ಬೆಂಗಳೂರು: ರೋಹನ್ ಆರ್. (339;133ಎ) ಅವರ ತ್ರಿಶತಕ ಮತ್ತು ರಿಷಿಕೇಶ್ (ಔಟಾಗದೇ 206;70ಎ) ಅವರ ದ್ವಿಶತಕದ ನೆರವಿನಿಂದ ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (2) ತಂಡವು ಜೆ.ಬಿ. ಮಲ್ಲರಾಧ್ಯ ಟ್ರೋಫಿಗಾಗಿ ನಡೆಯುತ್ತಿರುವ ಕೆಎಸ್ಸಿಎ ಗುಂಪು 1ರ ವಿ ಡಿವಿಷನ್ ಲೀಗ್ನ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ವೈಎಂಸಿಎ ಕ್ರಿಕೆಟ್ ಕ್ಲಬ್ (1) ವಿರುದ್ಧ 750 ರನ್ಗಳ ಜಯ ಸಾಧಿಸಿತು.

ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುನೈಟೆಡ್ ತಂಡವು ರೋಹನ್, ರಿಷಿಕೇಶ್ ಮತ್ತು ಸತೀಶ್ ಟಿ. (113;56ಎ) ಅವರ ಬ್ಯಾಟಿಂಗ್ ನೆರವಿನಿಂದ 50 ಓವರ್ಗಳಲ್ಲಿ 3 ವಿಕೆಟ್ಗೆ 785 ರನ್ ಗಳಿಸಿತು.

ರೋಹನ್ ಇನಿಂಗ್ಸ್ನಲ್ಲಿ 52 ಬೌಂಡರಿ, 12 ಸಿಕ್ಸರ್ ಒಳಗೊಂಡಿತ್ತು. ರಿಷಿಕೇಶ್ ಅವರ ಸ್ಪೋಟಕ ಇನ್ನಿಂಗ್ಸ್ನಲ್ಲಿ 32 ಬೌಂಡರಿ ಮತ್ತು ಆರು ಸಿಕ್ಸರ್ ಇದ್ದವು. ಹೀಗಾಗಿ, ಯುನೈಟೆಡ್ ತಂಡವು 15.7ರ ಸರಾಸರಿಯಲ್ಲಿ ರನ್ ಪೇರಿಸಿತು. ಬೌಂಡರಿ ಮತ್ತು ಸಿಕ್ಸರ್ನಿಂದಲೇ 574 ರನ್ ಗಳಿಸಿತು.

ವೈಎಂಸಿಎ ತಂಡವು 9.1 ಓವರ್ಗಳಲ್ಲಿ 7 ವಿಕೆಟ್ಗೆ 35 ರನ್ ಗಳಿಸಿ ಹೋರಾಟ ಮುಗಿಸಿತು. ಈ ತಂಡವು ಕೇವಲ ಎಂಟು ಆಟಗಾರರೊಂದಿಗೆ ಆಡಿತ್ತು.

ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (2): 50 ಓವರ್ಗಳಲ್ಲಿ 3ಕ್ಕೆ 785 (ರೋಹನ್ ಆರ್. 339, ಸತೀಶ್ ಟಿ. 113, ರಿಷಿಕೇಶ್ ಔಟಾಗದೇ 206). ವೈಎಂಸಿಎ ಕ್ರಿಕೆಟ್ ಕ್ಲಬ್ (1): 9.1 ಓವರ್ಗಳಲ್ಲಿ 37ಕ್ಕೆ 7; ಆತೀಶ್ ಬಾಲಾಜಿ 8ಕ್ಕೆ 4). ಫಲಿತಾಂಶ: ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ಗೆ 750 ರನ್ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.