ಮೈಸೂರಿನ ದಸರಾ ಜಂಬೂ ಸವಾರಿ ಇತ್ತೀಚೆಗೆ ಶಿಸ್ತು ಬದ್ಧವಾಗಿ ನಡೆಯುತ್ತಿಲ್ಲ. ರಾಜರ ಕಾಲದಲ್ಲಿ ನಡೆಯುತ್ತಿದ್ದ ಶಿಸ್ತುಬದ್ಧ ಜಂಬೂಸವಾರಿಗೂ, ಇಂದಿನ ಶಿಸ್ತಿಲ್ಲದ ಜಂಬೂಸವಾರಿಗೂ ವ್ಯತ್ಯಾಸವಿದೆ. ರಾಜರ ಕಾಲದಲ್ಲಿ ಅರಮನೆಯಿಂದ ಬನ್ನಿ ಮಂಟಪದವರೆಗೂ ನಡೆಯುವ ಪಥಸಂಚಲನದಲ್ಲಿ ಸಮವಸ್ತ್ರಧಾರಿಗಳು ಮಾತ್ರ ಪಾಲ್ಗೊಳ್ಳುತ್ತಿದ್ದರು.

ಆ ಪಾರಂಪರಿಕ ಪರಿಕರಗಳ ನೋಟ ಕಣ್ಣಿಗೆ ನೂತನ ಹಬ್ಬವನ್ನೇ ನೋಡುವಂತಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಜಂಬೂಸವಾರಿಯ ವೇಳೆ ಸಮವಸ್ತ್ರವಿಲ್ಲದ ಜನರು, ಛಾಯಾಗ್ರಾಹಕರು ಹಾಗೂ ರಾಜಕಾರಣಿಗಳು ಅಸಂಬದ್ಧವಾಗಿ ಪಥಸಂಚಲನದಲ್ಲಿ ಅಡ್ಡಾಡುವುದರಿಂದ ಜಂಬೂಸವಾರಿಯ ಆ ನೋಟವು ದೇವರ ರಥದ ಯಾತ್ರೆಯಂತೆ ಕಾಣುತ್ತದೆ.

ಹಳ್ಳಿಯವರು ಈಗಲೂ ವಿಜಯದಶಮಿಯಂದು ನಡೆಯುವ ಜಂಬೂಸವಾರಿಯನ್ನು ಫೌಜ್ ಎಂದೆ ಕರೆಯುತ್ತಾರೆ. ಫೌಜ್ ಎಂದರೆ ಸೈನ್ಯ. ಸೈನ್ಯ ಶಿಸ್ತಿಗೆ ಹೆಸರುವಾಸಿ, ಹಾಗಾಗಿಯೆ ರಾಜರ ಕಾಲದಲ್ಲಿ ಜಂಬೂಸವಾರಿಯಂದು ಸಮವಸ್ತ್ರಧಾರಿಗಳು ಶಿಸ್ತುಬದ್ಧವಾಗಿ ಪಥಸಂಚಲನದಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದರು.

ಹಾಗಾಗಿ ಅಂದಿನ ಜಂಬೂಸವಾರಿ ವಿಶ್ವಖ್ಯಾತಿಯಾಗಲು ಕಾರಣ. ಆದ್ದರಿಂದ ಜಂಬೂಸವಾರಿ ಪಥಸಂಚಲನದಲ್ಲಿ ಸಮವಸ್ತ್ರಧಾರಿಗಳಿಗೆ ಮಾತ್ರ ಅವಕಾಶ ನೀಡುವ ಮೂಲಕ ಪಾರಂಪರಿಕ ಜಂಬೂಸವಾರಿಯ ನೋಟ ಮರುಕಳಿಸುವಂತೆ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.