ಚಂದ್ರತಾಲ್ ಸರೋವರ

ವಿಸ್ತೀರ್ಣ: 1 ಕಿ.ಮೀ ಉದ್ದ

ಈ ಸರೋವರವು ಅರ್ಧಚಂದ್ರಾಕಾರದಲ್ಲಿ ಇರುವುದರಿಂದಚಂದ್ರಾತಾಲ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಹಿಮಾಚಲ ಪ್ರದೇಶದ ಸ್ಪಿತಿ ಮತ್ತು ಲಾಹು ಜಿಲ್ಲೆಯ ಪ್ರಸ್ಥಭೂಮಿಯಲ್ಲಿ ಈ ಸರೋವರ ಬರುತ್ತದೆ. ಇದರ ಸುತ್ತ ಪರ್ವತಗಳು ಸುತ್ತುವರೆದಿವೆ. ಇದು ಪ್ರವಾಸಿಗರಿಗೆ ಮತ್ತು ಚಾರಣಿಗರಿಗೆ ನೆಚ್ಚಿನ ತಾಣ. ಮಹಾಭಾರತದಲ್ಲಿ ಈ ಸರೋವರವು ಪಾಂಡವ ಮತ್ತು ಯುಧಿಷ್ಠಿರನನ್ನು ಸ್ವರ್ಗಕ್ಕೆ ಕರೆಯೊಯ್ಯುವ ಸ್ಥಳ ಎಂಬ ಉಲ್ಲೇಖವಿದೆ. ವಸಂತ ಋತುವಿನಲ್ಲಿ ಹುಲ್ಲುಗಾವಲಿನಲ್ಲಿ ಅರಳಿರುವ ಕಾಡು ಹೂಗಳನ್ನು ನೋಡುವುದೇ ಚಂದ.

ನೈನಿತಾಲ್ ಸರೋವರ

ವಿಸ್ತೀರ್ಣ: 49 ಹೆಕ್ಟೇರ್

ನೈನಿತಾಲ್ ಸಿಹಿನೀರಿನ ಸರೋವರ. ಉತ್ತರಾಖಂಡದ ನೈನಿತಾಲ್ನಲ್ಲಿದೆ. ಮಳೆಗಾಲದಲ್ಲಿ ಈ ಸರೋವರಕ್ಕೆ ಸರಿಸುಮಾರು 43 ಇಂಚು ನೀರಿನ ಒಳಹರಿವಿರುತ್ತದೆ.ನೈನಿತಾಲ್ ಸಮುದ್ರಮಟ್ಟದಿಂದ 1,938 ಮೀಟರ್ ಎತ್ತರದಲ್ಲಿದೆ. ಇದನ್ನು ಲೇಕ್ ಡಿಸ್ಟ್ರಿಕ್ಟ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ಹಿಮಾಲಯ ಪರ್ವತಗಳಿಂದ ಈ ಸರೋವರ ಸುತ್ತುವರಿದಿದೆ.

ಇದಕ್ಕೆ ಸಂಬಂಧಿಸಿದಂತೆ ಅನೇಕ ಪೌರಾಣಿಕ ಕಥೆಗಳಿವೆ. ನೈನಿತಾಲ್ ಸರೋವರವನ್ನು ಈ ಮೊದಲು 'ಮೂರು ಋಷಿ ಮುನಿಗಳ ಸರೋವರ'. ಸಪ್ತ ಋಷಿಗಳ ಗುಂಪಿನ ಅತ್ರಿ, ಪುಲಸ್ತ್ಯ ಮತ್ತು ಪುಲಹಾ ಎಂಬ ಮೂರು ಋಷಿಮುನಿಗಳು ತೀರ್ಥಯಾತ್ರೆಯ ಸಮಯದಲ್ಲಿ ನೈನಿತಾಲ್ಗೆ ಬಂದಿದ್ದರು. ಆದರೆ ಅಲ್ಲಿ ಕುಡಿಯುವ ನೀರು ಸಿಗಲಿಲ್ಲ, ಅವರು ನೆಲವನ್ನು ಅಗೆದು ಪೂಜೆ ಮಾಡಿದ ನಂತರ ಆ ಸ್ಥಳದಲ್ಲಿಯೇ ನೀರು ಸಿಕ್ಕಿತ್ತು ಎನ್ನಲಾಗಿದೆ. ಸ್ಕಂದ ಪುರಾಣದಲ್ಲಿ ತ್ರಿ ರಿಷಿ ಸರೋವರ ಎಂದು ಉಲ್ಲೇಖಿಸಲಾಗಿದೆ. ಆಗ್ನೇಯ ತುದಿಯಲ್ಲಿ ಇದರ ಹೊರಹರಿವನ್ನು ಕಾಣಬಹುದು. ನೈನಿತಾಲ್ ಸರೋವರವು ಮೂತ್ರಪಿಂಡದ ಆಕಾರದಲ್ಲಿದೆ. ನೈನಿತಾಲ್ ಅನ್ನು ಸರೋವರಗಳ ಜಿಲ್ಲೆ ಎಂದು ಕರೆಯಲಾಗಿದ್ದು, ಈ ಪ್ರದೇಶದಲ್ಲಿ ನೆಲೆಗೊಂಡಿರುವ 4 ಸರೋವರಗಳಲ್ಲಿ ನೈನಿತಾಲ್ ಒಂದು. ಉಳಿದ 3 ಸರೋವರಗಳೆಂದರೆ ಸತ್ತಲ್ ಸರೋವರ, ಭೀಮತಾಲ್ ಸರೋವರ ಮತ್ತು ನೌಕುಚಿಯಾಟಲ್ ಸರೋವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.