ದೇಶದಾದ್ಯಂತ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಭಾರತದಲ್ಲಿ ಆಚರಣೆ ಮಾಡುವುದು ನಮಗೆಲ್ಲ ಗೊತ್ತೇ ಇದೆ. ಆದರೆ, ಭಾರತ ಹೊರತುಪಡಿಸಿ ಇನ್ನೂ ಅನೇಕ ದೇಶಗಳು ಕೂಡ ಈ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡುತ್ತಾರೆ. ಹಾಗಿದ್ದರೆ, ಭಾರತ ಹೊರತುಪಡಿಸಿ ಯಾವೆಲ್ಲಾ ದೇಶದಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
.ದೀಪಾವಳಿ ರಜೆಯಲ್ಲಿ ಪ್ರವಾಸದ ಯೋಜನೆ ಮಾಡಿದ್ದೀರಾ? ಇಲ್ಲಿವೆ ಉತ್ತಮ ಸ್ಥಳಗಳು.
ನೇಪಾಳ :

ನಮ್ಮ ನೆರೆಯ ರಾಷ್ಟವಾಗಿರುವ ನೇಪಾಳದಲ್ಲಿ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ದೀಪಾವಳಿಯನ್ನು ಇಲ್ಲಿ ತಿಹಾರ್ ಅಥವಾ ಸ್ವಾಂತಿ ಎಂದು ಕರೆಯಲಾಗುತ್ತದೆ. ನೇಪಾಳದಲ್ಲಿ 5 ದಿನಗಳವರೆಗೆ ದೀಪಾವಳಿ ಆಚರಣೆ ನಡೆಯುತ್ತದೆ.

ಶ್ರೀಲಂಕಾ:

ಭಾರತಕ್ಕೂ ಶ್ರೀಲಂಕಾ ದೇಶಕ್ಕೂ ಐತಿಹಾಸಿಕ ಸಂಬಂಧವಿದೆ. ಅಲ್ಲಿನ ತಮಿಳರು ರಾವಣನ ಮೇಲೆ ರಾಮ ವಿಜಯ ಸಾಧಿಸಿದ ದಿನವನ್ನು ದೀಪಾವಳಿಯಾಗಿ ಆಚರಣೆ ಮಾಡುತ್ತಾರೆ.

ಮಲೇಷ್ಯಾ:

ಹರಿ ದೀಪಾವಳಿ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಲ್ಲಿನ ಪ್ರತಿ ಬೀದಿಗಳಲ್ಲಿ ದೀಪಗಳ ಅಲಂಕಾರ ಮಾಡಲಾಗುತ್ತದೆ. ಹಬ್ಬದ ದಿನ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರೂ ಒಟ್ಟಾಗಿ ಸೇರುತ್ತಾರೆ.

ಸಿಂಗಾಪುರ:

ದೀಪಾವಳಿಯ ದಿನ ಸಿಂಗಾಪುರದಲ್ಲಿ ಸರ್ಕಾರಿ ರಜೆಯನ್ನು ನೀಡಲಾಗುತ್ತದೆ. ಲಿಟಲ್ ಇಂಡಿಯಾ ಎಂಬಲ್ಲಿ ಭಾರತೀಯರೆಲ್ಲ ಸೇರಿ ಹಬ್ಬವನ್ನು ಪಟಾಕಿ ಹಾಗೂ ಸಿಹಿ ಹಂಚುವ ಮೂಲಕ ಆಚರಿಸುತ್ತಾರೆ.

ಮಾರಿಷಸ್:

ಮಾರಿಷಸ್ ಭಾರತೀಯ ಸಂಸ್ಕೃತಿಯನ್ನು ಹೋಲುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿನ ಜನರು ದೀಪಾವಳಿಯ ಜೊತೆಗೆ ಭಾರತೀಯ ಹಬ್ಬಗಳಾದ ಹೋಳಿ ಮತ್ತು ಮಹಾ ಶಿವರಾತ್ರಿಯನ್ನು ಆಚರಿಸುತ್ತಾರೆ.

ಥಾಯ್ಲೆಂಡ್:

ಇಲ್ಲಿ ದೀಪಾವಳಿಯನ್ನು ವಿಭಿನ್ನವಾಗಿ ಬಾಳೆ ಎಲೆಗಳಿಂದ ದೀಪವನ್ನು ತಯಾರಿಸಿ ಆಚರಣೆ ಮಾಡುತ್ತಾರೆ. ಹಬ್ಬ ಮುಗಿದ ಮೇಲೆ ದೀಪಗಳನ್ನು ನದಿಯಲ್ಲಿ ತೇಲಿ ಬಿಡುವ ಸಾಂಪ್ರದಾಯವಿದೆ.

ಅಮೆರಿಕ:

ದೀಪಾವಳಿಯಂದು ಅಮೆರಿಕದಲ್ಲಿ ಸರ್ಕಾರಿ ರಜೆಯನ್ನು ನೀಡಲಾಗುತ್ತದೆ. ಭಾರತೀಯರೆಲ್ಲರೂ ಒಂದೆಡೆ ಸೇರಿ ದೀಪಾವಳಿ ಆಚರಿಸುತ್ತಾರೆ. ಅಮೆರಿಕದ ವೈಟ್ ಹೌಸ್ ಮುಂಭಾಗದಲ್ಲಿ ದೀಪಾವಳಿಯಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
.ದೀಪಾವಳಿಗೆ ಉಡುಗೊರೆ ನೀಡುವ ಯೋಜನೆ ಇದೆಯಾ? ಕಡಿಮೆ ಬೆಲೆಗೆ ಇವುಗಳನ್ನು ಕೊಡಿ.
ಆಸ್ಟ್ರೇಲಿಯಾ:

ದೀಪಿ ಪ್ಯಾಂಟಿಎಸ್ ಎಂದು ದೀಪಾವಳಿಯನ್ನು ಕರೆಯಲಾಗುತ್ತದೆ. ಸಿಡ್ನಿ ಮತ್ತು ಮೆಲ್ಬೋರ್ನ್ ನಗರಗಳಲ್ಲಿ ದೀಪಾವಳಿಯನ್ನು ಆಚರಣೆ ಮಾಡಲಾಗುತ್ತದೆ. ಭಾರತೀಯ ಆಹಾರಗಳನ್ನು ತಯಾರಿಸುವ ಮೂಲಕ ವಿಭಿನ್ನವಾಗಿ ದೀಪಾವಳಿ ಆಚರಿಸುತ್ತಾರೆ.

ಯುನೈಟೆಡ್ ಕಿಂಗ್ಡಮ್:

ಲಂಡನ್ ನಗರದಲ್ಲಿ ‘ದಿ ಫೆಸ್ಟಿವಲ್ ಎ ಲೈಟ್ಸ್‘ ಎಂದು ಆಚರಿಸಲಾಗುತ್ತದೆ. ಇಡೀ ನಗರವನ್ನು ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಅಲ್ಲಿನ ಭಾರತೀಯರು ಆಯೋಜಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.