ಬುಧವಾರ, ಮೇ 27, 2020
27 °C

ಇತಿಮಿತಿ ಮೀರಬಾರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯದಲ್ಲಿ ಧರ್ಮವನ್ನು ಬೆರೆಸುವುದಾಗಲೀ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಾಗಲೀ ಪ್ರಜಾಪ‍್ರಭುತ್ವಕ್ಕೆ ಸಲ್ಲದ ನಡೆ. ಆದರೆ ಇತ್ತೀಚೆಗೆ ಮಠಾಧೀಶರು ರಾಜಕೀಯದಲ್ಲಿ ಮೂಗು ತೂರಿಸುವ, ಅನವಶ್ಯಕ ಹಸ್ತಕ್ಷೇಪ ಮಾಡುವ, ಅಧಿಕಾರಸ್ಥರಿಗೆ ಬಹಿರಂಗವಾಗಿ ಧಮಕಿ ಹಾಕುವ ಉಸಾಬರಿಯಲ್ಲಿ ತೊಡಗಿರುವುದು ಅಪಾಯಕಾರಿ ಬೆಳವಣಿಗೆ. ಇದು ಖಂಡನಾರ್ಹ.

ಯಾವುದೇ ಒಂದು ಜಾತಿಯಿಂದ ಅಥವಾ ಜಾತಿಯ ಬೆಂಬಲದಿಂದ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಜಾತಿ, ಧರ್ಮದ ಹಿನ್ನೆಲೆಯಲ್ಲಿ ಸ್ಥಾನಮಾನ ಕೇಳುವುದಾಗಲೀ, ಪಡೆಯುವುದಾಗಲೀ ಪ್ರಜಾತಂತ್ರಕ್ಕೆ ದೊಡ್ಡ ಕಳಂಕ. ಯೋಗ್ಯತೆ, ಸೇವೆ, ಸಾಧನೆ, ಪ್ರಾಮಾಣಿಕತೆ ಆಧರಿಸಿ ಪದವಿ ಸಿಗುವುದಾದರೆ ಅದು ಸಾರ್ಥಕ. ಅಷ್ಟೇ ಅಲ್ಲ, ಪುರಸ್ಕಾರ ಪಡೆದವರಿಗೂ ಅದನ್ನು ಪ್ರದಾನ ಮಾಡಿದವರಿಗೂ ಗೌರವ, ಅಭಿನಂದನೆ ಸಲ್ಲುತ್ತದೆ.

- ಪ್ರೊ. ಆರ್.ವಿ.ಹೊರಡಿ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು