ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇನ್‌ ವಾರ್ನ್‌ ಅವರದ್ದು ಸಹಜ ಸಾವು: ಮರಣೋತ್ತರ ಪರೀಕ್ಷೆ ವರದಿ

Last Updated 7 ಮಾರ್ಚ್ 2022, 10:19 IST
ಅಕ್ಷರ ಗಾತ್ರ

ಕೋ ಸೆಮೈನ್‌: ಕ್ರಿಕೆಟ್‌ ರಂಗದ ದಿಗ್ಗಜ ಶೇನ್‌ ವಾರ್ನ್ ಅವರದ್ದು ಸಹಜ ಸಾವು ಎಂದು ಥಾಯ್ಲೆಂಡ್‌ ಪೊಲೀಸರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾದ ನಿವೃತ್ತ ಲೆಗ್‌ಸ್ಪಿನ್ನರ್ ಶೇನ್ ವಾರ್ನ್ ಥಾಯ್ಲೆಂಡ್‌ನ ಕೋ ಸೆಮೈನಲ್ಲಿನ ಬಂಗಲೆಯಲ್ಲಿ ಶುಕ್ರವಾರ ನಿಶ್ತೇಜರಾಗಿ ಪತ್ತೆಯಾಗಿದ್ದರು. ನಂತರ ಅವರು ನಿಧನ ಹೊಂದಿರುವುದಾಗಿ ಘೋಷಿಸಲಾಗಿತ್ತು.

ವಾರ್ನ್ ಅವರ ಕುಟುಂಬಕ್ಕೆ ಮರಣೋತ್ತರ ಪರೀಕ್ಷೆಯ ಫಲಿತಾಂಶದ ಬಗ್ಗೆ ತಿಳಿಸಲಾಗಿದೆ. ಪರೀಕ್ಷೆಯಿಂದ ಗೊತ್ತಾದ ಅಂಶವನ್ನು ಕುಟುಂಬಸ್ಥರು ಒಪ್ಪಿಕೊಂಡಿದ್ದಾರೆ. ವಾರ್ನ್‌ ಪಾರ್ಥಿವ ಶರೀರವನ್ನು ಆಸ್ಟ್ರೇಲಿಯಾದ ದೂತಾವಾಸ ಅಧಿಕಾರಿಗಳ ಮೂಲಕ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ರಾಷ್ಟ್ರೀಯ ಉಪ ಪೊಲೀಸ್ ವಕ್ತಾರ ಕಿಸ್ಸಾನಾ ಫಥನಾಚರೋನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT