ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ನಾಯಕರು ಜವಾಬ್ದಾರಿ ಮರೆಯದಿರಲಿ

Last Updated 20 ಅಕ್ಟೋಬರ್ 2020, 19:21 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಇತ್ತೀಚಿನ ಪ್ರವಾಹದಿಂದ ತತ್ತರಿಸಿಹೋಗಿವೆ. ಮಲೆನಾಡು ಮತ್ತು ಕಡಲ ತೀರದ ಜಿಲ್ಲೆಗಳು ಸಹ ಈ ಹಿಂದೆ ಪ್ರವಾಹಕ್ಕೆ ಸಿಲುಕಿ ಬಹಳಷ್ಟು ತೊಂದರೆ ಅನುಭವಿಸಿವೆ. ಇಂತಹ ಸಂದರ್ಭಗಳಲ್ಲಿ ಸಚಿವರು ಮತ್ತು ಆಯಾ ಕ್ಷೇತ್ರದ ಶಾಸಕರು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಗಳನ್ನು ಪರಿಶೀಲಿಸುವುದು, ನೊಂದವರನ್ನು ಭೇಟಿ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಾದುದು ಅತ್ಯಂತ ಅವಶ್ಯಕ.

ಈ ದಿಸೆಯಲ್ಲಿ ಆಡಳಿತಯಂತ್ರ ಹೆಚ್ಚು ಚುರುಕುಗೊಳ್ಳುವಂತೆ ಅದರ ಕಿವಿ ಹಿಂಡಬೇಕಾಗಿರುವುದು ವಿರೋಧ ಪಕ್ಷಗಳ ಜವಾಬ್ದಾರಿಯೂ ಹೌದು. ಆದರೆ ಇತ್ತೀಚೆಗೆ ವಿರೋಧ ಪಕ್ಷಗಳ ನಾಯಕರು ಕೇವಲ ಸರ್ಕಾರದ ಕಾರ್ಯವನ್ನು ಟೀಕಿಸುವುದೇ ತಮ್ಮ ಕೆಲಸ ಅನ್ನುವಂತೆ ವರ್ತಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ಸರ್ಕಾರದ ಕಿವಿ ಹಿಂಡುವುದರ ಜೊತೆಗೆ ತಾವು ಸಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅವರಿಗೆ ಬೇಕಾದ ಸಹಾಯಕ್ಕೆ ಪೂರಕವಾಗಿ ಸರ್ಕಾರದೊಂದಿಗೆ ಕೈಜೋಡಿಸುವುದು ಅತ್ಯಂತ ಅವಶ್ಯಕ ಎಂಬುದನ್ನು ಅರಿಯಲಿ.

-ಕೆ.ಪ್ರಭಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT