ಭಾನುವಾರ, ಫೆಬ್ರವರಿ 23, 2020
19 °C

ಸನ್ನಿ ಲಿಯೋನ್‌ ಮಾದರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸನ್ನಿ’ ಯುವಕ ಮಂಡಳಿಯಂತೆ!
(ಪ್ರ.ವಾ., ಜ. 16)
ದ್ರೋಣಾಚಾರ್ಯರು ಮರ ತೋರಿ
ಏನು ಕಾಣುತ್ತಿದೆ ನೋಡಿ ಹೇಳಿ

ಎಂದರಂತೆ ಶಿಷ್ಯೋತ್ತಮರಿಗೆ...
ಎಲ್ಲರೂ ಕೊಂಬೆ, ಎಲೆ, ಕಾಯಿ, ಹಣ್ಣು
ಎಂದೇನೇನನ್ನೋ ಹೇಳಿದರಂತೆ,
ಅರ್ಜುನನಿಗೆ ಮಾತ್ರ ಹಕ್ಕಿಯ

ಕಣ್ಣು ಕಂಡಿತಂತೆ, ಅಂತೆಯೇ
ದೇಶದ ಇತರ ಯುವಕರು ಕಾಣಲಾರದ್ದನ್ನು
ಕಂಡಿರುವರಲ್ಲಾ ರಾಯಚೂರಿನ ಹುಡಾ ಗ್ರಾಮದ ಯುವಕರು.
ಎಲ್ಲರೂ ಸನ್ನಿಯ ಮೈಮಾಟಕೆ ಸಮೂಹಸನ್ನಿಗೆ
ಒಳಗಾದರೆ ಈ ಯುವಕರು ಮಾತ್ರ ಸನ್ನಿಯ ಸಹಾಯಗುಣವ ಕಂಡು ಮಂಡಳಿ ಕಟ್ಟಿರುವರಂತೆ...
ಮಾದರಿಯಾಗಲಿ ಈ ಯುವಕರ ನಡೆ
ಸನ್ನಿಯಂತಹವರು ಸಾವಿರವಾಗಲಿ
ಹುರಿದುಂಬಿಸುತ ಯುವಕರ ಪಡೆ!

ಜೆ.ಬಿ.ಮಂಜುನಾಥ, ಪಾಂಡವಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)