ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತರಿಗೆ ಕಿರುಕುಳ

Last Updated 3 ಸೆಪ್ಟೆಂಬರ್ 2018, 16:46 IST
ಅಕ್ಷರ ಗಾತ್ರ

ಪಿಂಚಣಿದಾರರಿಗೆ ತೊಂದರೆಯಾಗಬಾರದೆಂದು ಸರ್ಕಾರಗಳು ನಿಯಮಗಳನ್ನು ರೂಪಿಸಿವೆ. ಸೇವೆಯಿಂದ ನಿವೃತ್ತನಾದ ನೌಕರನೊಬ್ಬ ಮರು ತಿಂಗಳಿನಿಂದಲೇ ಪಿಂಚಣಿ ಪಡೆಯುವಂತಾಗಬೇಕು ಎಂದು ಸರ್ಕಾರ ಬಯಸುತ್ತದೆ. ಆದರೆ ಸರ್ಕಾರಿ ಅಧಿಕಾರಿಗಳು ಮಾತ್ರ ನಿವೃತ್ತ ನೌಕರರಿಗೆ ಅಷ್ಟು ಸುಲಭವಾಗಿ ಪಿಂಚಣಿ ಪಡೆಯಲು ಬಿಡುತ್ತಿಲ್ಲ.

ಲೆಕ್ಕ ಪರಿಶೋಧಕರು ಮನಸ್ಸಿಗೆ ಬಂದಂತೆ ಆಕ್ಷೇಪ ಎತ್ತುವುದು ನಡೆದೇ ಇದೆ. ಇಂಥ ಆಕ್ಷೇಪಗಳನ್ನು ಯಾಕೆ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಒಂದಿಷ್ಟು ‘ಕೈ ಬಿಸಿ’ ಮಾಡಿದರೆ ಎಲ್ಲ ಆಕ್ಷೇಪಗಳೂ ಕಾಣೆಯಾಗುತ್ತವೆ.

ಕೈಬಿಸಿ ಮಾಡದಿದ್ದರೆ ಸಂಬಂಧಪಟ್ಟ ಇಲಾಖೆಯ ಕೇಂದ್ರ ಕಚೇರಿಗಳಿಂದ ಪಿಂಚಣಿ ದಾಖಲಾತಿಗಳು ಸಕಾಲ
ದಲ್ಲಿ ಮಹಾಲೇಖಪಾಲರಿಗೆ ಹೋಗುವುದಿಲ್ಲ. ಈಗಂತೂ ಮಹಾಲೇಖಪಾಲರ ಕಚೇರಿಯಿಂದಲೂ ಪಿಂಚಣಿ, ಪರಿವ
ರ್ತಿತ ಮೊಬಲಗು ಮತ್ತು ಇತರ ಸೌಲಭ್ಯಗಳು ಸಕಾಲದಲ್ಲಿ ಮಂಜೂರಾಗುತ್ತಿಲ್ಲ. ನಿವೃತ್ತಿಯ ನಂತರ ನೀಡಬೇಕಾದ ಆರ್ಥಿಕ ಸವಲತ್ತನ್ನು ಮಂಜೂರು ಮಾಡಲು ಮಹಾಲೇಖ
ಪಾಲರ ಕಚೇರಿಯೂ 10 ರಿಂದ 12 ತಿಂಗಳ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಪಿಂಚಣಿ ಹಣವನ್ನೇ ಅವಲಂಬಿಸಿರುವವರ ಗೋಳು ಹೇಳತೀರದಾಗಿದೆ. ನಿವೃತ್ತ ನೌಕರರ ಈ ಸಮಸ್ಯೆಗಳು ಪರಿಹಾರ ಕಾಣುವವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT