ಚಿತ್ರಾವಳಿ: ಭಾರತ vs ಆಸ್ಟ್ರೇಲಿಯಾ ಐತಿಹಾಸಿಕ ಗುಲಾಬಿ ಚೆಂಡಿನಾಟ; ಇಲ್ಲಿದೆ ಝಲಕ್
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಡಿಲೇಡ್ ಪಂದ್ಯವು ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇತ್ತಂಡಗಳು ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದೆ. ಅಡಿಲೇಡ್ ಓವಲ್ನಲ್ಲಿ ನಡೆಯುತ್ತಿರುವ ಗುಲಾಬಿ ಚೆಂಡಿನಾಟದಲ್ಲಿ ಟಾಸ್ ಗೆದ್ದಿರುವ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಇಲ್ಲಿದೆ ಕೆಲವು ಆಕರ್ಷಕ ಜಲಕ್... ಇನ್ನಷ್ಟು ಸುದ್ದಿಗಳು: IND vs AUS Test:ಪೃಥ್ವಿ, ಮಯಂಕ್ ವಿಕೆಟ್ ಪತನ; ವಿರಾಮಕ್ಕೆ ಭಾರತ 41/2 ಯಾವುದೇ ಬೆಲೆ ತೆತ್ತಾದರೂ ಆ ಕ್ಷಣ ಅಲ್ಲಿರಲು ಬಯಸುತ್ತೇನೆ: ವಿರಾಟ್ ಕೊಹ್ಲಿ ಪೃಥ್ವಿ ಶಾ ಡಕ್ ಔಟ್; ಕೆಎಲ್ ರಾಹುಲ್ಗೆ ಅವಕಾಶ ನೀಡದ್ದಕ್ಕೆ ಆಕ್ರೋಶ
India vs Australia | Pink Ball Test | Virat Kohli |ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ
ಆಸ್ಟ್ರೇಲಿಯಾ ಸಂಪ್ರದಾಯದಂತೆ ಸ್ವಾಗತ
ಕೋವಿಡ್ ಲಾಕ್ಡೌನ್ ಬಳಿಕ ಸ್ಟೇಡಿಯಂಗೆ ಮರಳಿರುವ ಅಭಿಮಾನಿಗಳು
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಭಾರತೀಯ ಆರಂಭಿಕರಾದ ಪೃಥ್ವಿ ಶಾ, ಮಯಂಕ್ ಅಗರವಾಲ್
ಪೃಥ್ವಿ ಶಾ ಕ್ಲೀನ್ ಬೌಲ್ಡ್ ಮಾಡಿದ ಮಿಚೆಲ್ ಸ್ಟಾರ್ಕ್
ಮಯಂಕ್ ವಿಕೆಟ್ ಹಾರಿಸಿದ ಪ್ಯಾಟ್ ಕಮಿನ್ಸ್
ಚೇತೇಶ್ವರ ಪೂಜಾರ ದಿಟ್ಟ ಹೋರಾಟ
ಮೊದಲ ಅವಧಿಯಲ್ಲಿ ಆಸೀಸ್ ಮಾರಕ ದಾಳಿ
ವಿರಾಟ್ ಕೊಹ್ಲಿ ಡಿಫೆನ್ಸ್ ಆಟ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | 'ದಾವಣಗೆರೆ ಎಕ್ಸ್ಪ್ರೆಸ್' ಖ್ಯಾತಿಯ ವಿನಯ್ ಕುಮಾರ್ ಮರೆಯಲಾಗದ ಕ್ಷಣಗಳು
'ದಾವಣಗೆರೆ ಎಕ್ಸ್ಪ್ರೆಸ್' ಖ್ಯಾತಿಯ ಕರ್ನಾಟಕದ ಮಾಜಿ ನಾಯಕ ವಿಯನ್ ಕುಮಾರ್ ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ವಿನಯ್ ಕುಮಾರ್ ಭಾರತ ತಂಡವನ್ನು 31 ಏಕದಿನ, 9 ಟ್ವೆಂಟಿ-20 ಹಾಗೂ ಒಂದು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಹಾಗೆಯೇ ದೇಶೀಯ ಕ್ರಿಕೆಟ್ನಲ್ಲಿ ಕರ್ನಾಟಕ ತಂಡಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.
Vinay Kumar | Karnataka | Team India | Cricket | Davanagere |139 ಫಸ್ಟ್ ಕ್ಲಾಸ್ ಪಂದ್ಯದಲ್ಲಿ 504 ವಿಕೆಟ್ ಸರದಾರ
ಪತ್ನಿ ರಿಚಾ ಜೊತೆ ವಿನಯ್ ಕುಮಾರ್
ಬ್ಯಾಟಿಂಗ್ನಲ್ಲೂ ಉಪಯುಕ್ತ ಕೊಡುಗೆ
ಭಾರತ ತಂಡವನ್ನು ಎಲ್ಲ ಪ್ರಕಾರದ ಕ್ರಿಕೆಟ್ನಲ್ಲೂ ಪ್ರತಿನಿಧಿಸಿದ ಖ್ಯಾತಿ
ಐಪಿಎಲ್, ಕೆಪಿಎಲ್ನಲ್ಲೂ ಮಿಂಚು
ಫಸ್ಟ್ ಕ್ಲಾಸ್ನಲ್ಲಿ 3311 ರನ್ ಕಲೆ ಹಾಕಿದ್ದಾರೆ.
ಲಿಸ್ಟ್ ಎ ಕ್ರಿಕೆಟ್ನಲ್ಲಿ 225 ವಿಕೆಟ್, 1198 ರನ್ ಸಾಧನೆ
ಅಂತರ ರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 49 ವಿಕೆಟ್
2012ರಲ್ಲಿ ಪರ್ತ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕೈಕ ಟೆಸ್ಟ್
2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ, 2013ರಲ್ಲಿ ಕೊನೆಯ ಪಂದ್ಯ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS | ಮೋದಿ ಸ್ಟೇಡಿಯಂನಲ್ಲಿಅಕ್ಷರ್-ಅಶ್ವಿನ್ ಸ್ಪಿನ್ ಮೋಡಿ; ಭಾರತಕ್ಕೆ ಗೆಲುವು
ಅಕ್ಷರ್ ಪಟೇಲ್ (ಪಂದ್ಯದಲ್ಲಿ 11 ವಿಕೆಟ್) ಹಾಗೂ ಆರ್. ಅಶ್ವಿನ್ (ಪಂದ್ಯದಲ್ಲಿ 7 ವಿಕೆಟ್) ಮಾಂತ್ರಿಕ ಸ್ಪಿನ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾವು ಪ್ರವಾಸಿ ಇಂಗ್ಲೆಂಡ್ ವಿರುದ್ಧ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ. ಚಿತ್ರ ಕೃಪೆ (ಪಿಟಿಐ)
India vs England | Test cricket | R Ashwin | Virat Kohli | Ahmedabad |ದ್ವಿತೀಯ ಇನ್ನಿಂಗ್ಸ್ನಲ್ಲೂ ಐದು ವಿಕೆಟ್ ಪಡೆದ ಸ್ಥಳೀಯ ಹೀರೊ ಅಕ್ಷರ್ ಪಟೇಲ್
400 ವಿಕೆಟ್ ಕ್ಲಬ್ ಸೇರಿದ ರವಿಚಂದ್ರನ್ ಅಶ್ವಿನ್
ಮೊದಲ ಇನ್ನಿಂಗ್ಸ್ನಲ್ಲಿ ಆರು ವಿಕೆಟ್ ಕಬಳಿಸಿದ್ದ ಅಕ್ಷರ್ ಪಟೇಲ್
8 ರನ್ ತೆತ್ತು 5 ವಿಕೆಟ್ ಪಡೆದ ಇಂಗ್ಲೆಂಡ್ ನಾಯಕ ಜೋ ರೂಟ್
ಭಾರತೀಯ ಅಭಿಮಾನಿಗಳ ಸಂಭ್ರಮ
100ನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿದ ಇಶಾಂತ್ ಶರ್ಮಾ
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಿಂಕ್ ಬಾಲ್ ಕದನ
ಮೊದಲ ಇನ್ನಿಂಗ್ಸ್ನಲ್ಲಿ ಭಾರತಕ್ಕೆ ಆಸರೆಯಾಗಿದ್ದ ರೋಹಿತ್ ಶರ್ಮಾ
ಧೋನಿ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಸೆ ಜೀವಂತವಾಗಿರಿಸಿದ ಭಾರತ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಿಂಕ್ ಬಾಲ್ ಕದನಕ್ಕೆ ವೇದಿಕೆ ಸಜ್ಜು
ಅಹಮದಾಬಾದ್ ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣವು ಚೊಚ್ಚಲ ಟೆಸ್ಟ್ ಪಂದ್ಯ ಆಯೋಜಿಸಲು ಸನ್ನದ್ಧವಾಗಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊಟೇರಾ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಡೆಯಲಿದೆ. ಈ ಮೈದಾನವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. (ಚಿತ್ರ ಕೃಪೆ: ಎಎಫ್ಪಿ)
Ahmedabad | Cricket | India vs England | Pink Ball Test | Test cricket |ಮೊಟೇರಾ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯವು 1.10 ಲಕ್ಷವಾಗಿದೆ
ಒಟ್ಟು 63 ಎಕರೆ ಜಾಗದಲ್ಲಿ ಈ ಕ್ರೀಡಾಂಗಣದ ನಿರ್ಮಾಣ
ಕೋವಿಡ್ ತಡೆ ಮಾರ್ಗಸೂಚಿಯನ್ವಯ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ
ಕ್ರೀಡಾಂಗಣದ ಮಧ್ಯದಲ್ಲಿ 11 ಪಿಚ್ಗಳು ಇವೆ
ನಾಲ್ಕು ಡ್ರೆಸ್ಸಿಂಗ್ ಕೋಣೆಗಳನ್ನು ಸಿದ್ಧಪಡಿಸಲಾಗಿದೆ
ಇಲ್ಲಿಯ ವಿಶೇಷವೆಂದರೆ ಎಲ್ಲ ಪಿಚ್ಗಳಿಗೂ ಒಂದೇ ರೀತಿಯ ಮಣ್ಣು ಬಳಸಲಾಗಿದೆ
ಅಂತಿಮ ಎರಡು ಪಂದ್ಯಗಳು ಇದೇ ಮೈದಾನದಲ್ಲಿ ಆಯೋಜನೆಯಾಗಲಿದೆ.
ಹೊನಲು ಬೆಳಕಿನಲ್ಲಿ ಉಂಟಾಗುವ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್ಇಡಿ ಬಲ್ಬ್ಗಳನ್ನು ಬಳಸಲಾಗಿದೆ
ಫೆಬ್ರುವರಿ 24ರಂದು ಹಗಲು-ರಾತ್ರಿ ಟೆಸ್ಟ್ ಪಂದ್ಯ ಆರಂಭವಾಗಲಿದೆ.
ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ ಭಾರತ-ಇಂಗ್ಲೆಂಡ್ ಕದನ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
IPL 2021 Auction: 'ಜಾಕ್ಪಾಟ್' ಗಿಟ್ಟಿಸಬಲ್ಲ ಟಾಪ್ 10 ಆಟಗಾರರು!
ಚೆನ್ನೈ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-10 ಕ್ರಿಕೆಟ್ ಟೂರ್ನಿಯ 14ನೇ ಆವೃತ್ತಿಯ ಮಿನಿ ಹರಾಜು ಪ್ರಕ್ರಿಯೆ ಇಂದು (ಫೆ.18) ಚೆನ್ನೈನಲ್ಲಿ ನಡೆಯಲಿದೆ. ಒಟ್ಟು 292 ಆಟಗಾರರು ಕಣದಲ್ಲಿದ್ದಾರೆ. ಪಂಜಾಬ್ ಅತಿ ಹೆಚ್ಚು ₹53.20 ಕೋಟಿ ಪರ್ಸ್ ಹೊಂದಿದೆ. ಪ್ರಸ್ತುತ ಹರಾಜಿನಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಹಾಗೂ ಜಾಕ್ಪಾಟ್ ಗಿಟ್ಟಿಸಬಲ್ಲ ಟಾಪ್ 10 ಆಟಗಾರರ ಬಗ್ಗೆ ಮಾಹಿತಿ ನೀಡಲಾಗಿದೆ. (ಚಿಕ್ರ ಕೃಪೆ: ಪಿಟಿಐ, ಎಎಫ್ಪಿ, ಎಪಿ)
IPL 2021 | IPL auction | RCB | Chennai |ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹2 ಕೋಟಿ
ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹2 ಕೋಟಿ
ಜೇಸನ್ ರಾಯ್ (ಇಂಗ್ಲೆಂಡ್), ಮೂಲ ಬೆಲೆ: ₹2 ಕೋಟಿ
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ಮೂಲ ಬೆಲೆ: ₹2 ಕೋಟಿ
ಕೇದಾರ್ ಜಾಧವ್ (ಭಾರತ), ಮೂಲ ಬೆಲೆ: ₹2 ಕೋಟಿ
ಜೇ ರಿಚರ್ಡ್ಸನ್ (ಆಸ್ಟ್ರೇಲಿಯಾ), ಮೂಲ ಬೆಲೆ: ₹1.5 ಕೋಟಿ
ಲಿಯಾಮ್ ಪ್ಲಂಕೆಟ್ (ಇಂಗ್ಲೆಂಡ್), ಮೂಲ ಬೆಲೆ: ₹2 ಕೋಟಿ
ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾದೇಶ), ಮೂಲ ಬೆಲೆ: ₹1 ಕೋಟಿ
ಕೈಲ್ ಜೆಮೀಸನ್ (ನ್ಯೂಜಿಲೆಂಡ್), ಮೂಲ ಬೆಲೆ: ₹75 ಲಕ್ಷ
ಕ್ರಿಸ್ ಮೊರಿಸ್ (ದಕ್ಷಿಣ ಆಫ್ರಿಕಾ), ಮೂಲ ಬೆಲೆ: ₹75 ಲಕ್ಷ
ಫ್ರಾಂಚೈಸಿಗಳ ಖರೀದಿ ಸಾಮರ್ಥ್ಯ
ಐಪಿಎಲ್ ಮಿನಿ ಹರಾಜು: ಆರ್ಸಿಬಿ ₹35.4 ಕೋಟಿ ಪರ್ಸ್ ಹೊಂದಿದೆ.