ಸೋಮವಾರ, ಏಪ್ರಿಲ್ 19, 2021
32 °C
ಟೆಸ್ಟ್‌ ಕ್ರಿಕೆಟ್‌

ಆಫ್ರಿಕಾ ಪಡೆಗೆ ಭಾರತ ಪೆಟ್ಟು: ಇನಿಂಗ್ಸ್ ಮುನ್ನಡೆಯತ್ತ ವಿರಾಟ್ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ: ಮೂರು ಪ‍ಂದ್ಯಗಳ ಟೆಸ್ಟ್‌ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತ ಬೌಲರ್‌ಗಳು ಮೂರನೇ ಪಂದ್ಯದಲ್ಲಿಯೂ ಪೆಟ್ಟು ನೀಡಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 127ರನ್‌ ಗಳಿಗೆ 6 ವಿಕೆಟ್‌ ಕೆಳೆದುಕೊಂಡಿರುವ ಫಾಫ್‌ ಡು ಪ್ಲೆಸಿ ಬಳಗ ಹಿನ್ನಡೆಯತ್ತ ಮುಖಮಾಡಿದೆ.

ಇದನ್ನೂ ಓದಿ: ಬ್ರಾಡ್ಮನ್ ದಾಖಲೆ ಮುರಿದ ರೋಹಿತ್ ಶರ್ಮಾ

ಇಲ್ಲಿನ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ ನಷ್ಟಕ್ಕೆ 497 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ್ದ ಆಫ್ರಿಕಾ ಪಡೆ ಕೇವಲ 16 ರನ್‌ ಆಗುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಮಂದ ಬೆಳಕಿನ ಕಾರಣ ಎರಡನೇ ದಿನದಾಟವನ್ನು ಬೇಗನೆ ನಿಲ್ಲಿಸಿದಾಗ ಹಮ್ಜಾ ಜೊತೆ ನಾಯಕ ಪ್ಲೆಸಿ ಕ್ರೀಸ್‌ನಲ್ಲಿದ್ದರು. ಮೂರನೇ ದಿನದಾಟದ ಆರಂಭದಲ್ಲೇ ಪ್ಲೆಸಿ ವಿಕೆಟ್ ಪಡೆದ ಉಮೇಶ್‌ ಯಾದವ್‌ ವಿರಾಟ್‌ ಪಡೆಗೆ ಮೇಲುಗೈ ತಂದಿತ್ತರು. ಈ ವೇಳೆ ಹಮ್ಜಾಗೆ ಜೊತೆಯಾದ, ಬವುಮಾ ಎಚ್ಚರಿಕೆಯ ಆಟ ಆಡಿ, ಆತಿಥೇಯ ಬೌಲರ್‌ಗಳ ವಿಕೆಟ್‌ ದಾಹಕ್ಕೆ ತಡೆಯೊಡ್ಡಿದ್ದರು. ನಾಲ್ಕನೇ ವಿಕೆಟ್‌ಗೆ 91ರನ್‌ಗಳ ಜೊತೆಯಾಟವಾಡಿ, ತಮ್ಮ ತಂಡವನ್ನು ಶತಕದ ಗಡಿದಾಟಿಸಿದ್ದ ಈ ಜೋಡಿಯನ್ನು ಆಲ್ರೌಂಡರ್‌ ರವೀಂದ್ರ ಜಡೇಜಾ ಬೇರ್ಪಡಿಸಿದರು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ  ಗೆಲುವು ಸಾಧಿಸಿದ ಟೀಂ ಇಂಡಿಯಾ

79 ಎಸೆತಗಳಲ್ಲಿ 62 ರನ್‌ ಗಳಿಸಿದ್ದ ಹಮ್ಜಾ, ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ನಂತರದ ಓವರ್‌ನಲ್ಲಿ ಶಹಬಾದ್‌ ನದೀಮ್‌, ಬವುಮಾ(32) ವಿಕೆಟ್‌ ಕಿತ್ತರು.

ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ವೇಗಿ ಉಮೇಶ್‌ ಯಾದವ್‌ ಹಾಗೂ ಜಡೇಜಾ ತಲಾ ಎರಡು ವಿಕೆಟ್‌ ಕಬಳಿಸಿದರೆ, ವೇಗಿ ಮೊಹಮದ್‌ ಶಮಿ ಮತ್ತು ನದೀಮ್‌ ಒಂದೊಂದು ವಿಕೆಟ್‌ ಪಡೆದಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ  ಗೆಲುವು ಸಾಧಿಸಿದ ಟೀಂ ಇಂಡಿಯಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು