ಗುರುವಾರ , ನವೆಂಬರ್ 26, 2020
19 °C

ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್‌ ಹೊರಕ್ಕೆ, ರಾಹುಲ್‌ ಉಪನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ನವೆಂಬರ್‌-ಜನವರಿ ಅವಧಿಯಲ್ಲಿ ನಡೆಯಲಿರುವ ಮೂರು ಟಿ20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಗೆ ಬಿಸಿಸಿಐ ಸೋಮವಾರ ತಂಡ ಪ್ರಕಟಿಸಿದೆ.

ಗಾಯದ ಸಮಸ್ಯೆಯಿಂದ ಉಪನಾಯಕ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಇಡೀ ಸರಣಿಯಿಂದ ಹೊರಗುಳಿದಿದ್ದು, ಆ ಸ್ಥಾನಕ್ಕೆ ಕನ್ನಡಿಗ ಕೆ.ಎಲ್‌ ರಾಹುಲ್‌ ಆಯ್ಕೆಯಾಗಿದ್ದಾರೆ. ಅದರಂತೆ ರಾಹುಲ್‌ ಈ ಸರಣಿಯಲ್ಲಿ ಉಪನಾಯಕರಾಗಿದ್ದಾರೆ.

ತಂಡ ಹೀಗಿದೆ...

ಟಿ20: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಮಯಾಂಕ್‌ ಅಗರ್ವಾಲ್‌, ಕೆ.ಎಲ್‌ ರಾಹುಲ್‌ (ಉಪ ನಾಯಕ– ವಿಕೆಟ್‌ ಕೀಪರ್‌), ಶ್ರೇಯಸ್‌ ಅಯ್ಯರ್‌, ಮನಿಷ್‌ ಪಾಂಡೆ, ಹರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೆಜಾ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಾಲ್‌, ಜಸ್ಪ್ರಿತ್‌ ಬೂಮ್ರಾ, ಮೊಹಮದ್‌ ಶಮಿ, ನವದೀಪ್‌ ಸೈನಿ, ದೀಪಕ್‌ ಚಹರ್‌, ವರುಣ್‌ ಚಕ್ರವರ್ತಿ.

ಏಕದಿನ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಶುಭ್‌ಮನ್‌ ಗಿಲ್‌, ಕೆ.ಎಲ್‌ ರಾಹುಲ್‌ (ಉಪ ನಾಯಕ– ವಿಕೆಟ್‌ ಕೀಪರ್‌), ಶ್ರೇಯಸ್‌ ಐಯ್ಯರ್‌, ಮನಿಷ್‌ ಪಾಂಡೆ, ಹರ್ದಿಕ್‌ ಪಾಂಡ್ಯ, ಮಯಾಂಕ್‌ ಅಗರ್ವಾಲ್‌, ರವೀಂದ್ರ ಜಡೆಜಾ, ಯಜುವೇಂದ್ರ ಚಹಾಲ್‌, ಕುಲದೀಪ್‌ ಯಾದವ್‌, ಜಸ್ಪ್ರಿತ್‌ ಬೂಮ್ರಾ, ಮೊಹಮದ್‌ ಶಮಿ, ನವದೀಪ್‌ ಸೈನಿ, ಶಾರ್ದೂಲ್‌ ಠಾಕೂರ್‌

ಟೆಸ್ಟ್‌: ವಿರಾಟ್‌ ಕೊಹ್ಲಿ (ನಾಯಕ), ಮಯಾಂಕ್‌ ಅಗರ್ವಾಲ್‌, ಪೃಥ್ವಿ ಶಾ, ಕೆ.ಎಲ್‌ ರಾಹುಲ್‌, ಚೇತೇಶ್ವರ ಪೂಜಾರಾ, ಅಜಿಂಕ್ಯಾ ರಹಾನೆ (ಉಪ ನಾಯಕ), ಹನುಮ ವಿಹಾರಿ, ಶುಭ್‌ಮನ್‌ ಗಿಲ್‌, ವೃದ್ಧಿಮಾನ್‌ ಸಾಹಾ (ವಿಕೆಟ್‌ ಕೀಪರ್‌), ಜಸ್ಪ್ರಿತ್‌ ಬೂಮ್ರಾ, ಮಹಮದ್‌ ಶಮಿ, ಉಮೇಶ್‌ ಯಾದವ್‌, ನವದೀಪ್‌ ಸೈನಿ, ಕುಲದೀಪ್‌ ಯಾದವ್‌, ರವೀಂದ್ರ ಜಡೆಜಾ, ಆರ್‌. ಅಶ್ವಿನ್‌, ಮಹಮದ್‌ ಸಿರಾಜ್‌

ನವೆಂಬರ್‌ 27ರಂದು ಆರಂಭವಾಗುವ ಸರಣಿಯು, ಜನವರಿ 19ಕ್ಕೆ ಅಂತ್ಯವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು