ಲಾಕ್‌ಡೌನ್ ಘೋಷಣೆಯಾದ ಪರಿಣಾಮ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಇಂದು (ಗುರುವಾರ) ಬೆಳಿಗ್ಗೆ 10.15ರಿಂದ 1.30ರವರೆಗೆ ರಾಜ್ಯದ 1,016 ಕೇಂದ್ರಗಳಲ್ಲಿ ನಡೆಯಲಿದೆ. ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಲಾಯಿತು. –ಪ್ರಜಾವಾಣಿ ಚಿತ್ರಗಳು
ಪರೀಕ್ಷೆ ಕುರಿತು ಸಮಲೋಚನೆ ನಡೆಸುತ್ತಿರುವ ವಿದ್ಯಾರ್ಥಿನಿಯರು
ಮಂಗಳೂರು ಕೆನರಾ ಕಾಲೇಜನಲ್ಲಿ ದ್ವೀತಿಯ ಪಿ.ಯು.ಸಿ ವಿಧ್ಯಾರ್ಥಿಗಳು ಕೊನೆಯ ಇಂಗ್ಲಿಷ್ ಪರೀಕ್ಷೆ ಬರೆಯಲು ಮಾಸ್ಕ ಧರಿಸಿ ಥರ್ಮಲ್ ಸ್ಕ್ರೀನಿಂಗ ಮಾಡಿ ವಿಧ್ಯಾರ್ಥಿಗಳನ್ನ ಪರೀಕ್ಷಾ ಕೇಂದ್ರಕ್ಕೆ ಬಿಡಾಲಯಿತು.
ಬಾಗಲಕೋಟೆ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲು ಗುರುವಾರ ಬಾಗಲಕೋಟೆಯ ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಿದರು.
ಚಿಕ್ಕಬಳ್ಳಾಪುರದಲ್ಲಿ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಸಾಧನದಿಂದ ಪರೀಕ್ಷಿಸಲಾಯಿತು.
ಕೊಡಗು ಜಿಲ್ಲೆಯ ಬಾಳೆಲೆ ವಿಜಯಲಕ್ಷ್ಮಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳ ತಪಾಸಣೆ
ರಾಯಚೂರಿನ ಟ್ಯಾಗೋರ್ ಪದವಿ ಮಹಾವಿದ್ಯಾಲಯದಲ್ಲಿ ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಥರ್ಮಲ್ ತಪಾಸಣೆ
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯಲು ಹುಬ್ಬಳ್ಳಿ ಯಲ್ಲಿ ಅಂತರ ಕಾಪಾಡಿಕೊಳ್ಳದೆ ಸಾಲಾಗಿ ನಿಂತಿರುವ ವಿದ್ಯಾರ್ಥಿಗಳು
ಬಳ್ಳಾರಿಯ ವಾರ್ಡ್ಲಾ ಕಾಲೇಜಿನಲ್ಲಿ ಪರೀಕ್ಷೆ ಕೊಠಡಿಗೆ ತೆರಳುವ ಮುನ್ನ ವಿದ್ಯಾರ್ಥಿನಿಯರಿಗೆ ಸ್ಯಾನಿಟೈಸರ್ ಸಿಂಪಡಿಸಿದ ಸಿಬ್ಬಂದಿ.
ಚಿತ್ರದುರ್ಗದಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಲಾಯಿತು.