ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಇಲ್ಲ; ಪೂಜಾರ ಬ್ಯಾಟಿಂಗ್ ಅಭ್ಯಾಸ

Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿರುವ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯದ ಬ್ಯಾಟರ್ ಚೇತೇಶ್ವರ್ ಪೂಜಾರ ಶನಿವಾರ ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದರು.

ಟೆಸ್ಟ್ ಪರಿಣತ ಬ್ಯಾಟರ್‌ ಪೂಜಾರ ಅವರು ತಾವು ಬ್ಯಾಟಿಂಗ್ ಅಭ್ಯಾಸ ಮಾಡಿದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

ಅವರು ಈಚೆಗೆ ಡಬ್ಲ್ಯುಟಿಸಿ ಫೈನಲ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಮುಂದಿನ ತಿಂಗಳು ವಿಂಡೀಸ್‌ನಲ್ಲಿ ಭಾರತವು ಟೆಸ್ಟ್ ಸರಣಿ ಆಡಲಿದೆ. ಶುಕ್ರವಾರ ಪ್ರಕಟವಾದ ಈ ತಂಡದ ಪಟ್ಟಿಯಲ್ಲಿ ಪೂಜಾರ ಅವರ ಹೆಸರಿಲ್ಲ. ಅದರಿಂದಾಗಿ ಪೂಜಾರಗೆ ಅಂತರರಾಷ್ಟ್ರೀಯ ಕ್ರಿಕೆಟ್ ಅವಕಾಶಗಳು ಮುಗಿದವು ಎಂಬ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಅವರ ತಂದೆ ಮತ್ತು ಕೋಚ್ ಅರವಿಂದ್ ಪೂಜಾರ ಈ ಮಾತನ್ನು ಒಪ್ಪುವುದಿಲ್ಲ.

‘ಚೇತೇಶ್ವರ್ ಮಾನಸಿಕವಾಗಿ ಬಹಳ ದೃಢತೆಯ ಹೊಂದಿರುವ ಆಟಗಾರ. ಆತನ ಆಯ್ಕೆಯ ಕುರಿತು ನಾನು ಮಾತನಾಡುವುದಿಲ್ಲ. ಆದರೆ, ಅವರು ತಂಡಕ್ಕೆ ಮರಳುವ ಸಾಮರ್ಥ್ಯ ಹೊಂದಿದ್ದಾರೆ. ತಂಡದ ಆಯ್ಕೆ ಪಟ್ಟಿ ಬಿಡುಗಡೆಯ ಮರುದಿನವೇ ಪೂಜಾರ ಕ್ರೀಡಾಂಗಣಕ್ಕಿಳಿದು ಕಠಿಣ ಅಭ್ಯಾಸ ನಡೆಸಿದ್ದಾರೆ. ಇದು ಅವರ ದೃಢತೆಗೆ ಉದಾಹರಣೆ‘ ಎಂದರು.

’ಇದೇ ವಾರ ಆರಂಭವಾಗಲಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲು ಸಿದ್ಧತೆ ನಡೆಸಿದ್ದಾರೆ. ಕೌಂಟಿ ಕ್ರಿಕೆಟ್‌ನಲ್ಲಿಯೂ ಆಟ ಮುಂದುವರಿಸುವರು‘ ಎಂದು ಅರವಿಂದ್ ಹೇಳಿದರು.

ಪೂಜಾರ ಅವರನ್ನು ಕೈಬಿಟ್ಟ ಕ್ರಮವನ್ನು ಮಾಜಿ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್ ಮತ್ತಿತರರು ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT