ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಭಾರತಕ್ಕೆ ಮಣಿದ ನೇಪಾಳ

Last Updated 14 ನವೆಂಬರ್ 2019, 19:55 IST
ಅಕ್ಷರ ಗಾತ್ರ

ಸಾವರ್‌, ಬಾಂಗ್ಲಾದೇಶ: ಸೌರಭ್‌ ದುಬೆ (26ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಹಾಗೂ ನಾಯಕ ಬಿ.ಆರ್‌.ಶರತ್‌ (49; 49ಎ, 8ಬೌಂ, 1ಸಿ) ಮತ್ತು ಸನ್ವೀರ್‌ ಸಿಂಗ್‌ (56; 73ಎ, 4ಬೌಂ) ಅವರ ಉತ್ತಮ ಬ್ಯಾಟಿಂಗ್‌ ನೆರವಿನಿಂದ ಭಾರತದ 23 ವರ್ಷದೊಳಗಿನವರ ತಂಡ ಎಸಿಸಿ ಎಮರ್ಜಿಂಗ್‌ ಟೀಮ್ಸ್‌ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ನೇಪಾಳ ತಂಡವನ್ನು ಮಣಿಸಿದೆ.

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ನೇಪಾಳ 44.5 ಓವರ್‌ಗಳಲ್ಲಿ 193ರನ್‌ ಗಳಿಸಿತು. ಸುಲಭ ಗುರಿಯನ್ನು ಕನ್ನಡಿಗ ಶರತ್‌ ಸಾರಥ್ಯದ ಭಾರತ 42 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ನೇಪಾಳ; 44.5 ಓವರ್‌ಗಳಲ್ಲಿ 193 (ಕುಶಾಲ್‌ ಭುರ್ಟೆಲ್‌ 28, ಶರದ್‌ ವೇಸವಕರ್‌ 44, ದೀಪೇಂದ್ರಸಿಂಗ್‌ ಅಯಿರೀ 24, ಪವನ್‌ ಸರಾಫ್‌ 56, ಕೆ.ಸಿ.ಕರಣ್‌ 20; ಸೌರಭ್ ದುಬೆ 26ಕ್ಕೆ4, ಪಾರ್ಥ ರೇಖಂಡೆ 5ಕ್ಕೆ2, ಯಶ್‌ ರಾಥೋಡ್‌ 38ಕ್ಕೆ3, ಸಿದ್ಧಾರ್ಥ್‌ ದೇಸಾಯಿ 35ಕ್ಕೆ1).

ಭಾರತ: 42 ಓವರ್‌ಗಳಲ್ಲಿ 3 ವಿಕೆಟ್‌ಗೆ 194 (ಬಿ.ಆರ್‌.ಶರತ್‌ 49, ಆರ್ಯನ್ ಜುಯಲ್‌ 29, ಸನ್ವೀರ್‌ ಸಿಂಗ್‌ 56, ಅರ್ಮಾನ್‌ ಜಾಫರ್‌ ಔಟಾಗದೆ 51; ಕೆ.ಸಿ.ಕರಣ್‌ 25ಕ್ಕೆ1, ಲಲಿತ್‌ ರಾಜಬನ್ಸಿ 43ಕ್ಕೆ1, ಸುಶಾನ್‌ ಬಾರಿ 40ಕ್ಕೆ1). ಫಲಿತಾಂಶ: ಭಾರತಕ್ಕೆ 7 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT