ಬೆಂಗಳೂರು: ಮಧ್ಯಪ್ರದೇಶದ ಇಂದೋರ್ನ ಮನೋರಮಾ ಗಂಜ್ನಲ್ಲಿರುವ ರಾಯಲ್ ಅಪಾರ್ಟ್ಮೆಂಟ್ನ ಆ ಮನೆಯಲ್ಲಿ ಕಾಲಿಟ್ಟವರಿಗೆ ಭಾರತ ಟೆಸ್ಟ್ ಕ್ರಿಕೆಟ್ ತಂಡದ ಪ್ರಪ್ರಥಮ ನಾಯಕ ಸಿ.ಕೆ. ನಾಯ್ಡು ಅವರ ನೆನಪುಗಳ ವೈಭವ ಮನತಟ್ಟುತ್ತವೆ. ಆದರೆ ಆ ನೆನಪುಗಳನ್ನು ಮೆಲುಕು ಹಾಕುತ್ತ, ಗತಕಾಲಕ್ಕೆ ಕೊಂಡೊಯ್ಯುತ್ತಿದ್ದ ಅವರ ಮಗಳು ಚಂದ್ರಾ ನಾಯ್ಡು (88) ಅವರು ಭಾನುವಾರ ಚಿರನಿದ್ರೆಗೆ ಜಾರಿದರು.

ಭಾರತದ ಮೊದಲ ಮಹಿಳಾ ಕ್ರಿಕೆಟ್ ವೀಕ್ಷಕ ವಿವರಣೆಗಾರ್ತಿ ಎಂಬ ಹೆಗ್ಗಳಿಕೆ ಅವರದ್ದು. ಅವರು ದೀರ್ಘ ಕಾಲದವರೆಗೆ ಕಾಮೆಂಟೆಟರ್ ಆಗಿ ಕಾರ್ಯನಿರ್ವಹಿಸಲಿಲ್ಲ. ಆದರೆ ಅಪ್ಪನ ನೆನಪು ಮತ್ತು ಕ್ರಿಕೆಟ್ ಪ್ರೀತಿಯನ್ನೇ ತಮ್ಮ ಜೀವನದ ಉಸಿರಾಗಿಸಿಕೊಂಡರು. 1977ರಲ್ಲಿ ಬಾಂಬೆ ಮತ್ತು ಎಂಸಿಸಿ ನಡುವಣ ಇಂದೋರ್ನಲ್ಲಿ ನಡೆದ ಪಂದ್ಯದಲ್ಲಿ ಅವರು ಕಾಮೆಂಟ್ರಿ ಮಾಡಿದ್ದರು.

ಕ್ರಿಕೆಟ್ಗಿಂತ ಮುನ್ನ ಟೆನಿಸ್ನಲ್ಲಿ ಒಂದೆರಡು ಬಾರಿ ಚಂದ್ರಾ ಅವರು ಕಾಮೆಂಟ್ರಿ ಕೊಟ್ಟಿದ್ದನ್ನು ನೋಡಿದ್ದ ಆಗಿನ ಆಕಾಶವಾಣಿ ನಿಲಯ ನಿರ್ದೇಶಕರು ಬಂದು ಕ್ರಿಕೆಟ್ಗೆ ವೀಕ್ಷಕ ವಿವರಣೆ ನೀಡುವಂತೆ ಕೇಳಿಕೊಂಡಿದ್ದರು. ನಂತರ ಹಲವಾರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಗೆ ವೀಕ್ಷಕ ವಿವರಣೆ ನೀಡಿದ ಚಂದ್ರಾ ಅಪ್ಪನ ಪ್ರತಿನಿಧಿಯಾಗಿ ಕ್ರಿಕೆಟ್ ನೊಂದಿಗೆ ನಂಟು ಉಳಿಸಿಕೊಂಡವರು. ಆ ಘಟನೆಯನ್ನು ಐದು ವರ್ಷಗಳ ಹಿಂದೆ ‘ಪ್ರಜಾವಾಣಿ‘ಗೆ ನೀಡಿದ್ದ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದರು.

‘ಸಮಾಜದಲ್ಲಿ ಮಹಿಳೆಯರಿಗೆ ಈಗಿನಷ್ಟು ಸ್ವಾತಂತ್ರ್ಯ ಇರದ ಸಮಯ. ಆಗಿನ ಕಾಲದಲ್ಲಿ ಇನ್ನೂ ಮಹಿಳಾ ಕ್ರಿಕೆಟ್ ಕೂಡ ಜಾಸ್ತಿ ನಡೆಯುತ್ತಿರಲಿಲ್ಲ. ಇಂದೋರಿನ ಹೋಳ್ಕರ್ ಮೈದಾನದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ವೀಕ್ಷಕ ವಿವರಣೆ ನೀಡಲು ಮಹಿಳೆಯೊಬ್ಬರು ಬರುತ್ತಿರುವುದೇ ಜನರ ಕುತೂಹಲ ಕೆರಳಿಸಿತ್ತು. ಅಲ್ಲದೇ ಈ ಹೆಣ್ಣುಮಗಳು ಏನು ಕಾಮೆಂಟ್ರಿ ಮಾಡ್ತಾರೆ ಎಂದು ಮೂಗು ಮುರಿದವರೂ ಇದ್ದರು. ಆದರೆ ಅಪ್ಪನ ಛಲದ ಗುಣ ನನ್ನ ರಕ್ತದಲ್ಲಿ ಹರಿಯುತ್ತಿತ್ತು. ಅಪ್ಪನಿಗೆ ಗೌರವ ಸಲ್ಲಿಸಲು ಇದಕ್ಕಿಂತ ಉತ್ತಮವಾದ ಮಾರ್ಗವಿಲ್ಲ ಎಂಬುದೇ ನನ್ನಲ್ಲಿ ಧೈರ್ಯ ತುಂಬಿತ್ತು. ನನ್ನ ಕಾಮೆಂಟ್ರಿ ಆರಂಭವಾದಾಗ ಪ್ರೇಕ್ಷಕರಲ್ಲಿ ಬಹಳಷ್ಟು ಮಂದಿ ತಮ್ಮಲ್ಲಿದ್ದ ಪುಟ್ಟ ರೇಡಿಯೋಗಳ ಶಬ್ದವನ್ನು ಹೆಚ್ಚಿಸಿದರು. ವಾಲ್ಯೂಮ್ ಕಡಿಮೆ ಮಾಡಿ ಎಂಬ ಮನವಿಗೆ ಸ್ಪಂದಿಸಲೇ ಇಲ್ಲ. ಹೆದರುತ್ತಲೇ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವೀಕ್ಷಕ ವಿವರಣೆ ನೀಡಿದೆ. ಮೊದಲ ದಿನ ವಿವರಣೆ ಕೊಟ್ಟ ಅವರ ಧ್ವನಿಗೆ ಮಾರುಹೋದ ಕೆಲವರು ಬಂದು ಮೆಚ್ಚುಗೆ ಸೂಚಿಸಿದರು. ಎರಡನೇ ದಿನ ಸಂಪೂರ್ಣ ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಿದೆ. ಇಂಗ್ಲೆಂಡ್ ತಂಡದ ಟೋನಿ ಬಿಬಿಸಿಯಲ್ಲಿ ಚಂದ್ರಾ ಅವರ ಬಗ್ಗೆ ಮಾತನಾಡುತ್ತ, ಕ್ರಿಕೆಟ್ ಲೋಕದ ಪ್ರಥಮ ಮಹಿಳಾ ಕಾಮೇಂ ಟೇಟರ್ ಆಗಿರುವುದು ಭಾರತಕ್ಕೆ ಹೆಮ್ಮೆ ಎಂದಿದ್ದರು’ ಎಂದು ಚಂದ್ರಾ ಸ್ಮರಿಸಿದ್ದರು.

ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ್ದ ಚಂದ್ರಾ, ಅವರ ಮನೆ ಮತ್ತು ಮನದ ತುಂಬ ಅಪ್ಪನ ಸಾಧನೆಗಳ ನೆನಪುಗಳೇ ತುಂಬಿದ್ದವು. ಚಂದ್ರಾ ಅವರು ‘ಸಿ ಕೆ ನಾಯ್ಡು: ಎ ಡಾಟರ್ ರಿಮೆಂಬರ್ಸ್’ ಪುಸ್ತಕವನ್ನೂ ಬರೆದಿದ್ದಾರೆ

ಸಿ.ಕೆ. ನಾಯ್ಡು ಅವರ ಆಟದ ವೈಭವದ ಸೆಳಕುಗಳು. ಕ್ರಿಕೆಟ್ ಪ್ರೀತಿಯ ಸೊಗಡು ಮನೆಯ ತುಂಬಾ ಇತ್ತು. ಕೆಲವು ವರ್ಷಗಳ ಹಿಂದೆ ಬಿಸಿಸಿಐ ರಚಿಸಿದ ‘ಸಿ.ಕೆ ಟು ಸಚಿನ್’ ದ ಟೀಮ್ ಆಫ್ ಮಿಲೇನಿಯಂ ಫೋಟೋ ಪ್ಲೇಟ್ ಅನ್ನು ಚಂದ್ರಾ ತೋರಿಸುತ್ತಿದ್ದರು. ಅಲ್ಲಿಯೇ ಪಕ್ಕದಲ್ಲಿದ್ದ ಚಿತ್ರದಲ್ಲಿ ಕಟ್ಟುಮಸ್ತಾದ ವ್ಯಕ್ತಿ ನಾಯ್ಡು ನೀಟಾಗಿ ಸೂಟು ಧರಿಸಿ ಇಂಗ್ಲೆಂಡ್ನ ಡಗ್ಲಾಸ್ ಜಾರ್ಡಿನ್ ಅವರೊಂದಿಗೆ ಇದ್ದ ಚಿತ್ರವಿತ್ತು. ಸೇನಾಧಿಕಾರಿಯಾಗಿದ್ದ ಸಿ.ಕೆ. ನಾಯ್ಡು. 63-64ನೇ ವಯಸ್ಸಿನಲ್ಲಿಯೂ ಸಿಕ್ಸರ್ ಹೊಡೆದು ಪ್ರೇಕ್ಷಕರು ಮನರಂಜಿಸುವ ಕಲೆ ಅವರಿಗೆ ಗೊತ್ತಿತ್ತು. ತಂಡವನ್ನು ಮುನ್ನಡೆಸುವ ನಾಯಕತ್ವ ಗುಣ ಅವರಲ್ಲಿ ರಕ್ತಗತವಾಗಿತ್ತು. ಬ್ರಿಟಿಷ್ ಆಟಗಾರರ ವಿರುದ್ಧ ಸ್ಕೋರು ಮಾಡುವುದೆಂದರೆ ಅವರಿಗೆ ಅತಿ ಪ್ರೀತಿ. ಕೊನೆಯವರೆಗೂ ಕ್ರಿಕೆಟ್ ಅನ್ನು ಆರಾಧಿಸುತ್ತಲೇ ಇದ್ದವರು ಅವರು.

ಐಸಿಸಿಯ ಸುವರ್ಣಮಹೋತ್ಸವ ಸಮಾರಂಭಕ್ಕೆ ಲಂಡನ್ಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಒಬ್ಬರೇ ಹೋಗಿ ಅಪ್ಪ ಶತಕ ಬಾರಿಸಿದ್ದ ಬ್ಯಾಟ್ ಅನ್ನು ಕಾಣಿಕೆಯಾಗಿ ಕೊಟ್ಟು ಬಂದಿದ್ದರು. 1926ರಲ್ಲಿ ತಮ್ಮ ತಂದೆಗೆ ಎಂಸಿಸಿಯು ನೀಡಿದ್ದ ಬೆಳ್ಳಿ ಬ್ಯಾಟ್ ಅನ್ನು 2004ರಲ್ಲಿ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಅಧ್ಯಕ್ಷ ರಾಜಸಿಂಗ್ ಡುಂಗರ್ಪುರ್ ಅವರಿಗೆ ನೀಡಿದ್ದನ್ನೂ ಚಂದ್ರಾ ಆಗಾಗ ಸ್ಮರಿಸಿಕೊಳ್ಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.