಾರದು. ಶಾಶ್ವತವಾಗಿ ಉಳಿಯುವಂತಹ ಯಾವುದೇ ಕೆಲಸ ಮಾಡುವಾಗ, ಸರ್ವರ ವಿಶ್ವಾಸ ಗಳಿಸುವುದೂ ಮುಖ್ಯ.

ಕರ್ನಾಟಕದಲ್ಲಿ ಈಗಾಗಲೇ ಒಂದು ಜಾತಿ ಜನಗಣತಿ ಆಗಿದೆ. ಮೂಲೆಮೂಲೆಯಲ್ಲಿರುವ, ಇದುವರೆಗೆ ‘ಲೆಕ್ಕಕ್ಕೂ ಸಿಗದೇ ಇದ್ದ’ ಎಷ್ಟೋ ಸಮುದಾಯಗಳನ್ನು ಒಳಗೊಂಡು, ಅವರ ಸ್ಥಿತಿಗತಿಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡು ಈ ಗಣತಿ ನಡೆಸಿದ್ದೇವೆ ಎಂದು ಈ ಗಣತಿ ನಡೆದಾಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ ಅವರು ಹೇಳಿದ್ದಾರೆ. ನೂರಾರು ಕೋಟಿ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಿ ಸಂಗ್ರಹಿಸಿರುವ ಆ ಸಮೀಕ್ಷೆಯ ಸಾರ ಸರ್ಕಾರಕ್ಕೂ ಸಮಾಜಕ್ಕೂ ಅತ್ಯಗತ್ಯ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಕೆಲವು ಸಮುದಾಯಗಳ ಲೆಕ್ಕ ಸರಿಯಾಗಿ ಮಾಡಿಲ್ಲ ಎಂಬ ಅಪನಂಬಿಕೆ ಇರಬಾರದು. 40 ಲಕ್ಷಕ್ಕೂ ಹೆಚ್ಚು ಜನರ ಎಣಿಕೆ ಆಗಿಲ್ಲ ಎಂಬ ಸುದ್ದಿಯಿದೆ. ಹೀಗಾಗಿ, ಈ ವರದಿಯನ್ನು ಒಪ್ಪಿಕೊಂಡೇ, ಲೆಕ್ಕ ಮಾತ್ರ ಇನ್ನೊಮ್ಮೆ ಮಾಡುವುದು ಇಂದಿನ ಅಗತ್ಯ ಇರಬಹುದು. ಸರ್ಕಾರ ಈ ದಿಸೆಯಲ್ಲಿ ಆಲೋಚಿಸಬೇಕು. ಅದೇ ಸಂದರ್ಭದಲ್ಲಿ– ಇದನ್ನು ಒಂದೆರಡು ತಿಂಗಳಲ್ಲಿ ಮಾಡಿ ಮುಗಿಸುವಷ್ಟು ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಸರ್ಕಾರದ ಬಳಿ ಇದ್ದೇ ಇದೆ. ಹೀಗಾಗಿ, ಎರಡು ತಿಂಗಳಲ್ಲಿ ಜಾತಿ ಜನಗಣತಿ/ಸಮೀಕ್ಷೆಯನ್ನೇ ಮುಗಿಸಬಹುದು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡು, ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯವಾಗಿರುವ ಈ ವಿಚಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸುತ್ತದೆ ಎಂದು ಆಶಿಸುತ್ತೇನೆ.

-ದೇವನೂರ ಮಹಾದೇವ, ಮೈಸೂರು

ಪೇಚಿಗೆ ಸಿಲುಕಿದ ‘ಆಕ್ರೋಶ’ ಯಾತ್ರಿಗಳು

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ವಿರೋಧ ಪಕ್ಷಗಳ ‘ಜನ ಆಕ್ರೋಶ ಯಾತ್ರೆ’ ಪ್ರಗತಿಯಲ್ಲಿ ಇರುವಾಗಲೇ ಕೇಂದ್ರ ಸರ್ಕಾರ ತಾನೇನೂ ಕಡಿಮೆಯಿಲ್ಲ ಎಂಬಂತೆ ಅಡುಗೆ ಅನಿಲದ ದರವನ್ನು ಸಿಲಿಂಡರ್ಗೆ ₹ 50 ಹೆಚ್ಚು ಮಾಡಿ ‘ಆಕ್ರೋಶ’ ಯಾತ್ರೆಯ ರೂವಾರಿಗಳನ್ನು ಪೇಚಿಗೆ ಸಿಲುಕಿಸಿದೆ. ಇದನ್ನು ನೋಡಿದಾಗ, ‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ’ ಎಂಬ ದಾಸರಪದ ನೆನಪಾಯಿತು.

ಕೇಂದ್ರದ ನಿರ್ಧಾರವನ್ನು ಈಗ ಸಮರ್ಥಿಸಿಕೊಳ್ಳುವ ಅನಿವಾರ್ಯವನ್ನು ರಾಜ್ಯದ ವಿರೋಧ ಪಕ್ಷ ಎದುರಿಸುತ್ತಿದೆ. ವಿರೋಧ ಪಕ್ಷಗಳ ನಿಲುವು ಸರ್ಕಾರ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯುವಂತೆ ಇರಬೇಕು. ಅದು, ಪ್ರಜಾಪ್ರಭುತ್ವದ ತಾಕತ್ತು ಕೂಡ. ಇಲ್ಲವಾದಲ್ಲಿ, ಇಂತಹ ಯಾತ್ರೆಗಳು ಪ್ರದರ್ಶನಕ್ಕೆ ಮಾತ್ರ ಸೀಮಿತಗೊಳ್ಳುತ್ತವೆ. ಪರಿಣಾಮ, ಶೂನ್ಯ ಅಷ್ಟೇ.

-ವೆಂಕಟೇಶ್ ಮುದಗಲ್, ಕಲಬುರಗಿ

‘ಸ್ವರ್ಗಸುಖ’ ನೀಡಿದ ಆರ್ಬಿಐ!

ದಿನಪತ್ರಿಕೆ ತೆರೆದರೆ ಸಾಕು, ಸುದ್ದಿವಾಹಿನಿಗಳ ಚಾನೆಲ್ ಹಾಕಿದರೆ ಸಾಕು, ಬಸ್ ಪ್ರಯಾಣ, ಮೆಟ್ರೊ ಪ್ರಯಾಣ, ಹಾಲು, ನೀರು, ಇಂಧನ, ವಿದ್ಯುತ್, ಅಡುಗೆ ಅನಿಲ, ದಿನಬಳಕೆಯ ಅಗತ್ಯ ವಸ್ತುಗಳ ದರ ಏರಿಕೆಯದ್ದೇ ಸುದ್ದಿ. ಇದನ್ನು ಓದೀ ಓದೀ, ಕೇಳೀ ಕೇಳೀ ಜನ ಬೇಸತ್ತು ಹೋಗಿದ್ದರು. ಅದರ ವಿರುದ್ಧ ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಂಡು ಸರ್ಕಾರಗಳಿಗೆ ಶಾಪ ಹಾಕುತ್ತಿದ್ದರು.

ಇಂತಹ ಸಮಯದಲ್ಲಿ ಎಲ್ಲೋ ಕೊಂಚ ಸಂತಸದ ಸುದ್ದಿಯೂ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಇಳಿಸಿದೆ. ತತ್ಪರಿಣಾಮವಾಗಿ, ಸಾಲ ಪಡೆದವರ ಇಎಂಐ ಕಡಿಮೆಯಾಗಿ ಸಾಲ ಅಗ್ಗವಾಗಿದೆ. ಈ ‘ಅಗ್ಗ’ ಎಂಬ ಪದವನ್ನು ಓದಿಯೇ ಎಷ್ಟೋ ದಿನಗಳಾಗಿದ್ದವು. ಅಗ್ಗ ಎಂಬ ಪದ ಕೇಳುವುದು ಅಥವಾ ಓದುವುದೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಸ್ವರ್ಗವೇ ದೊರಕಿದಂತೆ. ಅಂತಹ ಸ್ವರ್ಗಸುಖವನ್ನು (ಕ್ಷಣಿಕವಾದರೂ) ನೀಡಿದ ಆರ್ಬಿಐಗೆ ಧನ್ಯವಾದ. ಸರ್ಕಾರಗಳೂ ಇದೇ ಹಾದಿಯಲ್ಲಿ ಸಾಗಿ, ವಸ್ತುಗಳ ದರ ಇಳಿಸಿ ಜನರಲ್ಲಿ ಮಂದಹಾಸ ಮೂಡಿಸಲಿ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಸಮ್ಮೇಳನದ ವೆಚ್ಚಕ್ಕೆ ಮಿತಿ ಬೇಡವೇ?

ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಒಟ್ಟು 27 ಸಮಿತಿಗಳ ಪೈಕಿ 17 ಸಮಿತಿಗಳಿಂದ ಬರೋಬ್ಬರಿ ₹ 25 ಕೋಟಿ ವೆಚ್ಚ ಮಾಡಲಾಗಿದೆ. ಇನ್ನುಳಿದ ಸಮಿತಿಗಳ ವೆಚ್ಚವೂ ಸೇರಿದರೆ ಇನ್ನಷ್ಟು ಕೋಟಿ ತಲುಪಬಹುದು. ಇಷ್ಟೊಂದು ವೆಚ್ಚ ಮಾಡಿ ಒಂದು ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷವೂ ಮಾಡಬೇಕಾದ ಅಗತ್ಯವಿದೆಯೇ? ಹೋಗಲಿ ಇಷ್ಟೆಲ್ಲಾ ವೆಚ್ಚ ಮಾಡಿದ ಬಳಿಕವೂ ಸಮ್ಮೇಳನದ ಉದ್ದೇಶ ಎಷ್ಟರಮಟ್ಟಿಗೆ ಈಡೇರಿದೆ ಎಂಬ ಬಗ್ಗೆ ಚಿಂತಿಸಬೇಕಲ್ಲವೇ?

ಕನ್ನಡ ಭಾಷೆ, ಸಾಹಿತ್ಯದ ಹೆಸರಿನಲ್ಲಿ ಇಷ್ಟೊಂದು ಹಣವನ್ನು ಪೋಲು ಮಾಡುವ ಬದಲು ಸರಳವಾಗಿಯೂ ಅರ್ಥಪೂರ್ಣವಾಗಿಯೂ ವರ್ಷವಿಡೀ ಸಾಹಿತ್ಯದ ಕಂಪನ್ನು ಬೀರಬಹುದಾದ ಇತರ ಮಾರ್ಗಗಳ ಬಗ್ಗೆ ಏಕೆ
ಸಮಾಲೋಚಿಸಬಾರದು? ಈ ಲೆಕ್ಕಪತ್ರವನ್ನು ನೋಡಿದಾಗ, ಎಮ್ಮೆಗಿಂತಲೂ ಮೂಗುದಾರಕ್ಕೇ ಹೆಚ್ಚು ಖರ್ಚು ಮಾಡಿದಂತೆ ಭಾಸವಾಗುತ್ತದೆ. ಹಾಗಾಗಿ, ಇನ್ನು ಮುಂದೆ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದನ್ನು ನಿಲ್ಲಿಸುವುದು ಒಳಿತು. ಜೊತೆಗೆ ಸಮ್ಮೇಳನ ಮುಗಿದ ಎರಡು ವಾರದೊಳಗೆ ವೆಚ್ಚದ ವಿವರವನ್ನು ಇಲಾಖೆಯ ವೆಬ್ಸೈಟ್ನಲ್ಲಿ ಹಾಕುವಂತೆ ಆಗಬೇಕು. ಆ ಮೂಲಕ ಪಾರದರ್ಶಕತೆಗೆ ಅವಕಾಶ ಕಲ್ಪಿಸಬೇಕು.

-ಸುರೇಂದ್ರ ಪೈ, ಭಟ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.