ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣೆ ಶಿಥಿಲವಾಯಿತೇ?

Last Updated 30 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಮೈಸೂರು– ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಹಾಗೂ ಮೈಸೂರು– ತಾಳಗುಪ್ಪ ಪ್ಯಾಸೆಂಜರ್ ರೈಲಿನಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ಹತ್ತಿರ ರಾತ್ರಿ ಪ್ರಯಾಣಿಕರ ದರೋಡೆಯಾಗಿರುವುದು ವರದಿಯಾಗಿದೆ (ಪ್ರ.ವಾ., ಡಿ. 25). ಇದು ನಿಜಕ್ಕೂ ಆಘಾತಕಾರಿ ಘಟನೆ. ಸುರಕ್ಷಿತ ರೈಲು ಪ್ರಯಾಣಕ್ಕೆ ಕರ್ನಾಟಕವು ದೇಶದಲ್ಲಿಯೇ ಹೆಸರಾಗಿತ್ತು. ಆದರೆ, ಈಗ ರೈಲು ಪ್ರಯಾಣ ಭಯ ಹುಟ್ಟಿಸುವಂತಾಗಿದೆ.

ಒಂದೇ ಮಾರ್ಗದಲ್ಲಿ ವಾರದಲ್ಲಿ ಎರಡು ಬಾರಿ ದರೋಡೆಯಾಗಿದೆಯೆಂದರೆ, ರೈಲ್ವೆ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯ ಬಗ್ಗೆ ಅನುಮಾನ ಮೂಡುತ್ತದೆ. ರೈಲ್ವೆ ಪೊಲೀಸ್ ವಿಭಾಗದ ರಕ್ಷಣಾ ವ್ಯವಸ್ಥೆ ಇಷ್ಟೊಂದು ಶಿಥಿಲವಾಯಿತೇ? ರಾತ್ರಿ ವೇಳೆಯಲ್ಲಿ ರೈಲಿನಲ್ಲಿ ನಿದ್ರಿಸುವ ಪ್ರಯಾಣಿಕರಿಗೆ ಸುಖ ಪ್ರಯಾಣದ ಬಗ್ಗೆ ಇಲಾಖೆ ಭರವಸೆ ಕೊಡಬೇಕು. ಇಲ್ಲದೆ ಹೋದರೆ ದಿನನಿತ್ಯದ ಸಂಚಾರಕ್ಕೆ ಸಂಚಕಾರ ಬರುತ್ತದೆ. ಹಂಪಿಗೆ ಹೋಗುವುದಕ್ಕಿಂತ ತನ್ನ ಕೊಂಪೆಯಲ್ಲೇ ಇರುವುದು ಲೇಸು ಎಂದು ಪ್ರಯಾಣಿಕರಿಗೆ ಅನಿಸುವಂತಾಗದಿರಲಿ.

ಬಿ.ಎಸ್. ತಿಮ್ಮೋಲಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT