ನವದೆಹಲಿ: 2026ರ ಟಿ20 ವಿಶ್ವಕಪ್ಗೆ ಸಿದ್ಧತಾ ಟೂರ್ನಿಯ ರೂಪದಲ್ಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಇದೇ ವರ್ಷದ ಸೆಪ್ಟೆಂಬರ್ನಲ್ಲಿ ನಡೆಯುವ ಸಾಧ್ಯತೆಯಿದೆ. ಭಾರತ ಆತಿಥ್ಯದ ಹಕ್ಕುಗಳನ್ನು ಪಡೆದಿದ್ದರೂ, ಟೂರ್ನಿಯು ತಟಸ್ಥ ತಾಣದಲ್ಲಿ ನಡೆಯುವ ಸಾಧ್ಯತೆಯಿದೆ.

2023ರ ವಿಶ್ವಕಪ್ಗೆ ಮೊದಲು ಕೊನೆಯ ಬಾರಿ ಏಷ್ಯಾ ಕಪ್ ಟೂರ್ನಿ ನಡೆದಾಗ ಅದು ಏಕದಿನ ಮಾದರಿಯಲ್ಲಿ ಆಯೋಜನೆಗೊಂಡಿತ್ತು.

‘ಟೂರ್ನಿಯು ಸೆಪ್ಟೆಂಬರ್ನಲ್ಲಿ ನಡೆಯಲಿದೆ. ಭಾರತ ಆತಿಥ್ಯದ ಹಕ್ಕುಗಳನ್ನು ಹೊದಿದೆ. ಆದರೆ ಟೂರ್ನಿಯು ಯುಎಇ ಅಥವಾ ಶ್ರೀಲಂಕಾದಲ್ಲಿ ನಡೆಯಲಿದೆ’ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮೂಲವೊಂದು ತಿಳಿಸಿದೆ. ಪಾಕಿಸ್ತಾನ ತಂಡವು, ಭಾರತದಲ್ಲಿ ಆಡುವ ಸಾಧ್ಯತೆಯೂ ಇಲ್ಲ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ, ಯುಎಇ, ಒಮಾನ್ ಮತ್ತು ಹಾಂಗ್ಕಾಂಗ್ ಕಣದಲ್ಲಿರುವ ಎಂಟು ತಂಡಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.