ಪ್ರವಾಹಗಳಿಂದ ನಲುಗಿದ ಬಿಬಿಎಂಪಿ

lಕೋರಮಂಗಲ ಕಣಿವೆಯ ರಾಜಕಾಲುವೆಯನ್ನು ₹ 169 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ‘ನಾಗರಿಕರ ನೀರ ಹಾದಿ’ ಯೋಜನೆಗೆ ರಾಜ್ಯ ಸರ್ಕಾರ ಜನವರಿ ತಿಂಗಳಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿತು.

l ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದ ವಲಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿದ 78 ಸಾವಿರ ಮನೆಗಳ ಮಾಲೀಕರಿಗೆ ವ್ಯತ್ಯಾಸದ ಮೊತ್ತ ಪಾವತಿಸುವಂತೆ ಫೆಬ್ರುವರಿ ತಿಂಗಳಿನಿಂದ ನೋಟಿಸ್ ಜಾರಿ ಮಾಡಿತು.

lಅಕ್ಟೋಬರ್ 8ರಂದು ಪಶ್ಚಿಮವಲಯದ ಮಹಾಲಕ್ಷ್ಮೀ ಬಡಾವಣೆ ಹಾಗೂ ಗೋವಿಂದರಾಜಪುರ ವಿಧಾನ ಸಭಾ ಕ್ಷೇತ್ರಗಳ ಹಾಗೂ 17ರಂದು ಎಚ್‌ಎಸ್‌ಆರ್ ಬಡಾವಣೆ ಪ್ರದೇಶದಲ್ಲಿ ಪ್ರವಾಹ

l ನವೆಂಬರ್ ತಿಂಗಳ 21 ಮತ್ತು 22ರಂದು ಸುರಿದ ಭಾರಿ ಮಳೆಗೆ ಯಲಹಂಕ ಪ್ರದೇಶದಲ್ಲಿ ಪ್ರವಾಹ ಸೃಷ್ಟಿ

ವರ್ಷವಿಡೀ ಕಾಡಿದ ಕೋವಿಡ್

l 2021 ಜ.16: ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್‌ಎಸ್‌ವೈ) ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ವಿತರಣೆಗೆ ಚಾಲನೆ.

l ಫೆಬ್ರುವರಿ: ನಗರದಲ್ಲಿ ಕೋವಿಡ್ ಹೊಸ ಪ್ರಕರಣ ಸಂಖ್ಯೆ 200ರ ಆಸುಪಾಸಿಗೆ ಇಳಿಕೆ. ಆಸ್ಪತ್ರೆಗಳಲ್ಲಿ ಕೋವಿಡೇತರ ಚಿಕಿತ್ಸೆಗಳಿಗೆ ಆದ್ಯತೆ. ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಸಾವಿರಕ್ಕೆ ಇಳಿಕೆ.

l ಮಾರ್ಚ್: ಎರಡನೇ ವಾರದ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದು, ದಿನವೊಂದಕ್ಕೆ ದೃಢಪಡುತ್ತಿದ್ದ ಸೋಂಕಿತರ ಸಂಖ್ಯೆ 2 ಸಾವಿರ ಆಸುಪಾಸಿಗೆ ಏರಿಕೆ. ಏ.30 ರಂದು26,756 ಮಂದಿಗೆ ಸೋಂಕು ದೃಢ. ಕೋವಿಡ್ ಆರೈಕೆ ಕೇಂದ್ರಗಳ ಸ್ಥಾಪನೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ.

l ಏಪ್ರಿಲ್: ಕೆಲ ದಿನಗಳು 20 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣಗಳು ದೃಢ. ವೈದ್ಯಕೀಯ ಆಮ್ಲಜನಕ,ರೆಮ್‍ಡಿಸಿವಿರ್ ಔಷಧ ಕೊರತೆ. ರೋಗಿಗಳ ಪರದಾಟ.

l ಮೇ: ನಗರದಲ್ಲಿ 3 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣ. ಆಸ್ಪತ್ರೆಗಳಲ್ಲಿ ಆಮ್ಲಜನ ಸಂಪರ್ಕ ಹಾಗೂ ತೀವ್ರ ನಿಗಾ ಘಟಕ (ಐಸಿಯು) ಹಾಸಿಗೆಗಳ ಸಮಸ್ಯೆ. ಪ್ರತಿನಿತ್ಯ ನೂರಕ್ಕೂ ಅಧಿಕ ಮರಣ ಪ್ರಕರಣಗಳ ವರದಿ.

l ಮೇ–ಜೂನ್: ಶಿಲೀಂಧ್ರ ಸೋಂಕು ಪ್ರಕರಣಗಳು ಹೆಚ್ಚಳ. ಕೋವಿಡ್‌ನಿಂದ ಚೇತರಿಸಿಕೊಂಡ ಹಲವರಿಗೆ ಕಪ್ಪು ಶಿಲೀಂಧ್ರ ಸೋಂಕು ಪತ್ತೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಹಾಗೂ ಚಿಕಿತ್ಸೆಗೆ ಬೇಕಾದ‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧ ಸಮಸ್ಯೆಯಾಯಿತು. ಕೆಲವರು ದೃಷ್ಟಿ ಕಳೆದುಕೊಂಡರು.

l ಕೋವಿಡ್ ಲಸಿಕೆ ಪಡೆದುಕೊಳ್ಳಲು ನಗರದ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಮುಗಿ ಬಿದ್ದ ಜನರು.

lಜುಲೈ: ಎರಡನೇ ವಾರದ ಬಳಿಕ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖ. ದಿನವೊಂದಕ್ಕೆ ದೃಢಪಡುತ್ತಿದ್ದ ಪ್ರಕರಣಗಳ ಸಂಖ್ಯೆ 500ರ ಗಡಿಯೊಳಗೆ ವರದಿ.

lಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಮಕ್ಕಳಿಗೆ ಅಂಗಾಂಗ ಉರಿಯೂತ ಸಮಸ್ಯೆ (ಮಿಸ್–ಸಿ) ಕಾಡಿತು. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

lಜು.15:ಸಂಜಯಗಾಂಧಿಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಮತ್ತು ಕ್ರೀಡಾ ವಿಭಾಗದ ಅತ್ಯಾಧುನಿಕ ಕಟ್ಟಡದ ಶಿಲಾನ್ಯಾಸ.

lಆಗಸ್ಟ್: ಸಂಭಾವ್ಯ ಕೋವಿಡ್ ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ 200 ಹಾಸಿಗೆಗಳ ಕೋವಿಡ್ ಚಿಕಿತ್ಸಾ ನಿರ್ಧಾರ ಕೇಂದ್ರ (ಟ್ರಯಾಜ್ ಸೆಂಟರ್) ನಿರ್ಮಾಣ.

lಸೆ.23:ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಇನ್ಫೊಸಿಸ್ ಪ್ರತಿಷ್ಠಾನದ ನಿರ್ಮಿಸಿರುವ ಹೊರರೋಗಿ ವಿಭಾಗ ಘಟಕ (ಓಪಿಡಿ ಬ್ಲಾಕ್) ಸೇರಿದಂತೆ ವಿವಿಧ ವೈದ್ಯಕೀಯ ಸೌಲಭ್ಯಗಳಿಗೆ ಚಾಲನೆ.

lಅ.10:ರಾಜ್ಯ ಸರ್ಕಾರವು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ಇನ್‌ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟ್ರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಆಸ್ಪತ್ರೆಗೆಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರಿಂದ ಚಾಲನೆ.

l ಅಕ್ಟೋಬರ್: ಅ.29ರಂದು ಮೃತಪಟ್ಟ ನಟ ಪುನೀತ್ ರಾಜ್‌ಕುಮಾರ್ ಅವರ ನೇತ್ರಗಳನ್ನು ದಾನವಾಗಿ ಪಡೆದ ನಾರಾಯಣ ನೇತ್ರಾಲಯ. ಹೊಸ ತಂತ್ರಜ್ಞಾನದ ನೆರವಿನಿಂದ ಎರಡು ಕಣ್ಣುಗಳನ್ನು ನಾಲ್ವರಿಗೆ ಅಳವಡಿಕೆ.

l ನ.17: ಇನ್ಫೊಸಿಸ್ ಪ್ರತಿಷ್ಠಾನವು ನಗರದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಿರ್ಮಿಸಿಕೊಟ್ಟಿರುವ 350 ಹಾಸಿಗೆಗಳ ಹೊಸ ಕಟ್ಟಡ ಸಂಕೀರ್ಣಕ್ಕೆ ಚಾಲನೆ. ಇದರೊಂದಿಗೆ ಜಗತ್ತಿನ ಅತೀ ದೊಡ್ಡ ಹೃದ್ರೋಗ ಆಸ್ಪತ್ರೆಯಾಗಿ ಹೊರಹೊಮ್ಮಿದ ಜಯದೇವ ಆಸ್ಪತ್ರೆ.

l ನ.27: ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಶವಾಗಾರದಲ್ಲಿ15 ತಿಂಗಳ ಬಳಿಕ ಕೋವಿಡ್‌ನಿಂದ ಮೃತಪಟ್ಟ ಇಬ್ಬರ ದೇಹ ಪತ್ತೆ.

l ಡಿ.2:ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಯಿಂದ (ಜೀನೋಮ್ ಸೀಕ್ವೆನ್ಸಿಂಗ್) ನಗರದಲ್ಲಿ ಇಬ್ಬರಿಗೆ ಓಮೈಕ್ರಾನ್ ಸೋಂಕು ದೃಢ. ದೇಶದಲ್ಲಿಯೇ ಪ್ರಥಮ ಪ್ರಕರಣ ಇಲ್ಲಿ ವರದಿ. ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ.

l 2021 ಡಿ.23: ಲಸಿಕೆ ವಿತರಣೆಯಲ್ಲಿ ಶೇ 100 ರಷ್ಟು ಸಾಧನೆ.ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳ ವಿತರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಶೇ 100 ರಷ್ಟು ಸಾಧನೆ ಮಾಡಿತು.ಈ ಸಾಧನೆ ಮಾಡಿದ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹಿರಿಮೆಗೆ ಭಾಜನ.

ವಿಷಾದದ ನಡುವೆ ಸಂಭ್ರಮ

l ಫೆ.8ರಿಂದ 12: ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್) ಪ್ರಾಂಗಣದಲ್ಲಿ ಭೌತಿಕ ಮತ್ತು ಆನ್‌ಲೈನ್ ಮೂಲಕ ನಡೆದ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ದಲ್ಲಿ 211 ಕೃಷಿ ಪ್ರಾತ್ಯಕ್ಷಿಕೆಗಳು ಹಾಗೂ257ಹೊಸ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸಲಾಯಿತು. ಕೋವಿಡ್ ನಿರ್ಬಂಧಗಳಿಂದ ಮೇಳದ ಭೌತಿಕ ವೀಕ್ಷಣೆಗೆ 70 ಸಾವಿರ ಮಂದಿಗೆ ಅವಕಾಶವಿತ್ತು. ಆನ್‌ಲೈನ್ ವೇದಿಕೆಗಳಲ್ಲಿ16.3 ಲಕ್ಷ ಮಂದಿ ಮೇಳ ಕಣ್ತುಂಬಿಕೊಂಡರು.

lನ.11–14:ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ‘ಕೃಷಿ ಮೇಳ’ ಭೌತಿಕ ಹಾಗೂ ಆನ್‌ಲೈನ್ ಮೂಲಕ ನಡೆಯಿತು. 10 ಹೊಸ ತಳಿಗಳು ಹಾಗೂ 28 ನೂತನ ಕೃಷಿ ತಂತ್ರಜ್ಞಾನಗಳು ರೈತರ ಗಮನ ಸೆಳೆಯಿತು. 8 ಲಕ್ಷಕ್ಕೂ ಹೆಚ್ಚು ಜನ ಮೇಳಕ್ಕೆ ಬಂದಿದ್ದರು.

lಡಿ.18 ಮತ್ತು 19:ಸಾಹಿತ್ಯ ಮತ್ತು ಸಂಸ್ಕೃತಿ ಬಿಂಬಿಸುವ ‘ಬೆಂಗಳೂರು ಸಾಹಿತ್ಯ ಉತ್ಸವ’ ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ನಡೆಯಿತು.ಅಂತರರಾಷ್ಟ್ರೀಯ ಲೇಖಕರು ಸೇರಿದಂತೆ 160ಕ್ಕೂ ಹೆಚ್ಚು ಸಾಹಿತಿಗಳು, ಭಾಷಣಕಾರರು ಉತ್ಸವದಲ್ಲಿ ಭಾಗಿಯಾಗಿದ್ದರು.

