ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಚಕರ ವಾಣಿ | ಥೀಮ್ ಪಾರ್ಕ್: ರಾಜಕೀಯ ಬೇಡ

Last Updated 2 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ 24 ಎಕರೆ ಪ್ರದೇಶದಲ್ಲಿ 30 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ನಿರ್ಮಾಣಕ್ಕಾಗಿ ಭೂಮಿಪೂಜೆ ನಡೆದಿರುವುದು ವರದಿಯಾಗಿದೆ. ಈ ಪಾರ್ಕಿನಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸುವುದಾಗಿ ಸಚಿವರು ಹೇಳಿದ್ದಾರೆ. ಶಾಂತಿ ಮತ್ತು ವೈರಾಗ್ಯದ ಸಂದೇಶ ಸಾರಿದ ಬಾಹುಬಲಿಯ 57 ಅಡಿಗಳ ಏಕಶಿಲಾ ವಿಗ್ರಹ ಶ್ರವಣಬೆಳಗೊಳದಲ್ಲಿದೆ ಮತ್ತು ಇದು ವಿಶ್ವವಿಖ್ಯಾತಿ ಪಡೆದಿದೆ. ಇದಕ್ಕಿಂತ ಎತ್ತರದ ಪ್ರತಿಮೆಗಳಿಗೆ ಅರ್ಥವಿದೆಯೇ ಎಂದು ರಾಜ್ಯದ ಜನ ಪ್ರಶ್ನಿಸಿಕೊಳ್ಳಬೇಕು. ಥೀಮ್ ಪಾರ್ಕ್ ಮಾಡಿ, ಕೆಂಪೇಗೌಡರ ಪ್ರತಿಮೆಯನ್ನೂ ಸ್ಥಾಪಿಸಿ. ಆದರೆ 108 ಅಡಿಯ ಕಂಚಿನ ಪ್ರತಿಮೆ ಮತ್ತು ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ಪ್ರಶ್ನಾರ್ಹವಾಗಿದೆ. ಇದರ ಅಗತ್ಯವಿದೆಯೇ ಎಂದು ಆಲೋಚಿಸಬೇಕಾಗಿದೆ.

ಈ ಪ್ರತಿಮೆ ಪ್ರತಿಷ್ಠಾಪನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಕೆರೆಕಟ್ಟೆಗಳಿಂದ ಪವಿತ್ರ ಜಲ ಮತ್ತು ಮಣ್ಣನ್ನು ಸಂಗ್ರಹಿಸಲಾಗುತ್ತದೆ ಎಂದು ವರದಿಯಾಗಿದೆ. ಯಾವ ಕೆರೆ ಕಟ್ಟೆಯ ನೀರೂ ಕುಡಿಯಲು ಯೋಗ್ಯವಾಗಿಲ್ಲ. ಹಾಗಿರುವಾಗ ಅದು ಪವಿತ್ರ ಜಲ ಹೇಗಾಗುತ್ತದೆ? ಇವುಗಳನ್ನು ಸಂಗ್ರಹಿಸುವ ಕಾರ್ಯಕ್ರಮದ ಮೂಲಕ ಬಿಜೆಪಿ ತನ್ನ ಚುನಾವಣಾ ಪ್ರಚಾರ ಮಾಡುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.

-ಈ.ಬಸವರಾಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT