ನವದೆಹಲಿ: ಇದೇ ತಿಂಗಳಾಂತ್ಯದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಾರ್ಷಿಕ ಸರ್ವಸದಸ್ಯರ ಸಭೆ ನಡೆಯಲಿದೆ.

ಮಂಡಳಿಯ ಅಧ್ಯಕ್ಷ ಮತ್ತು ಐಪಿಎಲ್ ಆಡಳಿತ ಸಮಿತಿಯ ಮುಖ್ಯಸ್ಥರು ಸೇರಿದಂತೆ ಪ್ರಮುಖ ಹುದ್ದೆಗಳಿಗೆ ಪದಾಧಿಕಾರಿಗಳ ಆಯ್ಕೆ ಈ ಸಭೆಯಲ್ಲಿ ನಡೆಯಲಿದೆ. ಆದ್ದರಿಂದ ಈ ಸಭೆಯು ಅಪಾರ ಕುತೂಹಲ ಕೆರಳಿಸಿದೆ.

ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರು ಜುಲೈನಲ್ಲಿ ತಮ್ಮ 70ನೇ ಜನ್ಮದಿನ ಆಚರಿಸಿಕೊಂಡಿದ್ದರು. ಸದ್ಯದ ನಿಯಮಾವಳಿಯ ಪ್ರಕಾರ 70 ವರ್ಷ ಮೇಲ್ಪಟ್ಟವರು ಪದಾಧಿಕಾರಿಯಾಗಿ ಮುಂದುವರಿಯುವಂತಿಲ್ಲ. ಅದರಿಂದಾಗಿ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಈಗ ಯಾರು ಸ್ಪರ್ಧಿಸಲಿದ್ದಾರೆಂಬ ಕುತೂಹಲ ಮೂಡಿದೆ.

‘ಕಳೆದ ಕೆಲವು ವರ್ಷಗಳಿಂದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಖ್ಯಾತನಾಮ ಕ್ರಿಕೆಟಿಗರನ್ನು ಆಯ್ಕೆ ಮಾಡಲಾಗುತ್ತಿದೆ. ಸೌರವ್ ಗಂಗೂಲಿ ಅವರ ನಂತರ 1983ರ ವಿಶ್ವಕಪ್ ವಿಜೇತ ಭಾರತ ತಂಡದ ಆಲ್ರೌಂಡರ್ ರೋಜರ್ ಬಿನ್ನಿ ನೇಮಕವಾಗಿದ್ದರು. ಅದೇ ವಾಡಿಕೆಯನ್ನು ಮುಂದುವರಿಸುವ ಸಾಧ್ಯತೆಯೇನೋ ಇದೆ. ಆದರೆ, ಪ್ರಸಕ್ತ ಕಾಲಘಟ್ಟದಲ್ಲಿ ಅಧ್ಯಕ್ಷ ಹುದ್ದೆಯನ್ನು (ಗೌರವಪೂರ್ವಕ) ವಹಿಸಿಕೊಳ್ಳುವಂತಹ ದಿಗ್ಗಜರು ಇದ್ದಾರೆಯೇ ಎಂಬುದೇ ಈಗ ಪ್ರಶ್ನೆ’ ಎಂದು ಹೆಸರು ಗೋಪ್ಯವಾಗಿಡುವ ಕರಾರಿನ ಮೇಲೆ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಸ್ತುತ ಐಪಿಎಲ್ ಮುಖ್ಯಸ್ಥರಾಗಿರುವ ಅರುಣ್ ಧುಮಾಲ್ ಅವರು ಪದಾಧಿಕಾರಿಯಾಗಿ ಒಟ್ಟು ಆರು ವರ್ಷಗಳನ್ನು ಪೂರೈಸಿದ್ದಾರೆ. ಆದ್ದರಿಂದ ಅವರು ಮುಂಬರುವ ಮೂರು ವರ್ಷಗಳ ಕಾಲ ಕಡ್ಡಾಯವಾಗಿ ಕೂಲಿಂಗ್ ಆಫ್ ನಿಯಮ ಪಾಲಿಸಬೇಕು. ಆದ್ದರಿಂದ ಅವರು ಯಾವುದೇ ಹುದ್ದೆಯನ್ನು ಪಡೆಯುವಂತಿಲ್ಲ. ಅದರಿಂದಾಗಿ ಅವರ ಉತ್ತರಾಧಿಕಾರಿಯನ್ನು ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ.

ಈ ಸ್ಥಾನಕ್ಕಾಗಿ ಮುಂಬೈ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ನಾಯಕ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರ ಹೆಸರುಗಳು ಕೇಳಿಬರುತ್ತಿವೆ. ಕಾಂಗ್ರೆಸ್ ಪಕ್ಷದವರಾಗಿರುವ ಶುಕ್ಲಾ ಅವರು ಐಪಿಎಲ್ ಮುಖ್ಯಸ್ಥರಾಗಿ ನೇಮಕವಾದರೆ, ಬಿಸಿಸಿಐ ಉಪಾಧ್ಯಕ್ಷ ಸ್ಥಾನಕ್ಕೆ ಬಿಹಾರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಹಾಗೂ ಬಿಜೆಪಿ ಧುರೀಣ ರಾಕೇಶ್ ತಿವಾರಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ.

ದೇವಜೀತ್ ಸೈಕಿಯಾ ಅವರು ಪದಾಧಿಕಾರಿಯಾಗಿ ಒಟ್ಟು ಮೂರು ವರ್ಷ ಕಾರ್ಯನಿರ್ವಹಿಸಿದ್ದಾರೆ. ಅದರಲ್ಲಿ ಜಂಟಿ ಕಾರ್ಯದರ್ಶಿಯಾಗಿ 2 ವರ್ಷ,3 ತಿಂಗಳು ಹಾಗೂ ಕಾರ್ಯದರ್ಶಿಯಾಗಿ ಕಳೆದ 9 ತಿಂಗಳುಗಳಿಂದ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಜಂಟಿ ಕಾರ್ಯದರ್ಶಿಗಳಾಗಿರುವ ರೋಹನ್ ಗೌನ್ಸ್ ದೇಸಾಯಿ ಮತ್ತು ಪ್ರಭತೇಜ್ ಭಾಟಿಯಾ ಅವರು ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಈ ಮೂವರು ತಮ್ಮ ಹುದ್ದೆಗಳಲ್ಲಿ ಇನ್ನೊಂದು ಅವಧಿಗೆ ಮುಂದುವರಿಯಲು ಅರ್ಹರಾಗಿದ್ದಾರೆ.

ಶುಕ್ಲಾ ಅವರು 2020ರಿಂದ ಬಿಸಿಸಿಐ ಉಪಾಧ್ಯಕ್ಷರಾಗಿದ್ದಾರೆ. ಲೋಧಾ ಶಿಫಾರಸುಗಳ ಪ್ರಕಾರ ರೂಪುಗೊಂಡಿರುವ ನಿಯಮದ ಪ್ರಕಾರ ಅವರಿಗೆ ಪದಾಧಿಕಾರಿಯಾಗಿರಲು ಇನ್ನೊಂದು ವರ್ಷ ಮಾತ್ರ ಅವಕಾಶವಿದೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರವು ಮಾಡಿರುವ ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯಿದೆಯನ್ನು ಬಿಸಿಸಿಐನಲ್ಲಿ 2026ರ ಎಜಿಎಂ ವೇಳೆಗೆ ಜಾರಿಯಾದರೆ ಕೂಲಿಂಗ್ ಆಫ್ ನಿಯಮ ಬದಲಾವಣೆಗೊಳ್ಳಲಿದೆ. ಅದು ಶುಕ್ಲಾ ಅವರಿಗೆ ಅನುಕೂಲವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.