ಮರು ವಿವಾಹ ಆಗುವ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ವಿಧವೆಯರಿಗೆ ರಾಜ್ಯ ಸರ್ಕಾರದಿಂದ ‘ಪುನರ್ ವಿವಾಹ ಪ್ರೋತ್ಸಾಹ ಧನ‘ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಸಮುದಾಯದ ವಿಧವೆ ಒಬ್ಬರು ಬೇರೆ ವರ್ಗದ ಪುರುಷನನ್ನು ಮರು ಮದುವೆಯಾದರೆ, ಅವರಿಗೆ ₹3 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.

ಈಗಾಗಲೇ ಪ್ರೋತ್ಸಾಹ ಧನ ಪಡೆದಿದ್ದರೆ, ಅವರು ಈ ಯೋಜನೆಯಡಿ ₹2.50 ಲಕ್ಷ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಹತೆಗಳು

ದಂಪತಿಗಳು ಕರ್ನಾಟಕದ ನಿವಾಸಿಯಾಗಿರಬೇಕು.

ಅರ್ಜಿದಾರರು ವಿಧವೆಯಾಗಿದ್ದು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರಬೇಕು.

ಈ ಯೋಜನೆಗೆ ವಾರ್ಷಿಕ ಆದಾಯದ ಮಿತಿಯಿಲ್ಲ.

ದಂಪತಿಗಳು ವಿವಾಹದ ಒಂದು ವರ್ಷದೊಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು

ಪುರುಷನಿಗೆ ಯಾವುದೇ ಜಾತಿ/ಧರ್ಮದ ನಿರ್ಬಂಧಗಳಿಲ್ಲ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಹಂತ 1: ಸಮಾಜ ಕಲ್ಯಾಣ ಇಲಾಖೆಯ https://swdservices.karnataka.gov.in/SWIncentive/WRM/WRMHAhome.aspxವೆಬ್ಸೈಟ್ಗೆ ಭೇಟಿ ನೀಡಿ.

ಹಂತ 2: ನಿಮ್ಮ ಆಧಾರ್ ಕಾರ್ಡ್ ಬಳಸಿ ನೋಂದಣಿ ಮಾಡಿಕೊಳ್ಳಿ. ಕೇಳಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

ಹಂತ 3: ಅಗತ್ಯವಿರುವ ದಾಖಲೆಗಳನ್ನು ನಮೂದಿಸಿ

ಹಂತ 4: ನೀವು ಒದಗಿಸಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ಅರ್ಜಿ ಪೂರ್ಣಗೊಂಡ ಬಳಿಕ "ಸಲ್ಲಿಸು" ಎಂಬುವುದನ್ನು ಒತ್ತಿ.

ನಂತರ ನೀವು ಇಲಾಖೆಯಿಂದ ಎಸ್ಎಂಎಸ್ ಮೂಲಕ ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ

ಹಂತ 5: ಅರ್ಜಿದಾರರು ಒದಗಿಸಿದ ವಿವರಗಳನ್ನು ಸಮಾಜ ಕಲ್ಯಾಣ ಇಲಾಖೆಯು ಪರಿಶೀಲನೆ ಮಾಡುತ್ತದೆ.

ಹಂತ 5: ಉಲ್ಲೇಖಕ್ಕಾಗಿ ಸ್ವೀಕೃತಿ ನಮೂನೆಯ ಮುದ್ರಣವನ್ನು ತೆಗೆದುಕೊಳ್ಳಿ

ಅಗತ್ಯವಿರುವ ದಾಖಲೆಗಳು

ಪತಿಯ ಮರಣ ಪತ್ರ ಹಾಗೂ ಮನೆಯ ವಿಳ್ಳಾಸ

ಆಧಾರ್ ಕಾರ್ಡ್

ಬ್ಯಾಂಕ್ ಖಾತೆ ವಿವರಗಳು

ವಿವಾಹ ನೋಂದಣಿ ಪ್ರಮಾಣಪತ್ರ

ದಂಪತಿ ಭಾವಚಿತ್ರ

ಜಾತಿ ಪ್ರಮಾಣಪತ್ರ ಸಂಖ್ಯೆ

ಮೊಬೈಲ್ ಸಂಖ್ಯೆ

ನಿವಾಸಿ ಪುರಾವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.