ಸಿಡ್ನಿ: ಭಾರತ ವಿರುದ್ಧದ ಬಾರ್ಡರ್–ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡದ ಅನುಭವಿ ಆಟಗಾರ ಮಿಚೇಲ್ ಮಾರ್ಷ್ ಅವರನ್ನು ಅಂತಿಮ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ಆಸ್ಟ್ರೇಲಿಯಾ ಕೈ ಬಿಟ್ಟಿದೆ. ಅವರ ಬದಲು ಆಲ್ರೌಂಡರ್ ಬ್ಯೂ ವೆಬ್ಸ್ಟರ್ ಪದಾರ್ಪಣೆ ಮಾಡಲಿದ್ದಾರೆ ಎಂದು ನಾಯಕ ಪ್ಯಾಟ್ ಕಮಿನ್ಸ್ ಗುರುವಾರ ತಿಳಿಸಿದ್ದಾರೆ.

ಟೂರ್ನಿಯ 5ನೇ ಹಾಗೂ ಕೊನೇ ಪಂದ್ಯವು ಸಿಡ್ನಿಯಲ್ಲಿ ನಾಳೆ (ಶುಕ್ರವಾರ) ಆರಂಭವಾಗಲಿದೆ.

ಟೂರ್ನಿಯಲ್ಲಿ ಆತಿಥೇಯ ತಂಡ 2–1 ಅಂತರದ ಮುನ್ನಡೆ ಸಾಧಿಸಿದೆ. ಆದಾಗ್ಯೂ, ಪ್ರಶಸ್ತಿಯನ್ನು ಖಚಿತಪಡಿಸಿಕೊಳ್ಳಲು, ಮುಂದಿನ ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳುವ ಅನಿವಾರ್ಯತೆ ಪ್ಯಾಟ್ ಪಡೆಗಿದೆ.

ಟಿ20 ಕ್ರಿಕೆಟ್ ತಂಡದ ನಾಯಕನಾಗಿರುವ ಮಾರ್ಷ್, ಸರಣಿಯ 4 ಪಂದ್ಯಗಳ 7 ಇನಿಂಗ್ಸ್ಗಳಲ್ಲಿ ಗಳಿಸಿರುವುದು ಕೇವಲ 73 ರನ್. ಪಡೆದಿರುವುದು 3 ವಿಕೆಟ್ಗಳನ್ನಷ್ಟೇ.
.IND vs AUS Test | ಭಾರತ ತಂಡ ನಿರ್ವಹಣೆಯಲ್ಲಿ ಗಂಭೀರ್ ವೈಫಲ್ಯ?.ಆಸಿಸ್ ಬ್ಯಾಟರ್ ಮಾರ್ಷ್ ಕಳೆದ 10 ಇನಿಂಗ್ಸ್ಗಳಲ್ಲಿ ಎರಡಂಕಿ ದಾಟಿದ್ದು ಎರಡೇ ಸಲ!.
ಸಿಡ್ನಿ ಕ್ರೀಡಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕಮಿನ್ಸ್, 'ಬ್ಯೂ ಈಗ ತಂಡದಲ್ಲಿದ್ದಾರೆ. ಮಿಚಿ (ಮಿಚೇಲ್ ಮಾರ್ಷ್) ಅಂದಕೊಂಡಷ್ಟು ರನ್ ಅಥವಾ ವಿಕೆಟ್ ಗಳಿಸಲು ವಿಫಲರಾಗಿರುವುದರಿಂದ, ಹೊಸಮುಖದತ್ತ ನೋಡಬೇಕಾಗಿದೆ' ಎಂದಿದ್ದಾರೆ.

'ಮಿಚಿ ತಂಡಕ್ಕೆ ಎಷ್ಟು ಮುಖ್ಯ ಎಂಬುದು ನಮಗೆ ಗೊತ್ತಿದೆ. ಹಾಗಾಗಿ, ಈ ಕ್ರಮವು ಅವರಿಗೆ ಹಿನ್ನಡೆಯಾಗಲಿದೆ ಎಂಬುದು ನಮಗೆ ಗೊತ್ತು. ಆದರೆ, ಬ್ಯೂಗೆ ಅವಕಾಶ ನೀಡಲು ಇದು ಸರಿಯಾದ ಸಮಯ ಎಂದುಕೊಂಡಿದ್ದೇವೆ. ಮಿಚಿ ಲಯಕ್ಕೆ ಮರಳಿದ ನಂತರ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ' ಎಂದಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ಗೆ ಧುಮುಕಲು ಸಜ್ಜಾಗಿರುವ ಬ್ಯೂ, ತಾಸ್ಮೇನಿಯಾ ಪರ ಈವರೆಗೆ ಆಡಿರುವ 93 ಪ್ರಥಮ ದರ್ಜೆ ಪಂದ್ಯಗಳಲ್ಲಿ 5,297 ರನ್ ಮತ್ತು 148 ವಿಕೆಟ್ಗಳನ್ನು ಪಡೆದಿದ್ದಾರೆ.
.Border-Gavaskar Trophy: ಬೂಮ್ರಾ ಬೌಲಿಂಗ್ಗೆ ಗ್ಲೆನ್ ಮೆಕ್ಗ್ರಾ ಅಭಿಮಾನಿ.ಭಾರತದ ಎದುರು ಉಳಿದ ಆಟಗಾರರೂ ಕೋನ್ಸ್ಟಾಸ್ ರೀತಿ ಆಡಲಿ: ಹಿರಿಯರಿಗೆ ವಾರ್ನರ್ ಸಲಹೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.