ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಆಸೀಸ್ ವಿರುದ್ಧ ಸೆಮಿಫೈನಲ್‌ಗೂ ಮುನ್ನ ಐಸಿಯುಗೆ ದಾಖಲಾಗಿದ್ದ ರಿಜ್ವಾನ್!

Last Updated 12 ನವೆಂಬರ್ 2021, 8:33 IST
ಅಕ್ಷರ ಗಾತ್ರ

ದುಬೈ: ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಎದೆಯ ಸೋಂಕಿನಿಂದ ತೀವ್ರವಾಗಿ ಬಳಲುತ್ತಿದ್ದ ಪಾಕಿಸ್ತಾನದ ಆಟಗಾರ ಮೊಹಮ್ಮದ್ ರಿಜ್ವಾನ್ ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು ಎಂಬುದು ವರದಿಯಾಗಿದೆ.

ಅತೀವ ಬದ್ಧತೆಯನ್ನು ಪ್ರದರ್ಶಿಸಿರುವ ರಿಜ್ವಾನ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಡಿದ್ದರಲ್ಲದೆ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾಗಿದ್ದರು.

ಈ ವಿವರವನ್ನು ಪಾಕಿಸ್ತಾನ ತಂಡದ ವೈದ್ಯ ನಜೀಬ್ ಸೊಮ್ರೂ ಬಹಿರಂಗಪಡಿಸಿದ್ದಾರೆ. ಆದರೆ ರಿಜ್ವಾನ್ ಹೋರಾಟದ ಹೊರತಾಗಿಯೂ ಆಸೀಸ್ ವಿರುದ್ಧ ಐದು ವಿಕೆಟ್ ಅಂತರದ ಸೋಲಿಗೆ ಶರಣಾಗಿರುವ ಪಾಕಿಸ್ತಾನದ ವಿಶ್ವಕಪ್ ಟ್ರೋಫಿ ಕನಸು ಭಗ್ನಗೊಂಡಿತ್ತು.

ನವೆಂಬರ್ 9ರಂದು ಮೊಹಮ್ಮದ್ ರಿಜ್ವಾನ್ ಅವರಿಗೆ ತೀವ್ರ ಎದೆಯ ಸೋಂಕು ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡರು. ಇವೆಲ್ಲವೂ ದೇಶಕ್ಕಾಗಿ ಆಡುವ ಹಂಬಲ ಹಾಗೂ ಸಾಧನೆಯ ದೃಢ ಸಂಕಲ್ಪವನ್ನು ತೋರಿಸುತ್ತದೆ ಎಂದು ಹೇಳಿದರು.

ಬಳಿಕ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ನಾಯಕ ಬಾಬರ್ ಆಜಂ, ಸ್ವತಃ ರಿಜ್ವಾನ್ ಅವರೇ ಸೆಮಿಫೈನಲ್‌ನಲ್ಲಿ ಆಡಲು ಬಯಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಯಕ ಬಾಬರ್ ಆಜಂ ಹಾಗೂ ಫಖರ್ ಜಮಾನ್ ಅವರೊಂದಿಗೆ ಅರ್ಧಶತಕಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದ ರಿಜ್ವಾನ್ 67 ರನ್ ಗಳಿಸಿದ್ದರು. 52 ಎಸೆತಗಳನ್ನು ಎದುರಿಸಿದ್ದ ರಿಜ್ವಾನ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿಗಳು ಸೇರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT