ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup | ಏಷ್ಯಾ ಕಪ್‌ಗೆ ಪಾಕ್‌ ತಂಡ ಪ್ರಕಟ: ಫಹೀಂಗೆ ಬುಲಾವ್‌, ಶಾನ್‌ಗೆ ಕೊಕ್‌

Published 9 ಆಗಸ್ಟ್ 2023, 14:16 IST
Last Updated 9 ಆಗಸ್ಟ್ 2023, 14:16 IST
ಅಕ್ಷರ ಗಾತ್ರ

ಲಾಹೋರ್‌: ಅಫ್ಗಾನಿಸ್ತಾನ ವಿರುದ್ಧ ಮೂರು ಏಕದಿನ ಪಂದ್ಯಗಳ ಸರಣಿ ಮತ್ತು ಏಷ್ಯಾ ಕಪ್‌ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್‌ ತಂಡವನ್ನು ಬುಧವಾರ ಪ್ರಕಟಿಸಲಾಗಿದ್ದು, ಆಲ್‌ರೌಂಡ್‌ ಆಟಗಾರ ಫಹೀಂ ಅಶ್ರಫ್‌ ಅವರಿಗೆ ಮತ್ತೆ ಮಣೆ ಹಾಕಲಾಗಿದೆ.

29 ವರ್ಷದ ಫಹೀಂ ಅವರು 31 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2021ರ ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ಏಕದಿನ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು.

ಫಹೀಂ ಅವರ ಆಯ್ಕೆಯನ್ನು ಪಾಕಿಸ್ತಾನದ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಇಂಜಮಾಮ್ –ಉಲ್– ಹಕ್ ಸಮರ್ಥಿಸಿಕೊಂಡಿದ್ದಾರೆ. ಫಹೀಂ ಅವರ ಪ್ರಯತ್ನಗಳೇ ಅವರನ್ನು ತಂಡದಲ್ಲಿ ಸ್ಥಾನ ಪಡೆಯುವಂತೆ ಮಾಡಿದೆ ಎಂದಿದ್ದಾರೆ.

‘ಅಫ್ಗಾನ್‌ ವಿರುದ್ಧದ ಸರಣಿಗೆ 18 ಆಟಗಾರರನ್ನು ಮತ್ತು ಏಷ್ಯಾ ಕಪ್‌ ಟೂರ್ನಿಗೆ 17 ಮಂದಿಯಲ್ಲಿ ಆಯ್ಕೆ ಮಾಡಿದ್ದೇವೆ. ಫಹೀಂ ಅವರು ಅತ್ಯುತ್ತಮ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿದ್ದಾರೆ. ಬಾಬರ್ ಅಜಮ್ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ಇಂಜಮಾಮ್‌ ತಿಳಿಸಿದ್ದಾರೆ.

ಮಧ್ಯಮ ಕ್ರಮಾಂಕದ ಬ್ಯಾಟರ್ ಸಾವುದ್ ಶಕೀಲ್ ಅವರನ್ನು ವರ್ಷದ ನಂತರ ತಂಡಕ್ಕೆ ಸೇರಿಸಲಾಗಿದೆ. ಆದರೆ, ಏಷ್ಯಾ ಕಪ್‌ ಟೂರ್ನಿಗೆ ಅವರನ್ನು ಪರಿಗಣಿಸಿಲ್ಲ. ಮಾಜಿ ಉಪನಾಯಕ ಶಾನ್‌ ಮಸೂದ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಗಾಯದ ಸಮಸ್ಯೆಯಿಂದಾಗಿ ವೇಗಿ ಇಹ್ಸಾನುಲ್ಲಾ ಅವರನ್ನೂ ಆಯ್ಕೆ ಮಾಡಿಲ್ಲ.

‘ನಾವು ಏಕದಿನ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಿದ್ದೇವೆ. ಅವರು ದೇಶಕ್ಕೆ ಕೀರ್ತಿ ತರುತ್ತಾರೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ’ ಎಂದು ಸೋಮವಾರವಷ್ಟೇ ಅಧಿಕಾರ ಸ್ವೀಕರಿಸಿದ ಇಂಜಮಾಮ್‌ ತಿಳಿಸಿದ್ದಾರೆ.

ಆಫ್ಗಾನ್‌ ವಿರುದ್ಧದ ಮೂರು ಪಂದ್ಯಗಳು ಆ.22, 24, 26ರಂದು ಶ್ರೀಲಂಕಾದಲ್ಲಿ ನಡೆಯಲಿವೆ. ಏಷ್ಯಾ ಕಪ್‌ ಟೂರ್ನಿಯಯನ್ನು ಆ.30ರಿಂದ ಸೆ.17ರವರೆಗೆ ಆಯೋಜಿಸಲಾಗಿದೆ. ಏಷ್ಯಾ ಕಪ್‌ ಸರಣಿಗೆ ಪಾಕಿಸ್ತಾನಕ್ಕೆ ಭಾರತ ತಂಡ ತೆರಳಲು ನಿರಾಕರಿಸಿರುವ ಕಾರಣ ಅಲ್ಲಿ ನಾಲ್ಕು ಪಂದ್ಯಗಳು ಮಾತ್ರ ನಡೆಯಲಿದ್ದು, ಉಳಿದ 9 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿದೆ.

ಪಾಕಿಸ್ತಾನ ತಂಡ: ಬಾಬರ್ ಆಜಂ (ನಾಯಕ), ಫಖ್ರ್ ಜಮಾನ್, ಮೊಹಮ್ಮದ್ ರಿಜ್ವಾನ್, ಶಾದಾಬ್ ಖಾನ್, ಅಬ್ದುಲ್ಲಾ ಶಫೀಕ್, ಫಹೀಂ ಅಶ್ರಫ್, ಹ್ಯಾರಿಸ್ ರವೂಫ್, ಇಫ್ತಿಕಾರ್ ಅಹ್ಮದ್, ಇಮಾಮ್ ಉಲ್ ಹಕ್, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ವಸೀಂ, ನಸೀಂ ಶಾ, ಆಘಾ ಸಲ್ಮಾನ್, ಶಾಹೀನ್ ಶಾ ಅಫ್ರಿದಿ, ತಯ್ಯಬ್ ತಾಹೀರ್, ಉಸಾಮ ಮಿರ್, ಮೊಹಮ್ಮದ್ ನವಾಜ್, ಸಾವುದ್ ಶಕೀಲ್ (ಅಫ್ಘಾನ್‌ ಸರಣಿಗೆ ಮಾತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT