ಸೋಮವಾರ, ಜನವರಿ 20, 2020
19 °C

ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಧೋನಿ ಔಟ್: ಮುಗಿಯಿತೇ ಕ್ರಿಕೆಟ್ ಬದುಕು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಟಗಾರರೊಂದಿಗೆ ಮಾಡಿಕೊಂಡಿರುವ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಕೈಬಿಡಲಾಗಿದೆ.

ಧೋನಿ ಕಳೆದ ವರ್ಷದ ಗುತ್ತಿಗೆ ಪಟ್ಟಿಯಲ್ಲಿ ‘ಎ’ ಶ್ರೇಣಿಯಲ್ಲಿದ್ದರು. 2014ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಧೋನಿ, 2017ರಲ್ಲಿ ಚುಟುಕು ಕ್ರಿಕೆಟ್‌ ನಾಯಕತ್ವ ತೊರೆದಿದ್ದರು.

ಇದನ್ನೂ ಓದಿ: ಧೋನಿ ಬೆಸ್ಟ್ ಫಿನಿಶರ್ ಹೌದೇ? ಕ್ಯಾಪ್ಟನ್ ಕೂಲ್ ಚೇಸ್ ಮಾಡಲಾಗದ 3 ಪಂದ್ಯಗಳಿವು

ಮಾತ್ರವಲ್ಲದೆ ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲು ಕಂಡ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ಆದರೆ, ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಅವರನ್ನು ಪಟ್ಟಿಯಿಂದ ತೆಗೆಯಲಾಗಿದೆ.

ಇದರೊಂದಿಗೆ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಬಗ್ಗೆ ಮತ್ತಷ್ಟು ಅನುಮಾನಗಳು ಮೂಡಿವೆ.

ಟೀಂ ಇಂಡಿಯಾ ಪರ ಆಡಲು ಧೋನಿ ಅಲಭ್ಯರಾಗಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ್ದ ಬ್ಯಾಟಿಂಗ್ ದಿಗ್ಗಜ ಸುನೀಲ್‌ ಗವಾಸ್ಕರ್‌, ‘ಕಳೆದ ಜುಲೈ 10ರಿಂದಲೂ ಅವರು ಭಾರತ ತಂಡಕ್ಕೆ ಅಲಭ್ಯರಾಗಿದ್ದಾರೆ. ಅದು ತುಂಬಾ ಮುಖ್ಯವಾದ ಅಂಶ. ಏಕೆಂದರೆ, ಯಾರಾದರು ಇಷ್ಟು ಸಮಯ ಭಾರತ ತಂಡದಿಂದ ಅಂತರ ಕಾಯ್ದುಕೊಳ್ಳುತ್ತಾರೆಯೇ?’ ಎಂದು ಪ್ರಶ್ನಿಸಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಸಾಧನೆ

ಮಾದರಿ ಪಂದ್ಯ ಇನಿಂಗ್ಸ್‌ ರನ್‌ ಶತಕ ಅರ್ಧಶತಕ ಕ್ಯಾಚ್ ಸ್ಟಂಪಿಂಗ್ಸ್
ಟೆಸ್ಟ್‌ 90 144 4876 6 33 256 38
ಏಕದಿನ 350 297 10773 10 73 321 123
ಟಿ20 98 85 1617 2 57 34

ಸದ್ಯ ಪ್ರಕಟವಾಗಿರುವ 27 ಆಟಗಾರರಿರುವ 2019–2020ರ ಪಟ್ಟಿ ಹೀಗಿದೆ.
‘ಎ+’ ಶ್ರೇಣಿ: ವಾರ್ಷಿಕ ₹ 7 ಕೋಟಿ
01. ವಿರಾಟ್‌ ಕೊಹ್ಲಿ
02. ರೋಹಿತ್‌ ಶರ್ಮಾ
03. ಜಸ್‌ಪ್ರಿತ್‌ ಬೂಮ್ರಾ

‘ಎ’ ಶ್ರೇಣಿ: ವಾರ್ಷಿಕ ₹ 5 ಕೋಟಿ
01. ರವಿಚಂದ್ರನ್‌ ಅಶ್ವಿನ್‌
02. ರವೀಂದ್ರ ಜಡೇಜಾ
03. ಭುವನೇಶ್ವರ್ ಕುಮಾರ್‌
04. ಚೇತೇಶ್ವರ ಪೂಜಾರ
05. ಅಜಿಂಕ್ಯ ರಹಾನೆ
06. ಕೆ.ಎಲ್‌.ರಾಹುಲ್‌
07. ಶಿಖರ್‌ ಧವನ್‌
08. ಮೊಹಮದ್ ಶಮಿ
09. ಇಶಾಂತ್‌ ಶರ್ಮಾ
10. ಕುಲದೀಪ್‌ ಯಾದವ್‌
11. ರಿಷಭ್‌ ಪಂತ್

‘ಬಿ’ ಶ್ರೇಣಿ: ವಾರ್ಷಿಕ ₹ 3 ಕೋಟಿ
01. ವೃದ್ದಿಮಾನ್‌ ಸಹಾ
02. ಉಮೇಶ್‌ ಯಾದವ್‌
03. ಯಜುವೇಂದ್ರ ಚಾಹಲ್‌
04. ಹಾರ್ದಿಕ್ ಪಾಂಡ್ಯ
05. ಮಯಂಕ್‌ ಅಗರವಾಲ್‌

‘ಸಿ’ ಶ್ರೇಣಿ: ವಾರ್ಷಿಕ ₹ 1 ಕೋಟಿ
01. ಕೇದಾರ್‌ ಜಾಧವ್‌
02. ನವದೀಪ್ ಶೈನಿ
03. ದೀಪಕ್‌ ಚಾಹರ್‌
04. ಮನೀಷ್‌ ಪಾಂಡೆ
05. ಹನುಮ ವಿಹಾರಿ
06. ಶಾರ್ದೂಲ್‌ ಠಾಕೂರ್‌
07. ಶ್ರೇಯಸ್‌ ಅಯ್ಯರ್
08. ವಾಷಿಂಗ್ಟನ್‌ ಸುಂದರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು