PHOTOS: ಮೈ ಜುಮ್ಮೆನಿಸುವ ತಮಿಳುನಾಡಿನ ಗ್ರಾಮೀಣ ಕ್ರೀಡೆ ‘ಜಲ್ಲಿಕಟ್ಟು’
ಚೆನ್ನೈ: ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನಲ್ಲಿ ಇಂದು (ಶುಕ್ರವಾರ) ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಂಕ್ರಾಂತಿ ಹಬ್ಬದ ದಿನದಂದು ಆರಂಭವಾಗುವ ಈ ಆಚರಣೆ ತಮಿಳುನಾಡಿನಲ್ಲಿ ಒಂದು ತಿಂಗಳವರೆಗೆ ನಡೆಯಲಿದೆ. ತಮಿಳರು ಪೊಂಗಲ್ ಎಂದು ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಅಕ್ಕಿಯಿಂದ ತಯಾರಿಸಿದ ‘ಕೋಲಮ್’ಗಳು ಈ ಹಬ್ಬದ ಆಕರ್ಷಣೆ. ಹೊಸದಾಗಿ ಬೆಳೆದ ಭತ್ತದಿಂದ ತೆಗೆದ ಅಕ್ಕಿಕಾಳುಗಳನ್ನು ಹಾಕಿ, ಹೆಸರುಬೇಳೆ ಬೆರೆಸಿ ಪೊಂಗಲ್ ಮಾಡುತ್ತಾರೆ. ಈ ಹಬ್ಬದ ಅಂಗವಾಗಿ ಗೂಳಿ ಪಳಗಿಸುವ ಜಲ್ಲಿಕಟ್ಟು ಕ್ರೀಡೆಯೂ ವಿಜೃಂಭಣೆಯಿಂದ ನಡೆಯುತ್ತದೆ.
Jallikattu | Tamil Nadu | Makar Sankranti | Sankranti Festival |ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನ ಅವನಿಯಪುರಂನಲ್ಲಿ ಶುಕ್ರವಾರ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಯೊಂದಿಗೆ ಸೆಣಸಾಡಿದ ಯುವಕ –ಪಿಟಿಐ ಚಿತ್ರ
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನ ಅವನಿಯಪುರಂನಲ್ಲಿ ಶುಕ್ರವಾರ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಯೊಂದಿಗೆ ಸೆಣಸಾಡಿದ ಯುವಕರು –ಪಿಟಿಐ ಚಿತ್ರ
ಮಧುರೆನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ಹೋರಿಯೊಂದನ್ನು ಹಿಡಿಯಲು ಪ್ರಯತ್ನಿಸಿದ ಯುವಕ –ರಾಯಿಟರ್ಸ್ ಚಿತ್ರ
ಮಧುರೆನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ಹೋರಿಯೊಂದನ್ನು ಹಿಡಿಯಲು ಪ್ರಯತ್ನಿಸಿದ ಯುವಕರು
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ
ಮಧುರೆನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ಹೋರಿಯೊಂದನ್ನು ಹಿಡಿಯಲು ಪ್ರಯತ್ನಿಸಿದ ಯುವಕ –ರಾಯಿಟರ್ಸ್ ಚಿತ್ರ
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ
ಮಧುರೆನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ಹೋರಿಯೊಂದನ್ನು ಹಿಡಿಯಲು ಪ್ರಯತ್ನಿಸಿದ ಯುವಕರು –ಎಎಫ್ಪಿ ಚಿತ್ರ
ಮಧುರೆನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ಹೋರಿಯೊಂದನ್ನು ಹಿಡಿಯಲು ಪ್ರಯತ್ನಿಸಿದ ಯುವಕ -ಪಿಟಿಐ ಚಿತ್ರ
ಮಧುರೆನಲ್ಲಿ ಜಲ್ಲಿಕಟ್ಟು ಕ್ರೀಡೆಯ ವೇಳೆ ಹೋರಿಯೊಂದನ್ನು ಹಿಡಿಯಲು ಪ್ರಯತ್ನಿಸಿದ ಯುವಕರು –ರಾಯಿಟರ್ಸ್ ಚಿತ್ರ
ಪೊಂಗಲ್ ಹಬ್ಬದ ಅಂಗವಾಗಿ ತಮಿಳುನಾಡಿನ ಅವನಿಯಪುರಂನಲ್ಲಿ ಶುಕ್ರವಾರ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಯೊಂದಿಗೆ ಸೆಣಸಾಡಿದ ಯುವಕರು –ಎಎಫ್ಪಿ ಚಿತ್ರ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ವೈಟ್ಫೀಲ್ಡ್–ಕೆ.ಆರ್.ಪುರ ಮೆಟ್ರೊ ರೈಲು ಮಾರ್ಗ ಚಾಲನೆ
ವೈಟ್ಫೀಲ್ಡ್–ಕೆ.ಆರ್.ಪುರ ನಡುವಿನ ಮೆಟ್ರೊ ರೈಲು ಮಾರ್ಗ ಶನಿವಾರ ಉದ್ಘಾಟನೆಗೊಂಡಿದೆ. ಆ ಮೂಲಕ ದೇಶದ ಎರಡನೇ ಅತಿದೊಡ್ಡ ಮೆಟ್ರೊ ರೈಲು ಮಾರ್ಗವಾಗಿ ‘ನಮ್ಮ ಮೆಟ್ರೊ’ ಹೊರ ಹೊಮ್ಮಿದೆ.
Namma Metro | Whitefield | KR Pura | Narendra Modi |ವೈಟ್ಫೀಲ್ಡ್–ಕೆ.ಆರ್.ಪುರ ನಡುವಿನ ಮೆಟ್ರೊ ರೈಲು ಮಾರ್ಗ ಶನಿವಾರ ಚಾಲನೆಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಿದರು.
ಆ ಮೂಲಕ ದೇಶದ ಎರಡನೇ ಅತಿದೊಡ್ಡ ಮೆಟ್ರೊ ರೈಲು ಮಾರ್ಗವಾಗಿ ‘ನಮ್ಮ ಮೆಟ್ರೊ’ ಹೊರ ಹೊಮ್ಮಿದೆ.
ವೈಟ್ಫೀಲ್ಡ್–ಕೆ.ಆರ್.ಪುರ ಮೆಟ್ರೊ ಭಾನುವಾರದಿಂದಲೇ ಸಾರ್ವಜನಿಕ ಸಂಚಾರಕ್ಕೆ ಲಭ್ಯವಾಗಲಿದೆ.
‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಿತ ಮೂರನೇ ಮಾರ್ಗ ಇದಾಗಿದೆ.
ಈ ಮಾರ್ಗವನ್ನು ಐಟಿ ಕಾರಿಡಾರ್ ಮಾರ್ಗ ಎಂದು ಕರೆಯಲಾಗುತ್ತಿದೆ.
ಹೊಸ ಮಾರ್ಗದಲ್ಲಿ 12 ನಿಲ್ದಾಣಗಳಿದ್ದು, ಕೆಲವು ನಿಲ್ದಾಣಗಳಿಗೆ ಐಟಿ ಕಂಪನಿಗಳ ಹೆಸರುಗಳನ್ನು ಜೋಡಿಸಿ ಹೆಸರಿಡಲಾಗಿದೆ.
ಕೃಷ್ಣರಾಜಪುರ, ಸಿಂಗಯ್ಯನಪಾಳ್ಯ, ಗರುಡಾಚಾರ್ ಪಾಳ್ಯ, ಹೂಡಿ, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರು ಹಳ್ಳಿ, ಶ್ರೀಸತ್ಯ ಸಾಯಿ ಆಸ್ಪತ್ರೆ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಟ್ರೀ ಪಾರ್ಕ್, ಹೋಪ್ಫಾರ್ಮ್ ಚನ್ನಸಂದ್ರ, ವೈಟ್ಫೀಲ್ಡ್ (ಕಾಡುಗೋಡಿ) ಎಂಬ ಹೆಸರುಗಳನ್ನು ಇಡಲಾಗಿದೆ.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಫೋಟೊ ಗ್ಯಾಲರಿ: ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳ ಮಾರ್ದನಿ
ನಗರದಲ್ಲಿ ನಡೆಯುತ್ತಿರುವ ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು ಮಾರ್ದನಿ... (ಚಿತ್ರಗಳು ಎಸ್.ಕೆ.ದಿನೇಶ್)
Bengaluru International Film Festival | festival |ನಮ್ಮ ಬೆಂಗಳೂರು ಹಬ್ಬ (ಚಿತ್ರಗಳು ಎಸ್.ಕೆ..ದಿನೇಶ್)
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಜಾನಪದ ಕಲಾ ತಂಡಗಳು
ನಮ್ಮ ಬೆಂಗಳೂರು ಹಬ್ಬದಲ್ಲಿ ಸಚಿವರು
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಮಾದಪ್ಪನ ಸನ್ನಿಧಿಯಲ್ಲಿ ವೈಭವದ ಯುಗಾದಿ ರಥೋತ್ಸವ, ಸಾವಿರಾರು ಭಕ್ತರು ಭಾಗಿ
ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆಯ ಅಂಗವಾಗಿ ಮಹದೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಬುಧವಾರ ಬೆಳಿಗ್ಗೆ ವಿಜೃಂಭಣೆಯಿಂದ ನಡೆಯಿತು.
Male Mahadeshwara Temple | Male Mahadeshwara Hills | Ugadi | Rathotsava |ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಯುಗಾದಿ ಜಾತ್ರೆಯ ಅಂಗವಾಗಿ ಮಹದೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಿಲ್ಲೆ, ಹೊರಜಿಲ್ಲೆಗಳು, ನೆರೆಯ ತಮಿಳುನಾಡಿನಿಂದ ಬಂದಿದ್ದ ಸಾವಿರಾರು ಭಕ್ತರು ಮಾದಪ್ಪನ ರಥೋತ್ಸವವನ್ನು ಕಣ್ತುಂಬಿಕೊಂಡರು.
ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆಯಿತು.
ಮಹದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಿದ ಬಳಿಕ, ಅಲಂಕೃತ ತೇರಿನಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆ ರಥೋತ್ಸವ ಆರಂಭವಾಯಿತು. ನೂರಾರು ಭಕ್ತರು, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ದೇವಾಲಯದ ಸುತ್ತ ಒಂದು ಬಾರಿ ತೇರನ್ನು ಎಳೆದರು.
ದೇವಾಲಯದ ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರು ನಾಣ್ಯ, ಹಣ್ಣು ಧವಸವನ್ನು ತೇರಿಗೆ ಎಸೆದು ಹರಕೆ ತೀರಿಸಿದರು. 'ಉಘೇ ಉಘೇ ಮಾದಪ್ಪ' 'ಮಾಯ್ಕಾರ ಮಾದಪ್ಪನಿಗೆ ಉಘೇ' ಎಂಬ ಘೋಷಣೆಗಳು ಬೆಟ್ಟದಾದ್ಯಂತ ಮಾರ್ದನಿಸಿತು.
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಯುಗಾದಿ 2023: ನವ ಪಲ್ಲವ
ನಮಗೆ ನಿತ್ಯವೂ ನಿದ್ದೆಗೊಮ್ಮೆ ಮರಣ, ಮತ್ತೆ ಎದ್ದೊಡನೆ ಹೊಸಹುಟ್ಟು. ಯುಗಯುಗಾಂತರಗಳ ಹಿಂದೆಯೇ ಪ್ರಕೃತಿ ಹುಟ್ಟು ಪಡೆದರೂ ವರುಷಕ್ಕೊಮ್ಮೆ ಹೊಸಹುಟ್ಟು. ಪ್ರಕೃತಿ ಜೀವನ್ಮುಖಿ, ನಿಂತ ನೀರಲ್ಲ. ಕಾಲಕ್ಕೆ ಸರಿಯಾಗಿ ನಿಸರ್ಗದ ಬದಲಾವಣೆ ನಿರಂತರ. ಇದುವೇ ಋತುಮಾನ. ಋತುವಿನ ಆರಂಭವೆಂದರೆ ಹೊಸ ಜೀವನ ಯಾನ. ನವಿರು, ಸೊಗಸು, ವೈವಿಧ್ಯ ತುಂಬಿದ ನವ ಪಲ್ಲವಿಯ ಋತುಗಾನ. ಕಂಗೊಳಿಸುವ ನಿಸರ್ಗವನ್ನು ನೋಡುವುದೇ ಆಪ್ಯಾಯಮಾನ. ಈಗ ನಿಸರ್ಗದ ಹೋಳಿ ಆರಂಭಗೊಂಡಿದೆ. ಬೋಳಾದ ಮರಗಳಲ್ಲಿ ಬಣ್ಣಬಣ್ಣದ ಚಿಗುರೆಲೆಗಳು, ಹೂಗಳು ಮೂಡಿವೆ. ಎಲೆಯೋ ಹೂವೋ ತಿಳಿಯದಂತೆ ವರ್ಣಮಯ ಮರಗಳ ಒಡಲಲ್ಲಿ ವಿವಿಧ ಹಕ್ಕಿಗಳ ಹಾಡು ವಸಂತನ ಆಗಮನದ ಕುರುಹು ನೀಡುತ್ತಿವೆ. ಜೇನು ಹುಳು, ಭ್ರಮರದ ಉಲ್ಲಾಸ, ಕೀಟಗಳ ಹಾರಾಟ ಮಧುಪಾನದ ಕುರುಹಾಗಿದೆ. ಕಾಡೊಳಗೆ ವಿವಿಧ ಹೂಗಳ ಸುವಾಸನೆ ಮಿಶ್ರಿತಗೊಂಡು ವಿಶಿಷ್ಟ ಪರಿಮಳ ಪಸರಿಸುತ್ತಿದೆ. ಹೊಂಗೆಯ ಹುಲುಸು, ಅರಳಿಯ ಸೊಗಸು, ಬೇವಿನ ಕುಡಿ, ಮಾವಿನ ಮಿಡಿ, ಜಾಜಿ, ಜಾಲಿ, ಗೊಬ್ಬಳಿ ಹೂವಿನ ಚಪ್ಪರ, ರಸ್ತೆಯುದ್ದಕ್ಕೂ ಗುಲ್ಮೊಹರಿನ ಮೊಹರು. ಹಾದಿಗುಂಟ ಹೂ ಮಳೆ ಸುರಿಸಿದ ಮಳೆಮರ, ಕಾಪರ್ ಪಾಡ್ ಮರ ಭೂರಮೆಯ ಬೆಡಗಿಗೆ ಸಾಕ್ಷಿಯಾಗುತ್ತಲಿವೆ. ಹೂನಂತೆ ಭಾಸವಾಗುವ ತಿಳಿಗೆಂಪು, ಹಳದಿ, ನಸುಗೆಂಪು, ತಿಳಿಹಳದಿ, ಚಿನ್ನದ ಬಣ್ಣದ ಚಿಗುರೆಲೆಗಳ ಸೊಬಗು ಚೈತ್ರದಲ್ಲಿ ರಂಗುರಂಗಿನ ಹೋಳಿಯಾಟ ಆಡುತ್ತಲಿವೆ. ನಿಸರ್ಗದ ಉಲ್ಲಾಸವನ್ನು ನೋಡುವುದೇ ಒಂದು ದೊಡ್ಡಹಬ್ಬ. ಭೂಮಿ ಚಂದ್ರರ ಚಲನೆಯ ಪರಿಣಾಮದ ಫಲವೇ ಪ್ರಕೃತಿಯ ಸ್ಥಿತ್ಯಂತರದ ಭಾಗವಾಗುವ ಆಶಯ ನಮ್ಮಗಳದ್ದು. ಪ್ರಕೃತಿಯ ಹೊಸಹುಟ್ಟನ್ನು ನೋಡುತ್ತಾ ನಮ್ಮಲ್ಲೂ ಬದಲಾವಣೆಯ ತುಡಿತದೊಂದಿಗೆ ಉಲ್ಲಾಸದ ಆಚರಣೆಯೇ, ಉತ್ಸಾಹದ ಪ್ರತೀಕವೇ ಉಗಾದಿ ಹಬ್ಬದ ಹರುಷಕ್ಕೆ ಕಾರಣ. ಬಾಳಿನ ಸಿಹಿಕಹಿಯನ್ನು ಸಮನಾಗಿ ಸ್ವೀಕರಿಸುವ ಆಶಯವೇ ಹಬ್ಬದ ಹೂರಣ.
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ
ಚಿತ್ರ: ಅಶೋಕ ಉಚ್ಚಂಗಿ