ಶನಿವಾರ, ಮೇ 15, 2021
24 °C

ಗಾಯದ ಸಮಸ್ಯೆ: ಐಪಿಎಲ್‌ ಟೂರ್ನಿಯಿಂದ ಬೆನ್ ಸ್ಟೋಕ್ಸ್ ಔಟ್!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Ben Stokes. Credit: AFP File Photo

ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ರಾಜಸ್ಥಾನ್ ರಾಯಲ್ಸ್ ತಂಡದ ಆಲ‌್ ರೌಂಡರ್ ಆಟಗಾರ ಬೆನ್ ಸ್ಟೋಕ್ಸ್ ಹೊರಗುಳಿಯುತ್ತಿದ್ದಾರೆ.

ಪಂಜಾಬ್ ಕಿಂಗ್ಸ್ ಜತೆಗಿನ ಈ ಬಾರಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಎಡಗೈ ಬೆರಳಿನ ಗಾಯದ ಸಮಸ್ಯೆಗೆ ಸಿಲುಕಿರುವ ಬೆನ್ ಸ್ಟೋಕ್ಸ್, ಆಟವಾಡಲು ಲಭ್ಯರಿರುವುದಿಲ್ಲ.

ಏಪ್ರಿಲ್ 12ರಂದು ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಅವರ ಬೌಂಡರಿಗೆ ಅಟ್ಟಿದ ಬಾಲ್ ಕ್ಯಾಚ್ ಹಿಡಿಯುವ ಯತ್ನದಲ್ಲಿ, ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಎಲ್ಲ ರೀತಿಯಿಂದಲೂ ಆಧಾರ ಮತ್ತು ಆಲ್‌ರೌಂಡರ್ ಆಗಿದ್ದ ಬೆನ್ ಸ್ಟೋಕ್ಸ್ ನಿರ್ಗಮನ ತಂಡಕ್ಕೆ ಹಿನ್ನಡೆ ತರಲಿದೆ.

ಆಟವಾಡಲು ಸಾಧ್ಯವಾಗದಿದ್ದರೂ, ಬೆನ್ ತಂಡದ ಜತೆಗೇ ಇರಲಿದ್ದು, ಪಂದ್ಯದ ಕುರಿತು ಸಲಹೆ ಸೂಚನೆ ನೀಡಲಿದ್ದಾರೆ. ಬೆನ್ ಬದಲು ಯಾರು ಆಡಲಿದ್ದಾರೆ ಎನ್ನುವುದನ್ನು ರಾಜಸ್ಥಾನ್ ರಾಯಲ್ಸ್ ಇನ್ನಷ್ಟೇ ಪ್ರಕಟಿಸಬೇಕಿದೆ.

ರಾಜಸ್ಥಾನ್ ರಾಯಲ್ಸ್ ಜತೆಗಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 222 ಬೃಹತ್ ಮೊತ್ತ ಪೇರಿಸಿತ್ತು. ಗಾಯಗೊಂಡಿರುವ ಬೆನ್ ಸ್ಟೋಕ್ಸ್‌ಗೆ ಮುಂಬಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು