ಡೆಹ್ರಾಡೂನ್: ಸಿ. ವೈಭವ್ (ಅಜೇಯ 56; 45ಎ, 4X6) ಅರ್ಧಶತಕ ಮತ್ತು ವೈಭವ ಶರ್ಮಾ (21ಕ್ಕೆ5) ಪಂಚಗೊಂಚಲು ವಿಕೆಟ್ ಸಾಧನೆಯಿಂದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ತಂಡವು ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಎದುರು 28 ರನ್ಗಳಿಂದ ಜಯಿಸಿತು.

ಗುರುವಾರ ಬೆಳಗಿನ ಜಾವ ಮಳೆ ಸುರಿದ ಕಾರಣ ಮೈದಾನವು ತೇವಗೊಂಡಿತ್ತು. ಆದ್ದರಿಂದ ಪಂದ್ಯ ವಿಳಂಬವಾಗಿ ಆರಂಭವಾಯಿತು. ಆದ್ದರಿಂದ ಪ್ರತಿ ಇನಿಂಗ್ಸ್ಗೆ 28 ಓವರ್ ನಿಗದಿಪಡಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಎಸ್ಸಿಎ ತಂಡವು ರಿಹಾನ್ ಮೊಹಮ್ಮದ್ (46 ರನ್) ಮತ್ತು ವೈಭವ ಆಟದ ಬಲದಿಂದ 7 ವಿಕೆಟ್ಗಳಿಗೆ 167 ರನ್ ಗಳಿಸಿತು. ಅದಕ್ಕುತ್ತರವಾಗಿ ಹೈದರಾಬಾದ್ ತಂಡವು 28 ಓವರ್ಗಳಲ್ಲಿ 9 ವಿಕೆಟ್ಗೆ 139 ರನ್ ಗಳಿಸಲಷ್ಟೇ ಶಕ್ತವಾಯಿತು. ವೈಭವ್ ಶರ್ಮಾ ಬೌಲಿಂಗ್ ಮುಂದೆ ಹೈದರಾಬಾದ್ ಕುಸಿಯಿತು.

ಸಂಕ್ಷಿಪ್ತ ಸ್ಕೋರು: ಕೆಎಸ್ಸಿಎ: 28 ಓವರ್ಗಳಲ್ಲಿ 7ಕ್ಕೆ167 (ರಿಹಾನ್ ಮೊಹಮ್ಮದ್ 46, ಸಿ. ವೈಭವ್ ಔಟಾಗದೇ 56, ಪ್ರೇಮ್ ಗೋನಿ 50ಕ್ಕೆ2, ವಿ. ಯಶವೀರ್ 36ಕ್ಕೆ4) ಹೈದರಾಬಾದ್ ಕ್ರಿಕೆಟ್ ಸಂಸ್ಥೆ: 28 ಓವರ್ಗಳಲ್ಲಿ 9ಕ್ಕೆ139 (ಆದಿತ್ಯ ಜವಾಜಿ 22, ಅಲಂಕೃತ್ ರಪೊಲೆ 27, ಸಾಯಿ ಶರಣ್ 20, ವೈಭವ್ ಶರ್ಮಾ 21ಕ್ಕೆ5, ಬಿ.ಆರ್. ರತನ್ 31ಕ್ಕೆ2) ಫಲಿತಾಂಶ: ಕೆಎಸ್ಸಿಎಗೆ 28 ರನ್ ಜಯ (ಮಳೆಯಿಂದಾಗಿ ಮೈದಾನ ತೇವಗೊಂಡ ಕಾರಣ ಪಂದ್ಯ ಆರಂಭ ವಿಳಂಬವಾಯಿತು. ಅದರಿಂದಾಗಿ ಪ್ರತಿ ಇನಿಂಗ್ಸ್ಗೆ 28 ಓವರ್ ನಿಗದಿಪಡಿಸಲಾಯಿತು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.