ಸರ್ಕಾರದಿಂದ ಶಿಕ್ಷಣ, ಉದ್ಯೋಗ, ಆಡಳಿತ– ಈ ಮೂರು ಕ್ಷೇತ್ರಗಳಲ್ಲಿ ಕನ್ನಡಪರ ಕೆಲಸ ಆಗಬೇಕಿದೆ. ರಾಜ್ಯದ ಪಠ್ಯಕ್ರಮದ ಶಾಲೆಗಳಷ್ಟೇ ಅಲ್ಲ, ಕೇಂದ್ರ ಪಠ್ಯಕ್ರಮಗಳಲ್ಲೂ ಕನ್ನಡ ಒಂದು ಭಾಷೆಯಾಗಿ ಕಡ್ಡಾಯವಾಗಬೇಕು. 2014ರ ಸುಪ್ರೀಂ ಕೋರ್ಟಿನ ತೀರ್ಪಿನ ಪ್ರಕಾರ ಶಿಕ್ಷಣ ಮಾಧ್ಯಮದ ಆಯ್ಕೆ ಪೋಷಕರಿಗೆ ಸೇರಿದ್ದರಿಂದ ಸರ್ಕಾರಗಳು ಕಡ್ಡಾಯ ಮಾಡುವಂತಿಲ್ಲ. ಎಲ್ಲ ರಾಜ್ಯಗಳ ಎಲ್ಲ ಮಾದರಿಯ ಪ್ರಾಥಮಿಕ ಶಾಲೆಗಳಲ್ಲಿ ಆಯಾ ರಾಜ್ಯದ ಅಧಿಕೃತ ಭಾಷೆ ಅಥವಾ ಮಾತೃಭಾಷೆಯು ಕಲಿಕೆಯ ಮಾಧ್ಯಮವಾಗಲು ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರುವುದೊಂದೇ ಮಾರ್ಗ.

10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ವೃತ್ತಿ ಶಿಕ್ಷಣದ ಎಲ್ಲ ಕೋರ್ಸ್ಗಳಲ್ಲಿ ಮತ್ತು ಸರ್ಕಾರದ ಉದ್ಯೋಗಗಳಲ್ಲಿ ಮೀಸಲಾತಿಯ ಪ್ರತಿ ವಿಭಾಗದಲ್ಲೂ ಶೇ 5ರಷ್ಟು ಮೀಸಲಾತಿ ನೀಡುವ ಕಾನೂನನ್ನು ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಜಾರಿಗೊಳಿಸಲಾಯಿತು. ಈ ಮೀಸಲಾತಿ ಪ್ರಮಾಣ ಮತ್ತಷ್ಟು ಹೆಚ್ಚಾಗಬೇಕು. ಕನ್ನಡ ಮಾಧ್ಯಮದ ಕಲಿಕೆಯ ಮಾನದಂಡವನ್ನು ಅಗತ್ಯವೆನಿಸಿದರೆ ಹಿರಿಯ ಪ್ರಾಥಮಿಕ ಶಾಲೆಗೆ ಮಿತಿಗೊಳಿಸಬೇಕು.

ಸ್ಥಳೀಯ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿ ಅನುಷ್ಠಾನಗೊಳಿಸಬೇಕು. ಬಹುರಾಷ್ಟ್ರೀಯ ಕಂಪನಿಗಳೂ ಈ ನಿಯಮ ಅನುಷ್ಠಾನಗೊಳಿಸಲು ಇಂತಹ ನೀತಿಯೇ ಬೇಕು. ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕಾನೂನು ಕೂಡಾ ನನ್ನ ಅವಧಿಯಲ್ಲಿ ರೂಪಿಸಲಾಗಿತ್ತು. ನಿಯಮದ ಪ್ರಕಾರವೇ ಈ ಕಾನೂನು ರೂಪಿಸಿರುವುದರಿಂದ ಸೂಕ್ತ ಕಠಿಣ ಕ್ರಮ ಕೈಗೊಳ್ಳುವುದು ಮುಖ್ಯ. ಗಡಿಭಾಗ ಮತ್ತು ಹೊರನಾಡಿನ ಕನ್ನಡಿಗರಿಗೆ ಒಳನಾಡಿನ ಕನ್ನಡಿಗರಿಗೆ ಸಿಗುವ ಶೈಕ್ಷಣಿಕ, ಸಾಂಸ್ಕೃತಿಕ, ಸೌಲಭ್ಯಗಳು ಮತ್ತಷ್ಟು ವಿಸ್ತೃತವೂ ಕ್ರಮಬದ್ಧವೂ ಆಗಬೇಕು. ಸರ್ಕಾರಿ ಶಾಲೆಗಳ ಉನ್ನತೀಕರಣ ಕ್ರಿಯೆಯಲ್ಲಿ ಅಧ್ಯಾಪಕರ ಅಭಿಪ್ರಾಯಗಳನ್ನೂ ಪರಿಗಣಿಸಬೇಕು.
–ಬರಗೂರು ರಾಮಚಂದ್ರಪ್ಪ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಓದಿ... ರಾಜ್ಯ ಚುನಾವಣೆ | ‘ಕನ್ನಡ ಅಸ್ಮಿತೆ’ಯ ರಾಜಕಾರಣ; ಬರೀ ಮಾತಿನ ಬಾಣ

ಕಾಯ್ದೆಯಿಂದ ಕನ್ನಡಕ್ಕೆ ಕಾನೂನು ಬಲ

ಸಂವಿಧಾನದಲ್ಲಿ ಮುಖ್ಯವಾದ ತಿದ್ದುಪಡಿ ಆಗಬೇಕು. ಇದುವರೆಗೆ ಎರಡು ಬಾರಿ ಮಾತ್ರ ಭಾಷೆಗೆ ಸಂಬಂಧಪಟ್ಟಂತೆ ತಿದ್ದುಪಡಿ ಆಗಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ 22 ಭಾಷೆಗಳಿಗೂ ಸಮಾನವಾದ ಅವಕಾಶ, ಆದ್ಯತೆ ಕೊಡಬೇಕಾದರೆ ಈ ಎಲ್ಲ ಭಾಷೆಗಳು ಒಂದೇ ಎಂದು ಈ ತಿದ್ದುಪಡಿ ಮೂಲಕ ಮಾಡಬೇಕಿದೆ. ‘ತ್ರಿ ಭಾಷಾ’ ನೀತಿಯು ವೈಜ್ಞಾನಿಕವಾಗಿಲ್ಲ. ಯಾವುದೇ ಒಂದು ನೀತಿ ಜನರ ಮಟ್ಟಿಗೆ ಪ್ರಯೋಜನಕ್ಕೆ ಬಂದಿಲ್ಲವೆಂದರೆ ಪರಿಷ್ಕರಿಸಬೇಕು. ಅದನ್ನು ಯಾವ ಪಕ್ಷಗಳೂ ಮಾಡಿಲ್ಲ. ಚರ್ಚೆಯೂ ಆಗಿಲ್ಲ. ಹೀಗಾಗಿ, ಭಾಷೆಯ ಬಗ್ಗೆ ಇಡೀ ದೇಶದಲ್ಲಿ ಪರಿಶೋಧನೆ (ಆಡಿಟ್) ಆಗಬೇಕು.

ಭಾಷಾವಾರು ರಾಜ್ಯಗಳ ಮೂಲ ಆಶಯದಲ್ಲಿ ಭಾಷೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಇದು ಆಶಯ. ನಾನು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ ಕಾಯ್ದೆ ತಂದಿದ್ದೇನೆ. ಭಾಷಾ ಸಮಾನ ಅವಕಾಶ ಇಲ್ಲದೇ ಇದ್ದುದರಿಂದ ಈ ಕಾಯ್ದೆ ತರಲಾಗಿದೆ. ಈ ಹಿಂದೆಯೇ ಯಾಕೆ ತರಲಿಲ್ಲವೊ ಗೊತ್ತಿಲ್ಲ. ನಾನು ಹಟ ಹಿಡಿದ ಕಾರಣ ಕಾಯ್ದೆ ಆಗಿದೆ. ಇದರಿಂದಾಗಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ, ಜೊತೆಗೆ ಬೆಳೆಸಲು ಸವಲತ್ತು ಸಿಗುವಂತಾಯಿತು. ಕಾನೂನು ಬಲ ಸಿಕ್ಕಿರುವುದರಿಂದ ಕನ್ನಡ ಕಡ್ಡಾಯಗೊಳಿಸಲು ಕೂಡಾ ಅವಕಾಶ ಸಿಕ್ಕಿದೆ. ಈ ಕಾಯ್ದೆಯನ್ನು ಬಳಸಿಕೊಂಡು ಕನ್ನಡವನ್ನು ಶಕ್ತಿಶಾಲಿಯಾಗಿಸಬೇಕು. ಆದರೆ, ಸಂವಿಧಾನದಲ್ಲಿಯೇ ಭಾಷೆಗೆ ಬೇಕಾದ ಬದಲಾವಣೆ ಮಾಡಲೇಬೇಕು.

–ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಪ್ರಾದೇಶಿಕ ಭಾಷೆಗಳ ಉಳಿವು ಮುಖ್ಯ

ಎಲ್ಲ ಪ್ರಾದೇಶಿಕ ಭಾಷೆಗಳ ಉಳಿವು ಬಹಳ ಮುಖ್ಯ. ಸಂವಿಧಾನಾತ್ಮಕವಾಗಿ ರಾಜ್ಯ ಭಾಷೆಯಾಗಿ ಅಂಗೀಕರಿಸಿರುವ ರಾಜ್ಯಗಳಲ್ಲಿ ಆ ಭಾಷೆಯಲ್ಲಿಯೇ ಆಡಳಿತ ನಡೆಯಬೇಕು. ಜೊತೆಗೆ ಇಂಗ್ಲಿಷ್ ಇರಲಿ. ಅಗತ್ಯ ಇದ್ದ ಕಡೆ ಹಿಂದಿಯೂ ಇರಲಿ. ಕನ್ನಡ ಗೊತ್ತಿರುವ ಸ್ಥಳೀಯರಿಗೆ ಶೇ 80ರಷ್ಟು ಉದ್ಯೋಗ ಕಡ್ಡಾಯ ಮಾಡಬೇಕು. ಸರ್ಕಾರಿ ಶಾಲೆಗಳನ್ನು ದುರಸ್ತಿಗೊಳಿಸುವ ಜೊತೆಗೆ, 1ರಿಂದ 4ವರೆಗೆ ಕಲಿಕಾ ಮಾಧ್ಯಮ ಸ್ಥಳೀಯ ಭಾಷೆಯಲ್ಲಿ (ಕನ್ನಡ) ಇರಬೇಕು. ಗಡಿಭಾಗಗಳಲ್ಲಿ ಇತರ ಭಾಷಿಕರು ಬಹುಸಂಖ್ಯಾತರಿರುತ್ತಾರೆ. ಅಂಥ ಕಡೆಯೂ ಅಲ್ಲಿನ ಭಾಷಿಗರ ಜೊತೆಗೆ, ಕನ್ನಡ ಕಲಿಕೆಗೂ ಅವಕಾಶ ಇರಬೇಕು. ಖಾಸಗಿ ಶಾಲೆಗಳಲ್ಲಿರುವ ಮೂಲಸೌಕರ್ಯವನ್ನು ಸರ್ಕಾರಿ ಶಾಲೆಗಳಲ್ಲೂ ಕಲ್ಪಿಸಬೇಕು. ಆ ಮೂಲಕ, ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಬೇಕಿದೆ. ದೆಹಲಿಯಲ್ಲಿ ನಮ್ಮ ಸರ್ಕಾರ (ಎಎಪಿ) ಈಗಾಗಲೇ ಅದನ್ನು ಮಾಡಿ ತೋರಿಸಿದೆ. ರಾಜ್ಯದಲ್ಲಿ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ವಿಷಯವನ್ನು ಹೇಳಿದ್ದೇವೆ.

ನಾಡು, ನುಡಿಯ ಕಳಕಳಿ ಇಲ್ಲದವರಿಗೆ ಟಿಕೆಟ್ ಬೇಡ

ಈ ನೆಲದವರಿಗೆ ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು. ಅಭ್ಯರ್ಥಿ ಆದವ ನಿಗೆ ಇಲ್ಲಿನ ಭಾಷೆಯ ಮೇಲೆ ಹಿಡಿತ ಇರಬೇಕು. ಪ್ರತಿನಿಧಿಸಲು ಬಯಸುವ ಕ್ಷೇತ್ರದ, ಜಿಲ್ಲೆಯ ಇತಿಹಾಸ, ಜನರ ನಾಡಿಮಿಡಿತ ಗೊತ್ತಿರಬೇಕು. ಅದರ ಬದಲು ಭಾಷೆ ಗೊತ್ತಿಲ್ಲದವರಿಗೆ, ಎಲ್ಲಿಂದಲೋ ವಲಸೆ ಬಂದವರಿಗೆ ಟಿಕೆಟ್ ನೀಡಿದರೆ, ಅವರು ತಮ್ಮ ಭಾಷಾ ಪ್ರೇಮ ಮೆರೆಯಲು, ಅದನ್ನು ವಿಜೃಂಭಿಸಲು, ನೆಲೆ ಕಟ್ಟಿಕೊಡಲು ಅವಕಾಶವಾಗುತ್ತದೆ. ಕನ್ನಡ ಭಾಷೆ, ನನ್ನ ನಾಡು, ನನ್ನ ಜನ ಎಂಬ ಕಳಕಳಿ ಇಲ್ಲದವರು ಇಲ್ಲಿ (ಕರ್ನಾಟಕದಲ್ಲಿ) ರಾಜಕೀಯ ಮಾಡಲು ಯೋಗ್ಯರಲ್ಲ.

ಹಿಂದೆ ಎಡಿಎಂಕೆ, ಎಂಇಎಸ್ ಪಕ್ಷಗಳಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕನ್ನಡಿಗರ ಒಗ್ಗಟ್ಟು, ನಮ್ಮ ಸಂಘಟನೆಯ (ಕರ್ನಾಟಕ ರಕ್ಷಣಾ ವೇದಿಕೆ) ಬಲದಿಂದ ಇದಕ್ಕೆ ಕಡಿವಾಣ ಬಿದ್ದಿದೆ. ದಕ್ಷಿಣ ಭಾರತದಿಂದ, ಹಿಂದಿ ರಾಜ್ಯಗಳಿಂದ ವಲಸೆ ಬಂದವರನ್ನು ರಾಷ್ಟ್ರೀಯ ಪಕ್ಷಗಳು ಓಲೈಕೆ ಮಾಡುತ್ತಿವೆ. ಹೀಗೆ ಬಂದವರು ಎಂದೂ ‘ನಮ್ಮವರಾಗಲು’ (ಕನ್ನಡಿಗ) ಹೋಗುವುದಿಲ್ಲ. ಅದರ ಬದಲು ತಮ್ಮದೇ ಕೋಟೆ ಕಟ್ಟಿಕೊಳ್ಳುತ್ತಾರೆ. ಹೀಗಾಗಿ, ಅನ್ಯರಿಗೆ ಟಿಕೆಟ್ ಕೊಡುವ ಪರಿಪಾಠವನ್ನು ರಾಜಕೀಯ ಪಕ್ಷಗಳು ಬಿಡಬೇಕು. ಅಷ್ಟೇ ಅಲ್ಲ, ಎಲ್ಲಿಂದಲೋ ಬಂದು ಟಿಕೆಟ್ ಗಿಟ್ಟಿಸಿಕೊಂಡು ಮತ ಬಯಸಿ ಮನೆಬಾಗಿಲಿಗೆ ಬರುವ ಅಭ್ಯರ್ಥಿಯನ್ನು, ‘ಈ ನೆಲಕ್ಕೆ ನಿನ್ನ ಕೊಡುಗೆ ಏನು’ ಎಂದು ಮತದಾರರಾದ ನಾವು ಪ್ರಶ್ನಿಸುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.