ಬುಧವಾರ, ಜನವರಿ 26, 2022
26 °C

ಬಾಂಗ್ಲಾ–ಪಾಕಿಸ್ತಾನ ಟೆಸ್ಟ್: ಮಳೆಯಲ್ಲಿ ಕೊಚ್ಚಿಹೋದ ಮೂರನೇ ದಿನದಾಟ

ಎಪಿ Updated:

ಅಕ್ಷರ ಗಾತ್ರ : | |

Prajavani

ಢಾಕಾ (ಎಪಿ): ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಎರಡನೇ ಟೆಸ್ಟ್‌ನ ಮೂರನೇ ದಿನದಾಟವು ಭಾರಿ ಮಳೆಯಿಂದಾಗಿ ನಡೆಯಲಿಲ್ಲ. ಸೋಮವಾರ ಒಂದೂ ಎಸೆತವನ್ನು ಹಾಕಲು ಸಾಧ್ಯವಾಗಲಿಲ್ಲ.

ಜವಾದ್ ಚಂಡಮಾರುತದಿಂದ ಉಂಟಾದ ಮಳೆಯು ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳಿಲ್ಲದ ಕಾರಣ ನಿಗದಿತ ಭೋಜನ ವಿರಾಮದ ನಂತರ ಸುಮಾರು 90 ನಿಮಿಷಗಳ ನಂತರ ದಿನದಾಟ ಕೊನೆಗೊಳಿಸಲು ನಿರ್ಧರಿಸಲಾಯಿತು. ಇಲ್ಲಿಯವರೆಗೆ ಪಂದ್ಯದ ಪ್ರತಿ ದಿನವೂ ಧಾರಾಕಾರವಾಗಿ ಮಳೆ ಬಿದ್ದಿದೆ.

ಮೊದಲ ದಿನದ ಮೂರನೇ ಅವಧಿಯ ಆಟವು ಮಳೆ ಮತ್ತು ಮಂದ ಬೆಳಕಿನ ಕಾರಣ ನಡೆದಿರಲಿಲ್ಲ. ಎರಡನೇ ದಿನದಲ್ಲಿ 98 ಓವರ್‌ಗಳ ಪೈಕಿ 6.2 ಓವರ್‌ ಮಾತ್ರ ಸಾಧ್ಯವಾಯಿತು.

ಮುಂದಿನ 24 ಗಂಟೆಗಳಲ್ಲಿ ಬಾಂಗ್ಲಾದೇಶದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಪಂದ್ಯ ಡ್ರಾ ಆಗುವ ಎಲ್ಲ ಲಕ್ಷಣಗಳಿವೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಿಸಿಕೊಂಡಿರುವ ಪಾಕಿಸ್ತಾನ 63.2 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 188 ರನ್‌ ಗಳಿಸಿದೆ. ನಾಯಕ ಬಾಬರ್ ಅಜಮ್ 71 ಮತ್ತು ಅಜರ್ ಅಲಿ 52 ರನ್ ಗಳಿಸಿದ್ದಾರೆ.

ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಎಂಟು ವಿಕೆಟ್‌ಗಳ ಜಯ ಸಾಧಿಸಿ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ಮೂರು ಪಂದ್ಯಗಳ ಟಿ20 ಸರಣಿಯನ್ನು ಪ್ರವಾಸಿಗರು ಕ್ಲೀನ್ ಸ್ವೀಪ್ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು