ಭಾನುವಾರ, ನವೆಂಬರ್ 17, 2019
28 °C

ಕ್ರಿಕೆಟ್: ವಿಂಡೀಸ್‌ಗೆ ಮಣಿದ ಅಫ್ಗನ್

Published:
Updated:
Prajavani

ಲಖನೌ: ಆಲ್‌ರೌಂಡ್ ಆಟವಾಡಿದ ರಾಸ್ಟನ್ ಚೇಸ್ (94 ರನ್ ಮತ್ತು 31ಕ್ಕೆ2) ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಆಫ್ಗಾನಿಸ್ತಾನ ಎದುರಿನ ಏಕದಿನ ಸರಣಿಯ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯಿಸಿತು.

ಇಲ್ಲಿಯ ಭಾರತರತ್ನ ಶ್ರೀ ಅಟಲ್‌ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೆರಿಬಿಯನ್ ದ್ವೀಪದ ಬೌಲರ್‌ಗಳ ದಾಳಿಗೆ ‘ಆತಿಥೇಯ’ ಅಫ್ಗಾನಿಸ್ತಾನ ತಂಡವು 45.2 ಓವರ್‌ಗಳಲ್ಲಿ 194 ರನ್ ಗಳಿಸಿ  ಅಲೌಟ್ ಆಯಿತು. ರೆಹಮತ್ ಶಾ (61 ರನ್) ಮತ್ತು ಇಕ್ರಮ್ ಅಲ್ ಖಿಲ್ (58 ರನ್) ಅರ್ಧಶತಕ ಬಾರಿಸಿದರು. ಗುರಿ ಬೆನ್ನಟಿದ ವೆಸ್ಟ್ ಇಂಡೀಸ್ ತಂಡವು 46.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 197 ರನ್‌ ಗಳಿಸಿ ಜಯಿಸಿತು.

ಅಫ್ಗಾನಿಸ್ತಾನ ತಂಡಕ್ಕೆ ಭಾರತದ ಡೆಹ್ರಾಡೂನ್‌ ತವರಿನ ತಾಣವಾಗಿದೆ. ಆದ್ದರಿಂದ ಅಫ್ಗನ್ ಆತಿಥ್ಯದ ಪಂದ್ಯಗಳನ್ನು ಲಖನೌನಲ್ಲಿ ಆಯೋಜಿಸಲು ಬಿಸಿಸಿಐ ಅನುಮತಿ ನೀಡಿದೆ. 

ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 45.2 ಓವರ್‌ಗಳಲ್ಲಿ 194 (ರೆಹಮತ್ ಶಾ 61, ಇಕ್ರಮ್ ಅಲಿ ಖಿಲ್ 58, ಅಸ್ಗರ್ ಅಫ್ಗನ್ 35, ಜೇಸನ್ ಹಲ್ಡರ್ 21ಕ್ಕೆ2, ರೊಮ್ಯಾರಿಯೊ ಶೇಫರ್ಡ್ 32ಕ್ಕೆ2, ರಾಸ್ಟನ್ ಚೇಸ್ 31ಕ್ಕೆ2), ವೆಸ್ಟ್ ಇಂಡೀಸ್: 46.3 ಓವರ್‌ಗಳಲ್ಲಿ 3ಕ್ಕೆ197 (ಶಾಯ್ ಹೋಪ್ ಔಟಾಗದೆ 77, ರಾಸ್ಟನ್ ಚೇಸ್ 94, ಮುಜೀಬ್ ಉರ್ ರೆಹಮಾನ್ 33ಕ್ಕೆ2, ನವೀನ್ ಉಲ್ ಹಕ್ 30ಕ್ಕೆ1) ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 7 ವಿಕೆಟ್ ಜಯ.

ಪ್ರತಿಕ್ರಿಯಿಸಿ (+)