ಮಂಗಳವಾರ, ಜನವರಿ 26, 2021
22 °C
ಮುಂದಿನ ತಿಂಗಳು ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿ ಸಾಧ್ಯತೆ

ದೇಶಿ ಕ್ರಿಕೆಟ್‌ ನೀಲನಕ್ಷೆ ರೂಪಿಸಿದ ಬಿಸಿಸಿಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಡಿಸೆಂಬರ್ ನಿಂದ ಮುಂದಿನ ವರ್ಷದ ಮಾರ್ಚ್‌ವರೆಗೆ ದೇಶಿ ಕ್ರಿಕೆಟ್ ಋತು ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ನೀಲನಕ್ಷೆ ರೂಪಿಸಿದೆ.  ಡಿಸೆಂಬರ್‌ನಲ್ಲಿ ದೇಶಿ ಕ್ರಿಕೆಟ್ ಆರಂಭಿಸುವತ್ತ ಚಿತ್ತ ನೆಟ್ಟಿದೆ.

ಡಿ. 20ರಿಂದ ಜನವರಿ 10ರವರೆಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿ ನಡೆಸುವ ಸಾಧ್ಯತೆ ಇದೆ.  ಜನವರಿ 11 ರಿಂದ ಮಾರ್ಚ್ 18ರವರೆಗೆ ಒಟ್ಟು 67 ದಿನಗಳವರೆಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ನಡೆಸಲು ಉದ್ದೇಶಿಸಲಾಗಿದೆ. ಜ. 11 ರಿಂದ ಫೆ. 7ರವರೆಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಗಾಗಿ ಅವಕಾಶ ಕಲ್ಪಿಸುವ ಸಾಧ್ಯತೆಯೂ ಇದೆ.

’ಕೋವಿಡ್ ಕಾಲದಲ್ಲಿ ಟೂರ್ನಿಗಳನ್ನು ಆಯೋಜಿಸುವುದು ಬಹಳ ದೊಡ್ಡ ಸವಾಲು. ಮುಖ್ಯವಾಗಿ ವೈದ್ಯಕೀಯ ಸೌಲಭ್ಯದ ವ್ಯವಸ್ಥೆ  ಮಾಡುವುದು. ಆಟಗಾರರು ಮತ್ತಿತರರ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು. ಅದರೊಂದಿಗೆ ಕ್ರೀಡಾ ಶಿಷ್ಟಾಚಾರಗಳನ್ನೂ ಪಾಲನೆ ಮಾಡಬೇಕು‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

’ಟೂರ್ನಿಯಲ್ಲಿ ಒಟ್ಟು 38 ತಂಡಗಳು ಆಡುತ್ತವೆ. ಅವುಗಳನ್ನು ಐದು ಎಲೀಟ್ ಗುಂಪುಗಳಲ್ಲಿ ಮತ್ತು ಒಂದು ಪ್ಲೇಟ್ ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಎಲೀಟ್ ವಿಭಾಗದ ಪ್ರತಿ ಗುಂಪಿನಲ್ಲಿಯೂ ಆರು ತಂಡಗಳು ಮತ್ತು ಪ್ಲೇಟ್ ಗುಂಪಿನಲ್ಲಿ ಎಂಟು ತಂಡಗಳು ಇರುತ್ತವೆ‘ ಎಂದು ತಿಳಿಸಲಾಗಿದೆ.

ಆರು ಸ್ಥಳಗಲ್ಲಿ ಪಂದ್ಯಗಳನ್ನು ನಡೆಸುವ ಕುರಿತು ಚಿಂತನೆ ನಡೆಯುತ್ತದೆ. ಪ್ರತಿ ಸುತ್ತಿನಲ್ಲಿಯೂ ಕನಿಷ್ಠ ಮೂರು ಸ್ಥಳಗಳಿಂದ ಪಂದ್ಯಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ನೇರಪ್ರಸಾರ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು