ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Commonwealth Games ಮಹಿಳಾ ಟಿ20: ಫೈನಲ್‌ನಲ್ಲಿ ಸೋಲು ಕಂಡ ಭಾರತಕ್ಕೆ ಬೆಳ್ಳಿ

ಆಸ್ಟ್ರೇಲಿಯಾಗೆ ಚಿನ್ನದ ಪದಕ
Last Updated 8 ಆಗಸ್ಟ್ 2022, 2:14 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌:ಕಾಮನ್‌ವೆಲ್ತ್ ಕ್ರೀಡಾಕೂಟದಮಹಿಳಾ ಟಿ20 ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ರನ್‌ ಅಂತರದ ಸೋಲು ಕಂಡಿರುವ ಭಾರತ ತಂಡ, ಬೆಳ್ಳಿ ಪದಕಕ್ಕೆ ಕೊರಳೊಡ್ಡಿದೆ.

ಇಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ 9 ರನ್‌ ಗಳಿಸಿದ್ದಾಗಲೇ ಮೊದಲ ವಿಕೆಟ್‌ ಕಳೆದುಕೊಂಡಿತ್ತು.7 ರನ್‌ ಗಳಿಸಿದ್ದಅಲಸ್ಯಾ ಹೀಲಿ ಅವರನ್ನು ಎಲ್‌ಬಿ ಬಲೆಗೆ ಬೀಳಿಸುವ ಮೂಲಕ ರೇಣುಕಾ ಸಿಂಗ್ ಭಾರತಕ್ಕೆ ಮೇಲುಗೈ ತಂದುಕೊಟ್ಟರು. ಆದರೆ, ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ.

ಎರಡನೇ ವಿಕೆಟ್‌ಗೆ ಜೊತೆಯಾದಆರಂಭಿಕ ಆಟಗಾರ್ತಿ ಬೆತ್‌ ಮೂನಿ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌, 72 ರನ್‌ ಕಲೆಹಾಕಿದರು. ಮೂನಿ 41 ಎಸೆತಗಳಲ್ಲಿ 61 ರನ್ ಗಳಿಸಿದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ಮೆಗ್‌, 36 ರನ್ ಬಾರಿಸಿದರು.ಹೀಗಾಗಿ ಆಸಿಸ್‌ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 161 ರನ್ ಗಳಿಸಿತು.

ಹರ್ಮನ್ ಆಸರೆ
ಸವಾಲಿನ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಧಶತಕ ಸಿಡಿಸಿದ್ದ ಸ್ಮೃತಿ ಮಂದಾನ ಇಲ್ಲಿ ಕೇವಲ 6 ರನ್‌ ಗಳಿಸಲಷ್ಟೇ ಶಕ್ತರಾದರು. ಶೆಫಾಲಿ ವರ್ಮಾ (11) ಕೂಡ ಅವರ ಹಿಂದೆಯೇ ಪೆವಿಲಿಯನ್ ಸೇರಿಕೊಂಡರು.

ಹೀಗಾಗಿ 22 ರನ್‌ ಆಗುವಷ್ಟರಲ್ಲಿ ಆರಂಭಿಕ ಆಟಗಾರ್ತಿಯರನ್ನು ಕಳೆದುಕೊಂಡಿದ್ದ ಭಾರತಕ್ಕೆ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಮತ್ತು ಜೆಮಿಯಾ ರಾಡ್ರಿಗಸ್‌ ಆಸರೆಯಾದರು.

ಈ ಜೋಡಿ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 96 ರನ್ ಗಳಿಸಿತು. ಭಾರತಕ್ಕೆ ಸುಲಭ ಜಯ ತಂದುಕೊಡುವ ಭರವಸೆ ಮೂಡಿಸಿದ್ದ ಈ ಜೋಡಿಯನ್ನು ಬೇರ್ಪಡಿಸುವ ಮೂಲಕ ಮೇಘನ್‌ ಸ್ಕಟ್‌ ಪಂದ್ಯಕ್ಕೆ ತಿರುವು ನೀಡಿದರು.33 ಎಸೆತಗಳಲ್ಲಿ33 ರನ್ ಗಳಿಸಿ ಆಡುತ್ತಿದ್ದ ರಾಡ್ರಿಗಸ್‌ ಔಟಾಗುತ್ತಿದ್ದಂತೆ, ಭಾರತದ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್‌ ಆರಂಭವಾಯಿತು.

ಒಂದು ಹಂತದಲ್ಲಿ 118 ರನ್‌ಗೆ ಕೇವಲ 2 ವಿಕೆಟ್‌ ಕಳೆದುಕೊಂಡು ಗುರಿಯತ್ತ ಮುನ್ನುಗ್ಗುತ್ತಿದ್ದ ಭಾರತ ನಂತರ 34 ರನ್‌ ಕಲೆಹಾಕುವಷ್ಟರಲ್ಲಿ ಉಳಿದ 8 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರಿಂದಾಗಿ 19.3 ಓವರ್‌ಗಳಲ್ಲಿ 152 ರನ್‌ ಗಳಿಸಿದ್ದಾಗ ಆಲೌಟ್‌ ಆಯಿತು.

ಹರ್ಮನ್‌43 ಎಸೆತಗಳಲ್ಲಿ65 ರನ್ ಗಳಿಸಿದರು.

ಆಸ್ಟ್ರೇಲಿಯಾ ಪರ ಆ್ಯಶ್ಲೆ ಗಾರ್ಡನರ್‌ 3 ವಿಕೆಟ್‌ ಪಡೆದರೆ, ಮೇಘನ್‌ ಸ್ಕಟ್‌ 2 ವಿಕೆಟ್‌ ಕಿತ್ತರು. ಡಾರ್ಸಿ ಬ್ರೌನ್‌ಹಾಗೂ ಜೆಸ್ ಜಾನ್ಸನ್‌ ಒಂದೊಂದು ವಿಕೆಟ್‌ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT