ಟಿವಿಎಸ್ ಕಂಪೆನಿ 2001ರ ಮೊದಲು ಹೆಚ್ಚಾಗಿ ಹೆಸರು ಮಾಡಿದ್ದು ಮೊಪೆಡ್ಗಳ ತಯಾರಿಯಲ್ಲಿ. ಮೋಟಾರ್ ಸೈಕಲ್ಗಳಲ್ಲಿ ಅದಕ್ಕೆ ಏನೇನೂ ಹೆಸರಿರಲಿಲ್ಲ. ಆದರೆ, 2001ರ ನಂತರ ಟಿವಿಎಸ್ನ ನಸೀಬೇ ಬದಲಾಗಿ ಹೋಯಿತು. ಅದು ಟಿವಿಎಸ್ ‘ವಿಕ್ಟರ್’ನ ಪರಿಚಯದಿಂದ.

ಟಿವಿಎಸ್ ‘ವಿಕ್ಟರ್’ ಈ ಕಂಪೆನಿಯ ಪೂರ್ಣ ಪ್ರಮಾಣದ ಮೋಟಾರ್ ಸೈಕಲ್. ಅಂದರೆ, ತಾನೇ ಪರಿಪೂರ್ಣವಾಗಿ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಿದ ಬೈಕ್ ಇದು. ಅದರಂತೆಯೇ, ‘ವಿಕ್ಟರ್’ಗೆ ಸಾಕಷ್ಟು ಯಶಸ್ಸೂ ಸಿಕ್ಕಿತು. ಬೈಕ್ ಪ್ರಿಯರು ನಾ ಮುಂದು ತಾ ಮುಂದು ಎಂಬಂತೆ ಈ ಬೈಕ್ ಅನ್ನು ಕೊಂಡಿದ್ದರು. ಇದಕ್ಕೆ ಕಾರಣ ಸರಳ, ಕಡಿಮೆ ಬೆಲೆ, ಅತ್ಯುತ್ತಮ ಗುಣಮಟ್ಟ.

ಯಾವುದೇ ಬೈಕ್ ಭಾರತದಲ್ಲಿ ಯಶಸ್ಸು ಗಳಿಸುವುದು ಇದೇ ಸೂತ್ರದ ಮೇಲೆ. ಬೈಕ್ ಯಾವುದೇ ವಿಭಾಗಕ್ಕೆ ಸೇರಲಿ, ಅದು ಎಕಾನಮಿ ಆಗಿರಲಿ, ಎಕ್ಸೆಕ್ಯುಟಿವ್ ಆಗಿರಲಿ, ಪ್ರೀಮಿಯಂ ಬೈಕ್ ಆಗಿರಲಿ. ಆ ಬೈಕ್ ಉತ್ತಮ ಮೈಲೇಜ್ ನೀಡಬೇಕು. ಜತೆಗೆ, ನಿರ್ವಹಣೆ ಕಡಿಮೆ ಇರಬೇಕು. ಭಾರತದ ಬೈಕ್ ಗ್ರಾಹಕ ‘ರಾಯಲ್ ಎನ್ಫೀಲ್ಡ್’ ಬೈಕ್ಗಳಿಂದಲೂ ಇದನ್ನೇ ನಿರೀಕ್ಷಿಸುತ್ತಾನೆ. ಆಗಾಗ ರಿಪೇರಿಗೆ ಬರುವ ಬೈಕ್ ಅದೆಷ್ಟೇ ದುಬಾರಿಯಾಗಿದ್ದರೂ ಅದರ ಸಹವಾಸಕ್ಕೆ ಯಾರೂ ಹೋಗುವುದಿಲ್ಲ. ಅಷ್ಟೇ ಅಲ್ಲ, ಅದೆಷ್ಟೇ ದೊಡ್ಡ ಎಂಜಿನ್ ಹೊಂದಿದ್ದರೂ, ಕಳಪೆ ಮೈಲೇಜ್ ಕೊಡುವ ಬೈಕ್ ಭಾರತದಲ್ಲಿ ಯಶಸ್ಸು ಪಡೆಯಲು ಸಾಧ್ಯವೇ ಇಲ್ಲ.

ಇದೇ ಕಾರಣಕ್ಕೆ ವಿದೇಶಿ ಬೈಕ್ಗಳು ಸಹ ಭಾರತದಲ್ಲಿ ಬೈಕ್ ಬಿಡುಗಡೆಗೊಳಿಸುವಾಗ, ಮೈಲೇಜ್ ಹೆಚ್ಚು ಬರುವಂತೆ ವಿನ್ಯಾಸ ಮಾಡಿಯೇ ಬಿಡುಗಡೆ ಮಾಡುತ್ತವೆ. ತೀರಾ ದುಬಾರಿ ಐಷಾರಾಮಿ ಬೈಕ್ಗಳ ಬಗ್ಗೆ ಮಾತ್ರ ಮೈಲೇಜ್ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ. ಏಕೆಂದರೆ, ಅದನ್ನು ಕೊಳ್ಳುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.

ಟಿವಿಎಸ್ ‘ವಿಕ್ಟರ್’ನ ವಿಚಾರಕ್ಕೆ ಬರುವುದಾದರೆ, 2001ರಲ್ಲಿ ಬಿಡುಗಡೆಗೊಂಡಾಗ ಈ ಬೈಕ್ಗೆ 110 ಸಿಸಿ ಎಂಜಿನ್ ಇತ್ತು. ಇದು ಸೇರಿದ್ದು ಎಕ್ಸೆಕ್ಯುಟಿವ್ ವಿಭಾಗಕ್ಕೆ. ಅಂದರೆ, ಉತ್ತಮ ವಿನ್ಯಾಸ, ಜತೆಗೆ ಉತ್ತಮ ಮೈಲೇಜ್. ಇವೆರಡೂ ಈ ಬೈಕ್ನಲ್ಲಿತ್ತು. ಅತ್ಯಂತ ನಯವಾದ ಎಂಜಿನ್, ಅತ್ಯುತ್ತಮ ಬ್ರೇಕಿಂಗ್ ಸಿಸ್ಟಂ ಇದರ ವಿಶೇಷತೆ. ಅದಕ್ಕಾಗಿ ದಿನ ಬೆಳಗಾಗುವಷ್ಟರಲ್ಲಿ ‘ವಿಕ್ಟರ್’ ಜಯಗಳಿಸಿತು. ಟಿವಿಎಸ್ ಕಂಪೆನಿ ಸಾಕಷ್ಟು ಹೆಸರು, ಲಾಭ ಎರಡನ್ನೂ ಗಳಿಸಿತು. ಆ ನಂತರವೇ ಟಿವಿಎಸ್ ‘ಅಪಾಚೆ’ ಬೈಕ್ಗಳನ್ನು ಬಿಟ್ಟಿದ್ದು. ಅದಕ್ಕೂ ಮುಂಚೆ, ಟಿವಿಎಸ್ ‘ಫಿಯೆರೊ’ ಇತ್ತಾದರೂ, ಅದು ಸಂಪೂರ್ಣವಾಗಿ ಟಿವಿಎಸ್ ನಿರ್ಮಿಸಿದ ಬೈಕ್ ಅಲ್ಲ. ಅದಕ್ಕೆ ‘ಸುಜುಕಿ’ಯ ಸಹಾಯವಿತ್ತು. ಪೂರ್ಣ ಪ್ರಮಾಣದಲ್ಲೇ ಕೀರ್ತಿ, ನೆಲೆ ನೀಡಿದ್ದು ‘ವಿಕ್ಟರ್’.

‘ವಿಕ್ಟರ್’ ಅನ್ನು ಅನಂತರ ‘ವಿಕ್ಟರ್ ಜಿಎಲ್ಎಕ್ಸ್ 125’ ಎಂದೂ, ‘ಜಿಎಲ್ಎಕ್ಸ್ 100’ ಅವತರಣಿಕೆಯಲ್ಲಿ ಹೊರ ಬಿಡಲಾಯಿತು. ಈಗಲೂ ಅವು ಬರುತ್ತಿವೆ. ಆದರೆ, ಈಗ ಹೊರ ಬರುತ್ತಿರುವುದು 110 ಸಿಸಿಯ ಮೂಲ ಸ್ವರೂಪದ ‘ವಿಕ್ಟರ್’. ಇದನ್ನು ನಾವು ಕ್ಲಾಸಿಕ್ ವಿಕ್ಟರ್ ಎನ್ನಬಹುದು. ಅಂದರೆ, ಹಳೆ ಬೈಕ್ನ ವಿಶ್ವಾಸ ಇದರಲ್ಲಿ ಇರುತ್ತದೆ. ಜತೆಗೆ, ಹೊಸ ಕಾಲಕ್ಕೆ ತಕ್ಕಂತೆ ಕೆಲವು ಮಾರ್ಪಾಟುಗಳನ್ನು ಮಾತ್ರ ಮಾಡಲಾಗಿರುತ್ತದೆ. ಬೆಲೆಯೂ ಕಡಿಮೆ ಇರುತ್ತದೆ. ಹಾಗಾಗಿ, ಮತ್ತೊಮ್ಮೆ, ವಿಕ್ಟರ್ ಪ್ರಿಯರನ್ನು ಸೆಳೆದುಕೊಳ್ಳುವುದು ಟಿವಿಎಸ್ ಪ್ರಯತ್ನ. ಇದಕ್ಕೂ ಮುನ್ನ ಬಜಾಜ್ ‘ಸಿಟಿ-100’ ಬೈಕ್ ಮರುಬಿಡುಗಡೆಗೊಳಿಸಿ ಯಶಸ್ಸು ಗಳಿಸಿತ್ತು. ಈಗ ಟಿವಿಎಸ್ ಇದನ್ನು ಅನುಸರಿಸಿದೆಯಷ್ಟೇ.

ಹೊಸ ವಿಕ್ಟರ್ನಲ್ಲಿ ಏನೇನಿದೆ?
ಹೊಸ ‘ವಿಕ್ಟರ್’ ಹಳೆಯ ವಿಕ್ಟರ್ನಂತಿದೆ. ಇದೇ ಇದರ ವಿಶೇಷ. ಹಳೆಯ ‘ವಿಕ್ಟರ್’ನ ದೇಹ ವಿನ್ಯಾಸ ಇದಕ್ಕಿದೆ. ‘ವಿಕ್ಟರ್’ನದು ಅತ್ಯುತ್ತಮ ವಿನ್ಯಾಸ. ಸ್ಪೋಕ್ ಹಾಗೂ ಅಲಾಯ್ ವ್ಹೀಲ್ ಎರಡೂ ಆಯ್ಕೆಗಳಲ್ಲಿ ಬೈಕ್ ಲಭ್ಯವಿರುತ್ತದೆ. ಬೈಕ್ಗೆ ಸೆಲ್ಫ್ ಸ್ಟಾರ್ಟ್ ಈಗ ಸೇರ್ಪಡೆಯಾಗಲಿದೆ. ಇವಿಷ್ಟನ್ನು ಬಿಟ್ಟರೆ ವಿನ್ಯಾಸ ಪಕ್ಕಾ ಹಳೆಯ ಶೈಲಿಯದೇ ಇರಲಿದೆ.

ಇದರ ಜತೆಗೆ, ಬೈಕ್ಗೆ ಡಿಸ್ಕ್ ಬ್ರೇಕ್ ಇರಲಿದೆ ಎನ್ನಲಾಗಿದೆ. ಇದು ಈ ಬೈಕ್ಗೆ ಹೊಸ ಸೇರ್ಪಡೆ. ಸುರಕ್ಷೆಗೆ ಮೊದಲ ಆದ್ಯತೆ ನೀಡುವುದು ಉದ್ದೇಶ ಎಂದು ಟಿವಿಎಸ್ ಹೇಳಿಕೊಂಡಿದೆ. ಮುಂಬದಿಗೆ ಮಾತ್ರ ಡಿಸ್ಕ್ ಬ್ರೇಕ್. ಹಿಂಬದಿ ಚಕ್ರಕ್ಕೆ 130 ಮಿಲಿಮೀಟರ್ ಡ್ರಂ ಬ್ರೇಕ್ ಇರಲಿದೆ. ವಿಶಾಲವಾದ ಉದ್ದನೆಯ ಸೀಟ್ ಆರಾಮದಾಯಕ ಸವಾರಿಯನ್ನು ನೀಡಲಿದೆ.

ಅಪಾಚೆ 200 ಬಿಡುಗಡೆ?
ಇದರ ಜತೆಗೆ, ‘ಅಪಾಚೆ 200’ ಬೈಕ್ ಸಹ ಬಿಡುಗಡೆ ಆಗಲಿದೆ. ಇದು ‘ಅಪಾಚೆ’ಯ ಮೇಲ್ದರ್ಜೆಯಷ್ಟೇ. ಬಜಾಜ್ ‘ಪಲ್ಸರ್’ ಅನೇಕ ಅವತರಣಿಕೆಗಳನ್ನು ಹೊರಬಿಟ್ಟರೂ ಟಿವಿಎಸ್ ಸುಮ್ಮನೆ ಕುಳಿತಿತ್ತು. ಹೀಗಾಗಿ, ಮಾರುಕಟ್ಟೆಯಲ್ಲಿ ಕೊಂಚ ಹಿನ್ನಡೆಯಾಗಿರುವುದು ನಿಜ. ಈಗ ಹೊಸ 200 ಸಿಸಿಯ ಎಂಜಿನ್ ಇರುವ ಬೈಕ್ ಬಿಡುಗಡೆ ಆಗುತ್ತಿದೆ.

ಅಚ್ಚರಿಯ ಸಂಗತಿಯೆಂದರೆ ಟಿವಿಎಸ್ ‘ಬಿಎಂಡಬ್ಲ್ಯೂನ’ ಬೈಕ್ ಅನ್ನು ಬಿಡುಗಡೆ ಮಾಡಲು ಹೊರಟಿದೆ. ‘ಬಿಎಂಡಬ್ಲ್ಯೂ ಜಿ 350 ಆರ್’ ಎನ್ನುವ ಬೈಕ್ ಬಿಡುಗಡೆ ಮಾಡಲಿರುವುದು ಭಾರತದ ಮಟ್ಟಿಗೆ ಹೊಸ ಬೆಳವಣಿಗೆ. ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ‘ಬಿಎಂಡಬ್ಲ್ಯೂ’ ಇನ್ನೂ ಹೆಜ್ಜೆ ಇಟ್ಟಿರಲಿಲ್ಲ. ಬೈಕ್ಗಳನ್ನು ಆಮದು ಮಾಡಿಕೊಳ್ಳಬೇಕಿತ್ತಷ್ಟೇ. ಈ ಕೆಲಸವನ್ನು ‘ಬಿಎಂಡಬ್ಲ್ಯೂ’ನ ಕಾರ್ ಶೋರೂಂಗಳ ಮೂಲಕವೇ ಮಾಡಿಸಬಹುದಿತ್ತು. ಈಗ ಟಿವಿಎಸ್ ತಾನು ಬಿಡುಗಡೆ ಮಾಡಹೊರಟಿರುವುದು ವಿಶೇಷ ಅನ್ನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.