ಗುರುವಾರ , ಅಕ್ಟೋಬರ್ 22, 2020
27 °C

IPL 2020: ಗಾಯಾಳು ಭುವಿ ಟೂರ್ನಿಯಿಂದ ಔಟ್; ಪೃಥ್ವಿಗೆ ಸ್ಥಾನ ನೀಡಿದ ರೈಸರ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಯಗೊಂಡು ಟೂರ್ನಿಯಿಂದ ಹೊರ ನಡೆದಿರುವ ಅನುಭವಿ ವೇಗಿ ಭುವನೇಶ್ವರ್‌ ಕುಮಾರ್‌ ಅವರ ಸ್ಥಾನವನ್ನು ಆಂಧ್ರ ಪ್ರದೇಶದ ಎಡಗೈ ವೇಗಿ ಪೃಥ್ವಿ ರಾಜ್‌ ಯರ್ರಾ ತುಂಬಲಿದ್ದಾರೆ ಎಂದು ಸನ್‌ರೈಸರ್ಸ್‌ ಹೈದಾರಾಬಾದ್‌ ತಂಡ ತಿಳಿಸಿದೆ.

ಈ ಬಗ್ಗೆ ಟ್ವಿಟರ್‌ ಮೂಲಕ ಮಾಹಿತಿ ಹಂಚಿಕೊಂಡಿರುವ ರೈಸರ್ಸ್‌, ‘ಗಾಯದ ಸಮಸ್ಯೆಯಿಂದಾಗಿ ಭುವನೇಶ್ವರ್‌ ಕುಮಾರ್‌ ಅವರು #Dream11IPL 2020 ಟೂರ್ನಿಯಿಂದ ಹೊರನಡೆದಿದ್ದಾರೆ. ಅವರು ಬೇಗನೆ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ! ಆವೃತ್ತಿಯ ಉಳಿದ ಪಂದ್ಯಗಳಿಗೆ ಪೃಥ್ವಿ ರಾಜ್‌ ಯರ್ರಾ ಅವರು ಭುವಿ ಸ್ಥಾನವನ್ನು ತುಂಬಲಿದ್ದಾರೆ’ ಎಂದು ತಿಳಿಸಿದೆ.

ಅಕ್ಟೋಬರ್‌ 2ರಂದು ದುಬೈನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಪಂದ್ಯದ ವೇಳೆ ಭುವಿ ಗಾಯಗೊಂಡಿದ್ದರು.

ಕಳೆದ ಬಾರಿ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದಲ್ಲಿದ್ದ ಯರ್ರಾ ಎರಡು ಪಂದ್ಯಗಳನ್ನು ಆಡಿ 1 ವಿಕೆಟ್‌ ಪಡೆದಿದ್ದರು. 11 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ 22 ವರ್ಷದ ಈ ಆಟಗಾರ 39 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು