ದೀಪಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ದೀಪಾವಳಿಗೆ ಅತೀ ಹೆಚ್ಚು ರಜಾ ದಿನಗಳು ಸಿಗುವುದರಿಂದ ಕುಟುಂಬ ಅಥವಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವ ಯೋಜನೆ ಮಾಡಿದ್ದರೆ ನಾವು ನಿಮಗೆ ಬೆಂಗಳೂರಿನಿಂದ ಹೋಗಬಹುದಾದ ಕೆಲವು ಉತ್ತಮ ಸ್ಥಳಗಳ ಕುರಿತು ಮಾಹಿತಿ ನೀಡುತ್ತೇವೆ ನೋಡಿ.

ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳು, ಜರಿ ಜಲಪಾತಗಳುಳ್ಳ ಸ್ಥಳಗಳು ಮನಸ್ಸಿಗೆ ಸಂತೋಷವನ್ನು ನೀಡುತ್ತವೆ. ಬೆಂಗಳೂರಿನ ಯಾಂತ್ರಿಕ ಬದುಕಿನಲ್ಲಿ ಬಿಡುವು ಮಾಡುಕೊಂಡು ಹೋಗಲೇ ಬೇಕಾದ ಕೆಲವು ಸ್ಥಳಗಳ ಪಟ್ಟಿ ಇಲ್ಲಿದೆ ನೋಡಿ.
.ಪ್ರವಾಸ: ನೆಮ್ಮದಿಯ ತಾಣ ಶಾಂತಿ ಸ್ತೂಪ.
ಚಿಕ್ಕಮಗಳೂರು:

ಸದಾ ಹಸಿರಿನಿಂದ ಕೂಡಿರುವ ಚಿಕ್ಕಮಗಳೂರು ಬೆಂಗಳೂರಿನಿಂದ 240 ಕಿ.ಮೀ ದೂರದಲ್ಲಿದೆ. ಸ್ವಂತ ವಾಹನಗಳಲ್ಲಿ ಹೋಗುವುದು ಉತ್ತಮ. ಚಿಕ್ಕಮಗಳೂರಿನ ಪ್ರತಿಯೊಂದು ತಾಣಗಳು ಉತ್ತಮ ಅನುಭವ ನೀಡುತ್ತವೆ. ಕಾಫಿ ಎಸ್ಟೇಟ್ಗಳ ಸುಂದರ ನೋಟ ಪ್ರವಾಸಿಗರನ್ನು ಸದಾ ಆಕರ್ಷಿಸುತ್ತದೆ. ಇಲ್ಲಿನ ರಸ್ತೆಯಲ್ಲಿ ಹೋಗುವಾಗ ಮಂಜು ಹಾಗೂ ಹಸಿರಿನ ಗುಡ್ಡಗಳ ಸೌಂದರ್ಯ ಸವಿಯಬಹುದು.

ಚಿಕ್ಕಮಗಳೂರಿನ ಪ್ರಮುಖ ತಾಣವಾದ ಮುಳ್ಳಯ್ಯನಗಿರಿಯಲ್ಲಿ ಚಾರಣ ಮಾಡಬಹುದು. ಬಾಬಾ ಬುಡನ್ಗಿರಿ ಶ್ರೇಣಿ, ಕೆಮ್ಮಣ್ಣು ಗುಂಡಿ ಮತ್ತು ಹೆಬ್ಬೆ ಜಲಪಾತ ಹಾಗೂ ಇತರೆ ಸಣ್ಣ ಪುಟ್ಟ ಜರಿಗಳನ್ನು ಕೂಡ ನೋಡಬಹುದು.

ಆಗುಂಬೆ:

ಭಾರತದ ಕೊನೆಯ ತಗ್ಗು ಪ್ರದೇಶವೆಂದು ಆಗುಂಬೆಯನ್ನು ಕರೆಯಲಾಗುತ್ತದೆ. ದಕ್ಷಿಣದ ಚಿರಾಪುಂಜಿ ಎಂದೇ ಪ್ರಖ್ಯಾತಿ ಪಡೆದಿರುವ ಆಗುಂಬೆ ಪಶ್ಚಿಮ ಘಟ್ಟಗಳ ವಿಹಂಗಮ ನೋಟವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆ ಸೂರ್ಯಾಸ್ತವಾಗಿದೆ. ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ.

ದಟ್ಟವಾದ ಕಾಡು, ಇಳಿಜಾರು ಪ್ರದೇಶ ಹಾಗೂ ತಿರುವುಗಳು ಸಾಹಸಿಗಳಿಗೆ ಉತ್ತಮ ಅನುಭವ ನೀಡುತ್ತದೆ. ಸೀತಾ ನದಿ, ಬರ್ಕಾಣ ಹಾಗೂ ಅಬ್ಬಿ ಜಲಪಾತವನ್ನು ಚಾರಣದ ಮೂಲಕ ತಲುಪಬಹುದು.
.ಪ್ರವಾಸ: ಶೈಯೋಕ್ ಕಣಿವೆಯ ಚೆಲುವು.
ಏರ್ಕಾಡ್:

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಅದ್ಬುತ ಗಿರಿಧಾಮವಾಗಿದೆ. ಬಡವರ ಊಟಿ ಎಂದೇ ಕರೆಯಲಾಗುವ ಏರ್ಕಾಡ್ ಬೆಂಗಳೂರಿನಿಂದ 210 ಕಿ.ಮೀ ದೂರದಲ್ಲಿದೆ. ಇಲ್ಲಿನ ಶಿವರಾಯ್ ಬೆಟ್ಟಗಳು ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿರುವ ಸರೋವರದಲ್ಲಿ ದೋಣಿಯ ವ್ಯವಸ್ಥೆ ಇದ್ದು ಸುರ್ಯಾಸ್ತದ ವೇಳೆಯಲ್ಲಿ ಸುಂದರ ಅನುಭವ ನೀಡುತ್ತದೆ.

ಕಣಿವೆಗಳಾದ ಲೇಡಿಸ್ ಸೀಟ್ ಹಾಗೂ ಪಗೋಡಾ ಪಾಯಿಂಟ್ಗಳೊಂದಿಗೆ ಕಿಲಿಯೂರ್ ಜಲಪಾತಕ್ಕೆ ಚಾರಣ ಹೋಗಬಹುದಾಗಿದೆ. ಬೊಟಾನಿಕಲ್ ಗಾರ್ಡನ್, ಸಿಲ್ಕ್ ಫಾರ್ಮ್ಗಳಿಗೆ ಭೇಟಿ ನೀಡಬಹುದು. ಅಲ್ಲದೇ ಇಲ್ಲಿ ಉತ್ತಮ ಶಾಪಿಂಗ್ ಸೆಂಟರ್ಗಳಿದ್ದು, ಸ್ಥಳೀಯವಾಗಿ ತಯಾರಿಸಿದ ಕರಕುಶಲ ವಸ್ತುಗಳನ್ನು ಖರೀದಿಸಬಹುದಾಗಿದೆ.

ಸಕಲೇಶಪುರ :

ಬೆಂಗಳೂರಿನಿಂದ 220 ಕಿ.ಮೀ ದೂರದಲ್ಲಿರುವ ಸಕಲೇಶಪುರ ಚಾರಣಿಗರಿಗೆ ಪ್ರಿಯವಾದ ಸ್ಥಳವಾಗಿದೆ. ಮಂಜರಾಬಾದ್ನಿಂದ ನಿಮ್ಮ ಪ್ರವಾಸವನ್ನು ಆರಂಭಿಸಬಹುದು. ಹೊಯ್ಸಳ ವಾಸ್ತುಶಿಲ್ಪಗಳ ದೇವಾಲಯವನ್ನು ನೋಡಬಹುದು. ಹೇಮಾವತಿ ನದಿಯ ಪಕ್ಕದಲ್ಲಿರುವ ಸಕಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಕೋಟೆ, ಬಿಸ್ಲೆ ಘಾಟ್ ವ್ಯೂ ಪಾಯಿಂಟ್, ಮುತ್ತುಗುಡ್ಡ, ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಹೋಗಬಹುದಾಗಿದೆ.

ಕೂರ್ಗ್:

ಕೂರ್ಗ್ ಅನ್ನು ಭಾರತದ ಸ್ಕಾಟ್ಲೆಂಡ್ ಎಂದೇ ಕರೆಯುತ್ತಾರೆ. ಸದಾ ಮಂಜಿನಿಂದ ಆವೃತವಾಗಿರುವ ಪ್ರಕೃತಿ ಹಾಗೂ ಬೆಟ್ಟಗಳನ್ನು ನೋಡಬಹುದು. ಕುಟುಂಬದೊಂದಿಗೆ ವಿಶ್ರಾಂತಿ ಪಡೆಯಲು, ಕೂತು ಪ್ರಕೃತಿ ಸೌಂದರ್ಯವನ್ನು ಸವಿಯಲು ಹೇಳಿ ಮಾಡಿಸಿದ ಜಾಗ ಇದಾಗಿದೆ.

ಬೆಂಗಳೂರಿನಿಂದ 225 ಕಿ.ಮೀ ದೂರವಿರುವ ಕೂರ್ಗ್ ಗೆ ಬಸ್ಸು, ಕಾರು ಹಾಗೂ ರೈಲಿನ ಮೂಲಕ ಹೋಗಬಹುದು. ರೈಲಿನಲ್ಲಿ ಮಂಗಳೂರಿಗೆ ತಲುಪಿ ಅಲ್ಲಿಂದ ಟ್ಯಾಕ್ಸಿ ಅಥವಾ ಕಾರಿನಲ್ಲಿ ಪ್ರಯಾಣಿಸಬಹುದು.

ಅಬ್ಬೆ ಜಲಪಾತ, ಬೈಲಕುಪ್ಪೆ, ಮಡಿಕೇರಿ ಕೋಟೆ, ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ದುಬಾರೆ ಆನೆ ಶಿಬಿರಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಈ ಎಲ್ಲ ಸ್ಥಳಗಳು ಪ್ರಕೃತಿಯಿಂದ ಸುತ್ತುವರೆದಿರುವುದು ವಿಷೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.