ಕೆಂಗೇರಿವರೆಗೆ ಮೆಟ್ರೊ

l ಮೆಟ್ರೊ ರೈಲು ನೇರಳೆ ಮಾರ್ಗ ಮೈಸೂರು ರಸ್ತೆಯಿಂದ ಕೆಂಗೇರಿ ತನಕ ವಿಸ್ತರಣೆಗೊಂಡರೆ, ಹಸಿರು ಮಾರ್ಗ ಯಲಚೇನಹಳ್ಳಿಯಿಂದ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆ ತನಕ ವಿಸ್ತರಣೆಗೊಂಡಿದೆ. ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ಕಾಮಗಾರ ಭರದಿಂದ ಸಾಗಿದೆ.

l ಆರನೇ ವೇತನ ಆಯೋಗದ ಶಿಫಾರಸುಗಳನ್ನು ಸಾರಿಗೆ ನೌಕರರಿಗೂ ಅನ್ವಯಿಸಬೇಕು ಎಂದು ಒತ್ತಾಯಿಸಿ 2021ರ ಏಪ್ರಿಲ್‌ನಲ್ಲಿ ನೌಕರರು ಮುಷ್ಕರ ನಡೆಸಿದ್ದರು. ಜಗ್ಗದ ಸರ್ಕಾರ, ಮುಷ್ಕರನಿರತ ನೌಕರರ ವಜಾ ಮತ್ತು ಅಮಾನತು ಕ್ರಮ ಅನುಸರಿಸಿತು. ಕೋವಿಡ್ ಕಾರಣದಿಂದ ನೌಕರರಿಗೆ ವರ್ಷವಿಡೀ ಸಮಯಕ್ಕೆ ಸರಿಯಾಗಿ ವೇತನ ಬಿಡುಗಡೆಯಾಗಿಲ್ಲ.

l ಎಲೆಕ್ಟ್ರಿಕ್ ವಾಹನಗಳ ಜಮಾನಕ್ಕೆ ಹೊಂದಿಕೊಳ್ಳುವ ಹೆಜ್ಜೆಯನ್ನು ಬಿಎಂಟಿಸಿ ಇದೇ ಮೊದಲ ಬಾರಿಗೆ ಇಟ್ಟಿತು. ಎಲೆಕ್ಟ್ರಿಕ್ ಬಸ್‌ಗಳ ಸಂಚಾರವನ್ನು ಬೆಂಗಳೂರಿನಲ್ಲಿ ಆರಂಭಿಸಿತು.

ಸಿಬಿಐ

lಜನವರಿ– ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲು.

l ಮಾರ್ಚ್– ಐಎಂಎ ಪ್ರಕರಣದಲ್ಲಿ ಬಿಡಿಎ ಹಿಂದಿನ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ.

ಆದಾಯ ತೆರಿಗೆ

l ಅಕ್ಟೋಬರ್– ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವಾಲಯದ ಸಿಬ್ಬಂದಿ ಆಯನೂರು ಉಮೇಶ್ ಸೇರಿದಂತೆ ಹಲವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ. ₹ 750 ಕೋಟಿ ಅಘೋಷಿತ ಆಸ್ತಿ ಪತ್ತೆ.

ಭ್ರಷ್ಟಾಚಾರ ನಿಗ್ರಹ ದಳ

l ಫೆಬ್ರುವರಿ– ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಒಂಭತ್ತು ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ.

l ನವೆಂಬರ್– ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೇಲೆ ದಾಳಿ. ನೂರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳ ಪತ್ತೆ.

l ನವೆಂಬರ್– ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ 15 ಮಂದಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.