ಭಾನುವಾರ, ನವೆಂಬರ್ 29, 2020
19 °C

ಡೀನ್‌ ಜೋನ್ಸ್‌ಗೆ ಪ್ರಶಸ್ತಿ ಅರ್ಪಿಸಿದ ಕರಾಚಿ ಕಿಂಗ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರಾಚಿ (ಪಿಟಿಐ): ಇಮಾದ್ ವಾಸೀಂ ನಾಯಕತ್ವದ ಕರಾಚಿ ಕಿಂಗ್ಸ್ ತಂಡವು  ಮಂಗಳವಾರ ರಾತ್ರಿ ಪಾಕಿಸ್ತಾನ ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಶಸ್ತಿಯನ್ನು ಜಯಿಸಿತು. ತಂಡದ ಕೋಚ್ ವಾಸೀಂ ಅಕ್ರಂ, ಪ್ರಶಸ್ತಿಯನ್ನು ಈಚೆಗೆ ನಿಧನರಾದ  ವೀಕ್ಷಕ ವಿವರಣೆಗಾರ ಡೀನ್ ಜೋನ್ಸ್‌ ಅವರಿಗೆ ಸಮರ್ಪಿಸಿದರು.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೋನ್ಸ್‌,  ಈಚೆಗೆ ಮುಂಬೈನಲ್ಲಿ ಐಪಿಎಲ್ ವೀಕ್ಷಕ ವಿವರಣೆ ಕಾರ್ಯನಿರ್ವಹಿಸಲು ಬಂದಿದ್ದರು. ಆಗ ಹೋಟೆಲ್‌ನಲ್ಲಿ ಹೃದಯಸ್ಥಂಭನವಾಗಿ ನಿಧನರಾಗಿದ್ದರು. ಮಾರ್ಚ್‌ ತಿಂಗಳಲ್ಲಿ ಪಿಎಸ್‌ಎಲ್ ಟೂರ್ನಿಯ ಕೆಲವು ಲೀಗ್ ಪಂದ್ಯಗಳಲ್ಲಿಯೂ ಅವರು ವೀಕ್ಷಕ ವಿವರಣೆಗಾರರಾಗಿದ್ದರು.  ಕೋವಿಡ್ –19 ಕಾರಣದಿಂದ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.

’ಇದೊಂದು ಕರಾಳ ವರ್ಷ. ನಾನಿದನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ. ನನ್ನ ಗೆಳೆಯ ಡೀನೊ (ಜೋನ್ಸ್) ನಿಧನದ ಸುದ್ದಿಯನ್ನು ಈಗಲೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರು ನಮ್ಮ ತಂಡಕ್ಕೆ ಮಾರ್ಗದರ್ಶನ ಮಾಡಿದ್ದವರು. ಅವರ ಬದ್ಧತೆ, ಕ್ರಿಕೆಟ್ ಪ್ರೀತಿಯು ಅಸಾಧಾರಣವಾದದ್ದು‘ ಎಂದು ಅಕ್ರಂ ಹೇಳಿದರು.

 ಫೈನಲ್ ಪದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಲಾಹೋರ್ ಕಲಂದರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 134 ರನ್‌ಗಳ ಸಾಧಾರಣ ಮೊತ್ತ ಗಳಿಸಿತ್ತು.  ಬಾಬರ್ ಆಜಂ (ಔಟಾಗದೆ 63; 49ಎಸೆತ, 7ಬೌಂಡರಿ) ಅವರ ಅರ್ಧಶತಕದ ಬಲದಿಂದ ತಂಡವು  ಗೆಲುವಿನ ಸಾಧನೆ ಮಾಡಿತು.

ಸಂಕ್ಷಿಪ್ತ ಸ್ಕೋರ್: ಲಾಹೋರ್ ಕಲಂದರ್ಸ್: 20 ಓವರ್‌ಗಳಲ್ಲಿ 7ಕ್ಕೆ134 (ತಮೀಮ್ ಇಕ್ಬಾಲ್ 35, ಫಕರ್ ಜಮಾನ್ 27, ವಕಾಸ್ ಮಕ್ಸೂದ್ 18ಕ್ಕೆ2, ಅರ್ಷದ್ ಇಕ್ಬಾಲ್ 26ಕ್ಕೆ2, ಉಮೇದ್  ಆಸೀಫ್ 18ಕ್ಕೆ2), ಕರಾಚಿ ಕಿಂಗ್ಸ್ : 18.4 ಓವರ್‌ಗಳಲ್ಲಿ 5ಕ್ಕೆ135 (ಬಾಬರ್  ಅಜಂ ಔಟಾಗದೆ 63, ಶೆಡ್ವಿಕ್ ವಾಲ್ಟನ್ 22, ಹ್ಯಾರಿಸ್ ರವೂಫ್ 30ಕ್ಕೆ2, ದಿಲ್‌ಬರ್ ಹುಸೇನ್ 28ಕ್ಕೆ2) ಫಲಿತಾಂಶ: ಕರಾಚಿ ಕಿಂಗ್ಸ್ ತಂಡಕ್ಕೆ 5 ವಿಕೆಟ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು