ಬುಧವಾರ, ಜನವರಿ 19, 2022
18 °C

6 ವಿಶ್ವಕಪ್‌, 2 ಚಾಂಪಿಯನ್ಸ್‌ ಟ್ರೋಫಿಯ ಆತಿಥ್ಯವಹಿಸುವ ದೇಶಗಳ ಪಟ್ಟಿ ಪ್ರಕಟ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: 2024 ರಿಂದ 2031ರ ಅವಧಿಯಲ್ಲಿ ನಡೆಯಲಿರುವ 2 ಏಕದಿನ ವಿಶ್ವಕಪ್‌, 4 ಟಿ–20 ವಿಶ್ವಕಪ್‌ ಸೇರಿದಂತೆ 2 ಚಾಂಪಿಯನ್ಸ್‌ ಟ್ರೋಫಿಗಳ ಆತಿಥ್ಯ ವಹಿಸಲಿರುವ ದೇಶಗಳ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಮಂಗಳವಾರ ಪ್ರಕಟಿಸಿದೆ.

ಭಾರತ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕ, ನ್ಯೂಜಿಲೆಂಡ್‌, ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ, ವೆಸ್ಟ್ ಇಂಡೀಸ್, ಐರ್ಲೆಂಡ್‌, ಸ್ಕಾಟ್ಲೆಂಡ್, ಜಿಂಬಾಬ್ವೆ, ಅಮೆರಿಕ, ನಮೀಬಿಯಾ ದೇಶಗಳು ವಿಶ್ವಕಪ್‌ ಟೂರ್ನಿಗಳಿಗೆ ಆತಿಥ್ಯವಹಿಸಲಿವೆ.  
 
1996ರ ವಿಶ್ವಕಪ್‌ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನ, ಭಾರತ ಮತ್ತು ಶ್ರೀಲಂಕಾದೊಂದಿಗೆ ಜಂಟಿಯಾಗಿ ಟೂರ್ನಿಯನ್ನು ಆಯೋಜಿಸಲಿದೆ.

ಟಿ–20 ವಿಶ್ವಕಪ್‌
2024: ಅಮೆರಿಕ ಮತ್ತು ವೆಸ್ಟ್ ಇಂಡೀಸ್
2026: ಭಾರತ ಮತ್ತು ಶ್ರೀಲಂಕಾ
2028: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌
2030: ಇಂಗ್ಲೆಂಡ್‌, ಐರ್ಲೆಂಡ್‌, ಸ್ಕಾಟ್ಲೆಂಡ್

ಏಕದಿನ ವಿಶ್ವಕಪ್‌
2027: ದಕ್ಷಿಣ ಆಫ್ರಿಕ, ಜಿಂಬಾಬ್ವೆ, ನಮೀಬಿಯಾ
2031: ಭಾರತ ಮತ್ತು ಬಾಂಗ್ಲಾದೇಶ

ಚಾಂಪಿಯನ್ಸ್‌ ಟ್ರೋಫಿ
2025: ಪಾಕಿಸ್ತಾನ
2029: ಭಾರತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು